Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Team Udayavani, Nov 25, 2024, 4:36 PM IST
ಆ್ಯಕ್ಷನ್ ಸಿನಿಮಾ “ರಾನಿ’ ಮೂಲಕ ಇತ್ತೀಚೆಗಷ್ಟೇ ಪ್ರೇಕ್ಷಕರ ಮುಂದೆ ಬಂದಿದ್ದ ಕಿರಣ್ ರಾಜ್ ಈಗ ಫ್ಯಾಮಿಲಿ ಡ್ರಾಮಾದ ಮೂಲಕ ಮತ್ತೂಮ್ಮೆ ಬರುತ್ತಿದ್ದಾರೆ. ಅದು “ಮೇಘ’ ಮೂಲಕ. ಈ ಚಿತ್ರ ನ.29ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಚರಣ್ ನಿರ್ದೇಶನದ ಈ ಚಿತ್ರದಲ್ಲಿ ಕಿರಣ್ ರಾಜ್-ಕಾಜಲ್ ಕುಂದರ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಯತೀಶ್ ಹೆಚ್ ಆರ್ ನಿರ್ಮಿಸಿದ್ದಾರೆ. ಟ್ರೇಲರ್ ಬಳಿಕ ಮಾತನಾಡಿದ ನಿರ್ಮಾಪಕ ಯತೀಶ್, “ನಮ್ಮ ಕೃಷಿ ಪ್ರೊಡಕ್ಷನ್ಸ್‌ನ ಚೊಚ್ಚಲ ನಿರ್ಮಾಣದ ಚಿತ್ರ ಮೇಘ. ಈ ಚಿತ್ರವನ್ನು ನೋಡಿದ ಕೆಲವರ ಜೀವನದಲ್ಲಿ ಕೆಲವು ಬದಲಾವಣೆ ಆಗಬಹುದು. ಪ್ರೀತಿಸುತ್ತಿಲ್ಲದವರು.
ಪ್ರೀತಿಸಲು ಆರಂಭಿಸಬಹುದು. ಸ್ನೇಹಿತರೊಂದಿಗೆ ಮಾತು ಬಿಟ್ಟವರು ಮಾತಾಡಲು ಶುರು ಮಾಡಬಹುದು. ಹೀಗೆ ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳ ಸಮ್ಮಿಲನದ ನಮ್ಮ ಚಿತ್ರ ಇದೇ ನವೆಂಬರ್ 29ರಂದು ತೆರೆಕಾಣುತ್ತಿದೆ’ ಎಂದರು.
“ಮೇಘ ಚಿತ್ರ ಉತ್ತಮ ಮನರಂಜನೆಯೊಂದಿಗೆ ಕೂಡಿದ ಕೌಟುಂಬಿಕ ಚಿತ್ರ. ಈ ಪರಿಶುದ್ಧ ಪ್ರೇಮ ಕಥಾನಕದ ವಿಶೇಷವೆಂದರೆ ನಾಯಕನ ಹೆಸರು ಮೇಘ. ನಾಯಕಿಯ ಹೆಸರು ಮೇಘ. ಇಬ್ಬರ ಹೆಸರು ಮೇಘ ಏಕೆ? ಅಂತ ಚಿತ್ರ ನೋಡಿದಾಗ ತಿಳಿಯುವುದು. ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆ ಈ ಕಥೆಗೆ ಸ್ಫೂರ್ತಿ’ ಎನ್ನುವುದು ನಿರ್ದೇಶಕ ಚರಣ್ ಮಾತು.
ನಾಯಕ ಕಿರಣ್ ರಾಜ್ ಮಾತನಾಡಿ, “ನಾನು ಈ ಚಿತ್ರದ ಕಥೆಯನ್ನು ಎಂಟು ಸಾರಿ ಕೇಳಿದ್ದೆ. ಆನಂತರ ನಟಿಸಲು ಒಪ್ಪಿಕೊಂಡೆ. ಪ್ರೀತಿಯಲ್ಲಿ ಜೋಶ್‌ಗಿಂತ ಅನುಭವ ಮುಖ್ಯ. ತಂದೆ ತಾಯಿ ಹಾಗೂ ಮಕ್ಕಳಲ್ಲಿ ಉತ್ತಮ ಬಾಂಧವ್ಯ ಇದ್ದರೆ ಎಷ್ಟೋ ಅನಾಹುತಗಳನ್ನು ತಡೆಯಬಹುದು ಈ ರೀತಿ ಹಲವು ವಿಷಯಗಳನ್ನು ಮೇಘ ಚಿತ್ರದಲ್ಲಿ ನಿರ್ದೇಶಕರು ಸುಂದರವಾಗಿ ನಿರೂಪಿಸಿದ್ದಾರೆ’ ಎಂದರು.
“ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ನನ್ನ ಹೆಸರು ಮೇಘ’ ಎಂದರು ನಾಯಕಿ ಕಾಜಲ್ ಕುಂದರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.