Sandalwood: ‘ಮ್ಯಾಕ್ಸ್ʼ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕಿಚ್ಚ: “ಟ್ರೇಲರ್ ನನ್ನನ್ನು..”
Team Udayavani, Mar 9, 2024, 12:34 PM IST
ಬೆಂಗಳೂರು: ಕಿಚ್ಚ ಸುದೀಪ್ ಅವರ ʼಮ್ಯಾಕ್ಸ್ʼ ಸಿನಿಮಾ ಅನೌನ್ಸ್ ಆದ ದಿನದಿಂದ ಅಭಿಮಾನಿಗಳ ವಲಯದಲ್ಲಿ ಸಖತ್ ಸದ್ದು ಮಾಡಿದೆ. ಸಿನಿಮಾ ಶೂಟಿಂಗ್ ಹಂತದಲ್ಲೇ ಸೌಂಡ್ ಮಾಡಿದೆ.
ಬಹುಭಾಷೆಯಲ್ಲಿ ʼಮ್ಯಾಕ್ಸ್ʼ ಮೂಡಿಬರುತ್ತಿದೆ. ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ʼಬಿಗ್ ಬಾಸ್ʼ ಕಾರ್ಯಕ್ರಮದ ಸಮಯದಲ್ಲೂ ಕಿಚ್ಚ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು,ಸಿನಿಮಾ ಶೂಟಿಂಗ್ ಬಗ್ಗೆ ಕಿಚ್ಚ ಅಪ್ಡೇಟ್ ವೊಂದನ್ನು ನೀಡಿದ್ದಾರೆ. ʼʼಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಪ್ರಮುಖ ಭಾಗವನ್ನು ಪೂರ್ಣಗೊಳಿಸಲಾಗಿದೆ. ಇದುವರೆಗೆ ಶೂಟ್ ಆಗಿರುವ ದೃಶ್ಯವನ್ನು ನೋಡಿದೆ. ಚಿತ್ರತಂಡ ಪ್ರತಿಯೊಂದು ಭಾಗವನ್ನು ಹೇಗೆ ನಿಭಾಯಿಸಿದೆ ಎನ್ನುವುದನ್ನು ಹೇಳಲು ನನಗೆ ಖುಷಿಯಾಗುತ್ತದೆ. ಚಿತ್ರದ ಸ್ವಲ್ಪ ಭಾಗ ಚಿತ್ರೀಕರಣ ಬಾಕಿ ಇದೆ. ರಫ್ ಕಟ್ ಟ್ರೇಲರ್ ಸಹ ನೋಡಿದೆ ಮತ್ತು ಅದು ನನ್ನನ್ನು ಥ್ರಿಲ್ ಮಾಡಿದೆ” ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 51ನೇ ಸಿನಿಮಾದಲ್ಲಿ ʼಕುಬೇರʼನಾಗಿ ಕಾಣಿಸಿಕೊಳ್ಳಲಿದ್ದಾರೆ ಧನುಷ್; ಫಸ್ಟ್ ಲುಕ್ ಔಟ್
ಸಿನಿಮಾದಲ್ಲಿ ಹೈ-ಆಕ್ಟೇನ್ ಸ್ಟಂಟ್ ಸೀಕ್ವೆನ್ಸ್ ಇರಲಿದ್ದು,ಚೇತನ್ ಡಿ ಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ.
ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ,ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ್ ಭಟ್ ಕೂಡ ನಟಿಸಿದ್ದಾರೆ.
Finished a major portion of #Max climax.
Saw the run-through of what’s shot so far, and I’m supaa happy wth how the team has conceived every bit of the film.
A small portion of the film remains to be shot.
Also saw the rough cut if the trailer, and it thrilled me.🤗♥️— Kichcha Sudeepa (@KicchaSudeep) March 8, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.