ವರಮಹಾಲಕ್ಷ್ಮೀ ಹಬ್ಬಕ್ಕೆ ಕಿರಾತಕ-2
Team Udayavani, Aug 6, 2018, 11:22 AM IST
ಯಶ್ ನಾಯಕರಾಗಿರುವ “ಕೆಜಿಎಫ್’ ಚಿತ್ರದ ಬಹುತೇಕ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಇದ್ದು, ಈ ಹಾಡಿಗೆ ಸ್ಟಾರ್ ನಟಿಯೊಬ್ಬಳು ಹೆಜ್ಜೆ ಹಾಕಲಿದ್ದಾಳೆಂಬ ಸುದ್ದಿ ಇದೆ. ಈಗ ಯಶ್ ಅವರ ಹೊಸ ಸಿನಿಮಾವೊಂದು ಸೆಟ್ಟೇರುವ ಸಿದ್ಧತೆಯಲ್ಲಿದೆ. ಅದು “ಕಿರಾತಕ-2′. “ಕಿರಾತಕ’ ಯಶ್ ಅವರಿಗೆ ಬ್ರೇಕ್ ಕೊಟ್ಟ ಚಿತ್ರ.
ಮಂಡ್ಯ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಆ ಚಿತ್ರದ ಟೈಟಲ್ ಮುಂದುವರೆದಿದ್ದು, ಯಶ್ “ಕಿರಾತಕ-2’ನಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಅನಿಲ್ ನಿರ್ದೇಶಿಸುತ್ತಿದ್ದಾರೆ. ಶರಣ್ ಅವರ “ರ್‍ಯಾಂಬೋ-2′ ಚಿತ್ರ ನಿರ್ದೇಶಿಸಿರುವ ಅನಿಲ್ “ಕಿರಾತಕ-2′ ಚಿತ್ರಕ್ಕೆ ಕಥೆ ಸಿದ್ಧಪಡಿಸಿಕೊಂಡಿದ್ದು, ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರಲಿದೆ.
ಅಂದಹಾಗೆ, “ಕಿರಾತಕ’ ಚಿತ್ರ ತಮಿಳು ಚಿತ್ರವೊಂದರ ರೀಮೇಕ್ ಆಗಿತ್ತು. ಆದರೆ, ಇದು ಪಕ್ಕಾ ಸ್ವಮೇಕ್ ಸಿನಿಮಾವಾಗಿದ್ದು, ಹೊಸ ಬಗೆಯ ಕಥೆಯೊಂದಿಗೆ ಈ ಸಿನಿಮಾ ಮಾಡಲು ಹೊರಟಿದ್ದಾರೆ ಅನಿಲ್. ಮುಹೂರ್ತವಾದ ಬೆನ್ನಲ್ಲೇ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಅಣಿಯಾಗಿದ್ದು, ಸತತವಾಗಿ ಚಿತ್ರೀಕರಣ ನಡೆಯಲಿದೆ. ಇನ್ನು ಚಿತ್ರದ ಇತರ ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.