ನಗಿಸಲು ‘ಕೊಡೆ ಮುರುಗ’ ರೆಡಿ: ಏ.09 ಬಿಡುಗಡೆ ಪಕ್ಕಾ
ಸಿದ್ಧಸೂತ್ರ ಬಿಟ್ಟ ವಿಭಿನ್ನ ಕಥಾಹಂದರ
Team Udayavani, Apr 5, 2021, 10:06 AM IST
ಬೆಂಗಳೂರು; ಸರ್ಕಾರ ಶೇ 50 ಸೀಟು ಭರ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡಿವೆ. ಆದರೆ, “ಕೊಡೆ ಮುರುಗ’ ಚಿತ್ರ ಮಾತ್ರ ಧೈರ್ಯದಿಂದ ಅಂದು ಕೊಂಡಂತೆ ಏ.09ರಂದು ಚಿತ್ರಬಿಡುಗಡೆ ಮಾಡುತ್ತಿದೆ. ಈ ಮೂಲಕ ಸಿನಿಮಾದ ಕಂಟೆಂಟ್ ಅನ್ನು ಚಿತ್ರತಂಡ ನಂಬಿದೆ.
ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ಚಿತ್ರದ ಡೈಲಾಗ್ ಗಳಿಗೆ ಸಿನಿಮಾ ಪ್ರಿಯರು ಫಿದಾ ಆಗಿದ್ದಾರೆ. ಹೀರೋಯಿಸಂ ಕಥೆಗಳು, ರೆಗ್ಯುಲರ್ ಫಾರ್ಮೆಟ್ ಕಮರ್ಷಿಯಲ್ ಸಿನಿಮಾಗಳನ್ನು ಬಯಸದೇ, ನೈಜತೆಗೆ ಹಾಗೂ ಅನಾವಶ್ಯಕ ಬಿಲ್ಡಪ್ ಗಳಿಂದ ಮುಕ್ತವಾಗಿ ಭರಪೂರ ಮನರಂಜನೆ ನೀಡುವ ಸಿನಿಮಾವಾಗಿ “ಕೊಡೆ ಮುರುಗ’ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ಮಾತು ಈಗಾಗಲೇ ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ.
ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.
ಇದನ್ನೂ ಓದಿ: ಪ್ರೇಕ್ಷಕರ ‘ಸನಿಹಕೆ’ ಬರಲು ಧನ್ಯಾ ರಾಮ್‌ಕುಮಾರ್ ಕಾತುರ
ಚಿತ್ರವನ್ನು ಸುಬ್ರಮಣ್ಯ ಪ್ರಸಾದ್ ನಿರ್ದೇಶಿಸಿದ್ದಾರೆ. ಕೊರೊನಾ ಭಯದಲ್ಲಿರುವ ಜನರಿಗೆ “ಕೊಡೆ ಮುರುಗ’ ನಗುವಿನ ಔಷಧಿ ನೀಡಲಿದ್ದಾನೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರವನ್ನು ರವಿಕುಮಾರ್ ನಿರ್ಮಿಸಿದ್ದಾರೆ. ಇವರಿಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರವಿಕುಮಾರ್, “ಮೊದಲು ಸುಬ್ರಮಣ್ಯ ಅವರು “ಪ್ರೊಡ್ಯೂಸರ್ ಪಿಚ್’ ವಿಡಿಯೋ ಮಾಡಿದ್ದರು. ಸಿನಿಮಾ ಹೇಗಿರುತ್ತೋ ಅದೇ ರೀತಿಯ ಅರ್ಧ ಗಂಟೆಯ ವಿಡಿಯೋ ಅದು. ಅದರ ಮೈಕಿಂಗ್, ಟೈಮಿಂಗ್ ನೋಡಿ ಫಿದಾ ಆಗಿಬಿಟ್ಟೆ. ನಂತರ “ಕೊಡೆ ಮುರುಗ’ ಕೈಗೆತ್ತಿಕೊಂಡೆ. ಅಶೋಕ್ ಶಿರಾಲಿ ನನ್ನೊಟ್ಟಿಗೆ ನಿರ್ಮಾಣದಲ್ಲಿ ಸಾಥ್ ಕೊಟ್ಟರು’ ಎನ್ನುವುದು ನಿರ್ಮಾಪಕ ರವಿಕುಮಾರ್ ಮಾತು.
ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾ ನೋಡಿದವರು ನಕ್ಕು ಖುಷಿ ಪಟ್ಟಿರುವುದರಿಂದ ಪ್ರೇಕ್ಷಕ ಕೂಡಾ ಸಿನಿಮಾವನ್ನು ಇಷ್ಟ ಪಡುತ್ತಾರೆ ಎಂಬ ವಿಶ್ವಾಸ ಚಿತ್ರ ತಂಡಕ್ಕಿದೆ. ಚಿತ್ರದಲ್ಲಿ ಅರವಿಂದ ರಾವ್, ರಾಕ್‌ಲೈನ್ ಸುಧಾಕರ್, ಕುರಿ ಪ್ರತಾಪ್, ಸ್ವಾತಿ ಗುರುದತ್, ಅಶೋಕ್, ಸ್ವಯಂವರ ಚಂದ್ರು, ತುಮಕೂರು ಮೋಹನ್, ಮೋಹನ್ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಕ್ಯಾಮೆರಾ ಹಿಡಿದಿದ್ದು, ಎಂ.ಎಸ್.ತ್ಯಾಗರಾಜ ಸಂಗೀತ ಸಂಯೋಜಿದ್ದಾರೆ.
ಇದನ್ನೂ ಓದಿ: ಈ ರಾಶಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ: ದಿನಭವಿಷ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.