ಸಲ್ಲು ಎದುರು ತೊಡೆ ತಟ್ಟಿದ ಕಿಚ್ಚ
"ದಬಾಂಗ್-3' ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಸುದೀಪ್ ಬಾಡಿ ಶೋ
Team Udayavani, May 15, 2019, 3:00 AM IST
ಕೆಲ ದಿನಗಳ ಹಿಂದಷ್ಟೇ “ದಬಾಂಗ್-3′ ತಂಡ ಸೇರಿಕೊಂಡ ಸುದೀಪ್, ಸಲ್ಲು ಜೊತೆಗಿನ ಫೋಟೋವೊಂದನ್ನು ಹಾಕಿ, ತಮ್ಮ ಮೊದಲ ದಿನದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಸುದೀಪ್ ಮತ್ತೆ “ದಬಾಂಗ್-3′ ಚಿತ್ರದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಫೈಟ್ ಮಾಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ ಸುದೀಪ್. ಈಗಾಗಲೆ “ಪೈಲ್ವಾನ್’ ಚಿತ್ರದಲ್ಲಿ ಅಂಗಿ ಇಲ್ಲದ ಮೈಯಲ್ಲಿ ಅಖಾಡಕ್ಕಿಳಿದಿದ್ದ ಸುದೀಪ್ ಈ ಬಾರಿ ಸಲ್ಲು ವಿರುದ್ಧವೂ ಶರ್ಟ್ ಬಿಚ್ಚಿ ಬರೀ ಮೈಯಲ್ಲಿ ಫೈಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಸಲ್ಲು ಸಿನಿಮಾಗಳಲ್ಲಿ ಬರೀ ಮೈಯಲ್ಲಿ ಸಿಕ್ಸ್‌ಪ್ಯಾಕ್ ತೋರಿಸುವ ದೃಶ್ಯವೊಂದಿರುತ್ತದೆ. ಈ ಬಾರಿ ಸುದೀಪ್ ಸಲ್ಲು ಎದುರು ಬರೀ ಮೈಯಲ್ಲಿ ಫೈಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ “ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ “ದಬಾಂಗ್-3′ ಕ್ಲೈಮ್ಯಾಕ್ಸ್ ಫೈಟ್ ನಡೆಯುತ್ತಿದೆ.
Climax shoot for #Dabangg3 has been very hectic yet a great experience. Huge set n a Humongous Team.
Bare body Fight against @BeingSalmanKhan is the least I had ever thought of doin,, everrrr?.
Yeah I do carry a Lil confidence today,, n I’m njoying it ??.— Kichcha Sudeepa (@KicchaSudeep) May 14, 2019
ಆದರೆ, ಒಳ್ಳೆಯ, ವಿನಮ್ರವಾದ ತಂಡ ಸಿಕ್ಕಿದೆ. ಸಲ್ಮಾನ್ ಖಾನ್ ಎದುರು ನಾನು ಬೇರ್ ಬಾಡಿಯಲ್ಲಿ ಫೈಟ್ ಮಾಡುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಸ್ವಲ್ಪ ವಿಶ್ವಾಸದೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ನಾನಿದ್ದನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ.
ಈ ನಡುವೆಯೇ ಸುದೀಪ್ ಅವರ “ಪೈಲ್ವಾನ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆಗಸ್ಟ್‌ನಲ್ಲಿ ತೆರೆಕಾಣುತ್ತಿದೆ. ಈ ಚಿತ್ರಕ್ಕಾಗಿ ಸುದೀಪ್ ಬಾಡಿ ಬಿಲ್ಡ್ ಮಾಡಿ, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.