ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್ ಶಂಕರ್ “
Team Udayavani, May 25, 2022, 2:45 PM IST
ಲೂಸ್ ಮಾದ ಯೋಗಿ ನಾಯಕರಾಗಿ ಅಭಿನಯಿಸಿರುವ “ಕಿರಿಕ್ ಶಂಕರ್’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ತೆರೆ ಕಾಣುತ್ತಿದೆ.
ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಕಿರಿಕ್ ಶಂಕರ್’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. “ಕಬ್ಜ’ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಮತ್ತು ರ್ಯಾಪರ್ ಅಲ್ ಓ.ಕೆ (ಅಲೋಕ್) “ಕಿರಿಕ್ ಶಂಕರ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನಂತರಾಜು, “ಇಡೀ ತಂಡದ ಪರಿಶ್ರಮದಿಂದ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯಮನಸ್ಸುಗಳು ಸೇರಿ ಮಾಡುವ ಕೆಲಸ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ಇದೆ. ನಮ್ಮ ಸಿನಿಮಾ ನೋಡಿ ಹಾರೈಸಿ’ ಎಂದರು.
“ಇದೇ ಏಪ್ರಿಲ್‌ನಲ್ಲಿ ಈ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿತ್ತು. ಆದರೆ ತುಂಬಾ ಸಿನಿಮಾಗಳು ಬಿಡುಗಡೆಯಾಗಿದ್ದರಿಂದ ನಮ್ಮ ಸಿನಿಮಾದ ಬಿಡುಗಡೆಯನ್ನುಕೆಲಕಾಲ ಮುಂದೂಡಬೇಕಾಯಿತು’ ಎನ್ನುವುದು ನಿರ್ಮಾಪಕ ಎಂ. ಎನ್. ಕುಮಾರ್ ಮಾತು.
ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಟ ಯೋಗಿ, “ಅಣ್ಣಾವ್ರ ಬ್ಯಾನರ್ ನಂತರ ನಾನು ಕೆಲಸ ಮಾಡಿದ ದೊಡ್ಡ ಬ್ಯಾನರ್ ಇದು. ಸಾಕಷ್ಟು ಹಿಟ್‌ಸಿನಿಮಾಗಳನ್ನು ಕೊಟ್ಟ ನಿರ್ದೇಶಕರು,ಅನುಭವಿ ನಿರ್ಮಾಪಕರ ಜೊತೆ ಕೆಲಸಮಾಡಿದ್ದು ನನಗೂ ಖುಷಿ ತಂದಿದೆ. ಎಲ್ಲರ ಪರಿಶ್ರಮದಿಂದ ಸಿನಿಮಾಚೆನ್ನಾಗಿ ಬಂದಿದೆ. ಸಿನಿಮಾ ಮತ್ತು ನನ್ನ ಪಾತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ’ ಎಂದರು.
ನಾಯಕಿ ಅದ್ವಿಕಾ ರೆಡ್ಡಿ, ನಟ ರಿತೇಶ್, ಸಂಕಲನಕಾರ ನಾಗೇಂದ್ರ ಅರಸ್,ಸಂಗೀತ ನಿರ್ದೇಶಕ ವೀರ ಸಮರ್ಥ್,ಛಾಯಾಗ್ರಾಹಕ ಜೆ. ಜಿ ಕೃಷ್ಣ ಹಾಗೂಕಾರ್ಯಕಾರಿ ನಿರ್ಮಾಪಕಯೋಗೀಶ್ ಹುಣಸೂರು “ಕಿರಿಕ್ ಶಂಕರ್’ ಸಿನಿಮಾದ ಅನುಭವಗಳನ್ನು ಹಂಚಿಕೊಂಡು, ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.