ಯುಟ್ಯೂಬ್‌ನಲ್ಲಿ “ಕೈಟ್ ಬ್ರದರ್ಸ್’ ಸಾಂಗ್ ಹಾರಾಟ
ಕನ್ನಡ ಶಾಲೆ ಹಿನ್ನೆಲೆಯ ಹೊಸಬಗೆಯ ಚಿತ್ರ ರೆಡಿ
Team Udayavani, Nov 10, 2019, 4:59 AM IST
ಈ ಹಿಂದೆ “ಕೈಟ್ ಬ್ರದರ್ಸ್’ ಚಿತ್ರದ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಹಾಡು ಯುಟ್ಯೂಬ್‌ನಲ್ಲಿ ಒಳ್ಳೆಯ ಮೆಚ್ಚುಗೆ ಪಡೆದಿದೆ. ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಬಿ.ಎಸ್.ಹಾಗು ಮಂಜುನಾಥ್ ಬಗಾಡೆ ನಿರ್ಮಿಸಿರುವ ಚಿತ್ರವನ್ನು ವಿರೇನ್ ಸಾಗರ್ ಬಗಾಡೆ ನಿರ್ದೇಶನ ಮಾಡಿದ್ದಾರೆ.
ಇದು ಇವರ ಮೊದಲ ನಿರ್ದೇಶನದ ಚಿತ್ರ. ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮೊದಲು ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಬರೆದಿರುವ “ಅ ಅರಸ ಆ ಆನೆ…’ ಎಂಬ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಸದ್ಯಕ್ಕೆ ಆ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಹಾಡಿಗೆ ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಧ್ವನಿಯಾಗಿದ್ದಾರೆ.
“ಕೈಟ್ ಬ್ರದರ್ಸ್’ ಒಂದು ಹಳ್ಳಿಗಾಡಿನ ಬದುಕು ಮತ್ತು ಅಲ್ಲಿಯ ಮಕ್ಕಳ ಬಾಲ್ಯದ ಕುರಿತಾಗಿದೆ. ಎಲ್ಲಕ್ಕಿಂತ ಮುಕ್ಯವಾಗಿ ಶಿಕ್ಷಣ ಹಕ್ಕು, ಸ್ನೇಹ ಮತ್ತು ಮಕ್ಕಳ ಸಾಹಸಗಾಥೆಯ ಕಥೆಯನ್ನು ಮನೋರಂಜನಾತ್ಮಕವಾಗಿ ಹೇಳಲಾಗಿದೆ. ಇದು ಕನ್ನಡ ಶಾಲೆಯ ಕುರಿತ ವಿಷಯ ಹೊಂದಿದ್ದು, ಗಾಳಿಪಟ ಚಿತ್ರದ ಪ್ರಮುಖ ಆಕರ್ಷಣೆ. ಇಲ್ಲಿ ಗೆಳೆತನ, ಛಲ ಹಾಗು ಮಾನವೀಯ ಮೌಲ್ಯಗಳ ಅಂಶಗಳು ಹೈಲೈಟ್ ಆಗಿದ್ದು, ಬಹುತೇಕ ಹೊಸ ಪ್ರತಿಭೆಗಳು ತೆರೆಯ ಮೇಲೆ ಕಾಣಿಸಿಕೊಂಡಿವೆ.
ವಿನೋದ್ ಬಗಾಡೆ, ಅನಂತ್ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯ ಹರಿಹರ, ಅಭೀಷೇಕ್, ಪ್ರಭು ಹಂಚಿನಾಳ, ಅನಸೂಯ ಹಂಚಿನಾಳ, ರಾಜೀವ್ ಸಿಂಗ್ ಹಲವಾಯಿ, ಮುಕುಂದ ಮೈಗೂರು, ಕಿರಣ್ ಬಗಾಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನೀಶ್ ಚೆರಿಯನ್ ಸಂಗೀತವಿದೆ. “ಸಿಂಪಲ್’ ಸುನಿ ಹಾಗೂ ವಿರೇನ್ ಸಾಗರ್ ಬಗಾಡೆ ಸಾಹಿತ್ಯವಿದೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಸಂತೋಷ್ ರಾಧಕೃಷ್ಣನ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.