ಕಿರಿಕ್ ಪಾರ್ಟಿ ಕೆವೈಟಿಎ ಪ್ರೊಡಕ್ಷನ್ಸ್ಗೆ
Team Udayavani, Jun 27, 2017, 10:28 AM IST
ಹಿಂದಿ, ತಮಿಳು, ತೆಲುಗು ಭಾಷೆಗಳಿಗೆ “ಕಿರಿಕ್ ಪಾರ್ಟಿ’ ಚಿತ್ರದ ರೀಮೇಕ್ ರೈಟ್ಸ್ ಮಾರಾಟವಾಗಿದ್ದು, ಈ ಮೂರು ಭಾಷೆಗಳಿಂದ ಸುಮಾರು 2 ಕೋಟಿ ರೂಪಾಯಿ “ಪರಂವಾ’ ಸ್ಟುಡಿಯೋ ಅಕೌಂಟ್ಗೆ ಸೇರಿದ್ದು ಹಳೆಯ ವಿಷಯ. ಕೆಲವು ದಿನಗಳ ಹಿಂದೆಯೇ ರಕ್ಷಿತ್ ಶೆಟ್ಟಿ, ಈ ವಿಷಯವಾಗಿ ಹೇಳಿಕೊಂಡಿದ್ದರು. ಆದರೆ, ಆ ಹಕ್ಕುಗಳನ್ನು ಯಾರು ತೆಗೆದುಕೊಂಡಿದ್ದಾರೆ ಎಂಬ ವಿಷಯವನ್ನು ಅವರು ಹೇಳಿರಲಿಲ್ಲ. ಈಗ ಅದನ್ನು ಹೇಳಿದ್ದಾರೆ.
ಅಂದಹಾಗೆ, “ಕಿರಿಕ್ ಪಾರ್ಟಿ’ಯ ರೀಮೇಕ್ ಹಕ್ಕುಗಳನ್ನು ಪಡೆದಿರುವುದು ಕೆವೈಟಿಎ ಪ್ರೊಡಕ್ಷನ್ಸ್ ಎಂಬ ಸಂಸ್ಥೆ. ಈ ಸಂಸ್ಥೆ ಈಗಾಗಲೇ ಸೈಫ್ ಅಲಿ ಖಾನ್ ಅಭಿನಯದ “ಬಾಝಾರ್’, ಜಾನ್ ಅಬ್ರಹಾಂ ಅಭಿನಯದ “ಪರಮಾಣು – ದಿ ಸ್ಟೋರಿ ಆಫ್ ಪೋಖಾನ್’ ಮತ್ತು ಸುಶಾಂತ್ ಸಿಂಗ್ ರಜಪೂತ್ ಅಭಿನಯದ “ರೋಮಿಯೋ ಅಕºರ್ ವಾಲ್ಟರ್’ ಚಿತ್ರಗಳನ್ನು ನಿರ್ಮಿಸುತ್ತಿದೆ.
ಈಗ ರಕ್ಷಿತ್ ಅಭಿನಯದ ಮತ್ತು ನಿರ್ಮಾಣದ “ಕಿರಿಕ್ ಪಾರ್ಟಿ’ ಚಿತ್ರದ ರೀಮೇಕ್ ಹಕ್ಕುಗಳನ್ನೂ ತನ್ನದಾಗಿಸಿಕೊಂಡಿದೆ. ಈ ಚಿತ್ರದ ರೀಮೇಕ್ನಲ್ಲಿ ಯಾರು ಅಭಿನಯಿಸುತ್ತಾರೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ತೆಲುಗು ರೀಮೇಕ್ ಸಹ ಇದೇ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆಯಂತೆ.
ಅಂದಹಾಗೆ, ರಕ್ಷಿತ್ ಅಭಿನಯದ ಎರಡನೆಯ ಚಿತ್ರ ಇದೀಗ ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದೆ. ಇದಕ್ಕೂ ಮುನ್ನ, ರಕ್ಷಿತ್ ನಿರ್ದೇಶನದ “ಉಳಿದವರು ಕಂಡಂತೆ’ ಚಿತ್ರವು ತಮಿಳಿನಗೆ ರೀಮೇಕ್ ಆಗಿದ್ದು, “ರಿಚ್ಚಿ’ ಎಂಬ ಹೆಸರಿನ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.