ಕನ್ನಡದ ಕಿರಿಕ್, ತೆಲುಗಿನಲ್ಲಿ ಕಿರ್ರಕ್
Team Udayavani, Dec 2, 2017, 6:34 PM IST
ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ “ಕಿರಿಕ್ ಪಾರ್ಟಿ’ ಚಿತ್ರವು ಬೇರೆ ಭಾಷೆಗಳೆಗೆ ರೀಮೇಕ್ ಆಗುತ್ತದೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಯಾವೊಂದು ಭಾಷೆಯಲ್ಲೂ ಇದುವರೆಗೂ ರೀಮೇಕ್ ಆಗಿರಲಿಲ್ಲ. ಈಗ ಕೊನೆಗೆ “ಕಿರಿಕ್ ಪಾರ್ಟಿ’, ತೆಲುಗಿನಲ್ಲಿ “ಕಿರ್ರಕ್ ಪಾರ್ಟಿ’ಯಾಗಿ ರೀಮೇಕ್ ಆಗುವುದಕ್ಕೆ ಸಜ್ಜಾಗಿದೆ. ಹೌದು, “ಕಿರಿಕ್ ಪಾರ್ಟಿ’ಯೂ ತೆಲುಗಿನಲ್ಲಿ “ಕಿರ್ರಕ್ ಪಾರ್ಟಿ’ಯಾಗಿ ತಯಾರಾಗಲಿದ್ದು, ಶನಿವಾರ ಸಂಜೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಶರಣ್ ಕೋಪಿಶೆಟ್ಟಿ ಎನ್ನುವವರು ನಿರ್ದೇಶಿಸುತ್ತಿದ್ದು, ಅನಿಲ್ ಸಂಕರ ಅವರು ಎ.ಕೆ. ಎಂಟರ್‌ಟೈನ್‌ಮೆಂಟ್ಸ್‌ನಡಿ ನಿರ್ಮಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಕಥೆಯನ್ನು ಇಟ್ಟುಕೊಂಡೇ ಸುಧೀರ್ ವರ್ಮ ಮತ್ತು ಚಂದೂ ಮೊಂಡೇಟಿ ಚಿತ್ರಕಥೆ ರಚಿಸಿದ್ದಾರೆ. ಇನ್ನು “ಹ್ಯಾಪಿ ಡೇಸ್’ ಚಿತ್ರದ ಮೂಲಕ ಹೀರೋ ಆದ ನಿಖಿಲ್ ಸಿದ್ಧಾರ್ಥ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿಯೇ ಸುಮಾರು 12 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ ನಿಖಿಲ್.
ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಛಾಯಾಗ್ರಾಹಕ ಅದ್ವೆ„ತ ಗುರುಮೂರ್ತಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ಇದು ರಕ್ಷಿತ್ ಶೆಟ್ಟಿ ಅವರ “ಕಿರಿಕ್ ಪಾರ್ಟಿ’ ತೆಲುಗಿಗೆ ರೀಮೇಕ್ ಆಗುತ್ತಿರುವ ಕಥೆಯಾದರೆ, ಈಗಾಗಲೇ ತಮಿಳಿಗೆ ರೀಮೇಕ್ ಆಗಿರುವ “ಉಳಿದಿರುವ ಕಂಡಂತೆ’ ಚಿತ್ರವು ಮುಂದಿನ ವಾರ ಬಿಡುಗಡೆಯಾಗುತ್ತಿದೆ.
“ಉಳಿದವರು ಕಂಡಂತೆ’ ಚಿತ್ರವನ್ನು ಗೌತಮ್ ರಾಮಚಂದ್ರನ್ ತಮಿಳಿಗೆ ರೀಮೇಕ್ ಮಾಡುತ್ತಿರುವುದು, ರಕ್ಷಿತ್ ಪಾತ್ರದಲ್ಲಿ ಮಲಯಾಳಂ ನಟ ನಿವಿನ್ ಪೌಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. “ರಿಚ್ಚಿ’ ಎಂಬ ಹೆಸರಿನ ಚಿತ್ರವು ಡಿಸೆಂಬರ್ ಎಂಟಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕನ್ನಡದ ಶ್ರದ್ಧಾ ಶ್ರೀನಾಥ್ ನಟಿಸಿರುವುದು. ಕನ್ನಡದಲ್ಲಿ ಶೀತಲ್ ಶೆಟ್ಟಿ ಮಾಡಿದ ಪಾತ್ರವನ್ನು ತಮಿಳಿನಲ್ಲಿ ಶ್ರದ್ಧಾ ಮಾಡಿದ್ದಾರೆ. ಮೂಲ ಕನ್ನಡ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಅಜನೀಶ್ ಲೋಕನಾಥ್, ಅವರೇ ತಮಿಳಿನಲ್ಲೂ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.