ಕೆಂಪೇಗೌಡ-2 ! ಕೋಮಲ್‌ ನಾಯಕ 


Team Udayavani, Apr 16, 2017, 3:14 PM IST

6554.jpg

ಕೋಮಲ್‌ ಸ್ಲಿಮ್‌ ಆಗಿದ್ದಾರೆ. ಆದರೂ ಯಾಕೆ ಸಿನಿಮಾ ಮಾಡುತ್ತಿಲ್ಲ. ಅವರ ಉದ್ದೇಶವೇನು, ಯಾಕಾಗಿ ಸುಮ್ಮನಿದ್ದಾರೆ ಎಂಬೆಲ್ಲಾ ಪ್ರಶ್ನೆಗಳು ಎದ್ದಿದ್ದವು. ಆದರೆ, ಕೋಮಲ್‌ ಮಾತ್ರ ಏನೂ ಮಾತನಾಡದೇ ಹೊಸ ಮನೆಯಲ್ಲಿ ಖುಷಿ ಖುಷಿಯಾಗಿದ್ದರು. ಆ ಖುಷಿಯೊಳಗೆ “ಕೆಂಪೇಗೌಡ-2′ ಕೂಡಾ ಸೇರಿತ್ತು. “ಕೆಂಪೇಗೌಡ-2′ ಸಿನಿಮಾ ಲಾಂಚ್‌ ಆಗಿದ್ದು, ಕೋಮಲ್‌ ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೋಮಲ್‌ ಇಲ್ಲಿ ಮಾತನಾಡಿದ್ದಾರೆ … 

ಒಂದೂವರೆ ವರ್ಷದ ಗ್ಯಾಪ್‌ನಲ್ಲಿ ಏನೇನ್‌ ಮಾಡಿದ್ರಿ?
– ಒಂದಷ್ಟು ಕಮಿಟ್‌ಮೆಂಟ್‌ಗಳಿದ್ದವು. ಅವೆಲ್ಲವನ್ನು ಮುಗಿಸಿಕೊಂಡೆ. ಜೊತೆಗೆ ಸಾಕಷ್ಟು ವಕೌìಟ್‌ ಮಾಡಿ ಫಿಟ್‌ ಆದೆ. 21 ಕೆಜಿ ತೂಕ ಇಳಿಸಿಕೊಂಡೆ. ಶಂಕರೇ ಗೌಡ್ರು, ಶಂಕರ್‌ ರೆಡ್ಡಿ ಸಿಕ್ಕಿದ್ರು. ನನ್ನನ್ನು ನೋಡಿ ಅವರಿಗೆ ಶಾಕ್‌ ಆಯಿತು. ಆ ವೇಳೆ ಸಿನಿಮಾ ಮಾತುಕತೆಯಾಗಿ 6-7 ತಿಂಗಳು ಕಥೆಯಲ್ಲಿ ಕುಳಿತುಕೊಂಡೆವು. ಈಗ ಸಿನಿಮಾ ಸೆಟ್ಟೇರಿದೆ.

 “ಕೆಂಪೇಗೌಡ-2′ “ಸಿಂಗಂ-2′ ರೀಮೇಕ್‌ ಅಲ್ವಾ?
– ಇದು ರೀಮೇಕ್‌ ಸಿನಿಮಾ ಅಲ್ಲ. ಪಕ್ಕಾ ಒರಿಜಿನಲ್‌ ಸಿನಿಮಾ. ಅದೇ ಕಾರಣಕ್ಕೆ ಚಿತ್ರಕ್ಕೆ
“ಪಕ್ಕಾ ಒರಿಜಿನಲ್‌’ ಎಂಬ ಟ್ಯಾಗ್‌ಲೈನ್‌ ಇದೆ. ಸಹಜವಾಗಿ, ಸಿನಿಮ್ಯಾಟಿಕ್‌ ಇಲ್ಲದೇ ಈ
ಸಿನಿಮಾ ಮೂಡಿಬರುತ್ತದೆ.

“ಕೆಂಪೇಗೌಡ-2′ ಚಿತ್ರದ ವಿಶೇಷತೆ ಏನು?
– ಡಿಜಿಟಲ್‌ ಇಂಡಿಯಾದಲ್ಲಿ ಸೈಬರ್‌ ಕ್ರಿಮಿನಲ್‌ಗ‌ಳು ಕೂಡಾ ಜಾಸ್ತಿಯಾಗುತ್ತಿದ್ದಾರೆ. ಬೇರೆ ಕ್ರಿಮಿನಲ್‌ ಗಳಿಗಿಂತ ಆ ತರಹದ ಕ್ರಿಮಿನಲ್‌ಗ‌ಳನ್ನು ಹಿಡಿಯೋದು ಪೊಲೀಸ್‌ ಇಲಾಖೆಗೆ ಸವಾಲು. ಇಂತಹ ಸಂದರ್ಭದಲ್ಲಿ ನಾಯಕ ಯಾವ ತರಹ ಸೈಬರ್‌ ಕ್ರಿಮಿನಲ್‌ ಸೇರಿದಂತೆ ಇತರ ಕ್ರಿಮಿನಲ್‌ಗ‌ಳನ್ನು ಮಟ್ಟ ಹಾಕುತ್ತಾನೆ ಎಂಬುದು ಕಥೆ.

 ಪಾತ್ರಕ್ಕೆ ಸಿದ್ಧತೆ ಹೇಗಿತ್ತು?
– ಚಿತ್ರವನ್ನು ತುಂಬಾ ಸಹಜವಾಗಿ, ನೈಜತೆಯೊಂದಿಗೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಅದು ನಟನೆಯಿಂದ ಹಿಡಿದು ಕಾನೂನು ಅಂಶಗಳವರೆಗೂ. ಹಾಗಾಗಿಯೇ ಪೊಲೀಸ್‌ ಆಫೀಸರ್‌ಗಳಲ್ಲಿ ಮಾತನಾಡಿ, ಚಿತ್ರಕ್ಕೆ ಪೂರಕವಾದ ಕಾನೂನಿನ ಅರಿವು, ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒಂದು ಅಂಶದಲ್ಲೂ ತಪ್ಪು ಕಾಣಬಾರದು. ಈಗ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಏನೇ ತಪ್ಪಾದರೂ ಬೇಗನೇ ಗುರುತಿಸುತ್ತಾರೆ.

 ಇದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾನಾ?
– ಇಲ್ಲ, ಇದು ಔಟ್‌ ಅಂಡ್‌ ಔಟ್‌ ಕಾಪ್‌ ಸಿನಿಮಾ. ತುಂಬಾ ಸಹಜವಾಗುತ್ತದೆ. ನಾವು ದಿನನಿತ್ಯ ನೋಡುವ ಪೊಲೀಸ್‌ ಅಧಿಕಾರಿ ಹೇಗಿರುತ್ತಾನೆ ಅದೇ ರೀತಿ ಇಲ್ಲೂ ಇದೆ. ಸುಖಾಸುಮ್ಮನೆ ಚೇಸಿಂಗ್‌, ಹೊಡೆದಾಟವಿಲ್ಲ.

 ಕೋಮಲ್‌ ಕಾಮಿಡಿ ಇಲ್ಲಿ ಸಿಗಲ್ವಾ?
– ನಾವು ಉದ್ದೇಶಪೂರ್ವಕವಾಗಿ ಕಾಮಿಡಿ ಟ್ರ್ಯಾಕ್‌ ಇಟ್ಟಿಲ್ಲ. ಪೊಲೀಸರು ಕೂಡಾ ಮನುಷ್ಯರೇ. ಅವರಲ್ಲೂ ಹಾಸ್ಯಪ್ರಜ್ಞೆ ಇರುತ್ತದೆ. ಅವರು ತಮ್ಮ ಕುಟುಂಬದ ಜೊತೆ ದೇವಸ್ಥಾನ, ಕಾರ್ಯಕ್ರಮಗಳಿಗೆ ಹೋಗುತ್ತಾರೆ, ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಾರೆ.ಆ ಸಂದರ್ಭದಲ್ಲಿ ಎಷ್ಟೋ ಜೋಕ್‌ ಹುಟ್ಟಿಕೊಳ್ಳುತ್ತವೆ. ಆ ತರಹದ ಕಾಮಿಡಿ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ.

 ಇದು ನಿಮ್ಮ ಕಂಬ್ಯಾಕ್‌ ಸಿನಿಮಾ ಆಗುತ್ತಾ?
– ಅದು ಗೊತ್ತಿಲ್ಲ. ಆದರೆ, ನಾನು ತುಂಬಾ ಚೂಸಿ. ಸಿನಿಮಾ ಮಾಡಲೇಬೇಕೆಂಬ ಉದ್ದೇಶವಿದ್ದಿದ್ದರೆ ಇಷ್ಟೊತ್ತಿಗೆ ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದೆ. ಆದರೆ ನನಗೆ ಇಷ್ಟವಾದ ಕಥೆಗಳನ್ನಷ್ಟೇ ಮಾಡುತ್ತಾ ಬಂದಿದ್ದೇನೆ. ಇದು ಕೂಡಾ ನನಗೆ ಇಷ್ಟವಾದ ಕಥೆ, ಮಾಡುತ್ತಿದ್ದೇನೆ.

 “ಕೆಂಪೇಗೌಡ’ದಲ್ಲಿ ಸುದೀಪ್‌ ಇದ್ದರು. “ಕೆಂಪೇಗೌಡ-2’ನಲ್ಲಿ ನೀವು. ಈ ಬಗ್ಗೆ
ಏನಂತಿರಿ?

 ಆ ಚಿತ್ರವನ್ನು ಶಂಕರೇಗೌಡ ನಿರ್ಮಿಸಿದ್ದರು. ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ಇಲ್ಲಿ ನಾನು ನಟಿಸುತ್ತಿದ್ದೇನೆ ಅಷ್ಟೇ. ಅದು ಬಿಟ್ಟು ಬೇರೇನೂ ಹೇಳಲಾರೆ. 

ಕೋಮಲ್‌ ರಿಂದ ಮುಂದೆ ಬೇರೆ ತರಹದ ಸಿನಿಮಾ ನಿರೀಕ್ಷಿಸಬಹುದಾ?
 ನಾವು ಏನೇ ಮಾಡುವುದಾದರೂ ಎಂಟರ್‌ಟೈನ್‌ಮೆಂಟ್‌ ಬಿಟ್ಟು ಮಾಡೋಕ್ಕಾಗಲ್ಲ. ಆ ಎಂಟರ್‌ಟೈನ್‌ ಮೆಂಟ್‌ನ ಬೇರೆ ತರಹ ತೋರಿಸಬಹು ದಷ್ಟೇ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.

ಟಾಪ್ ನ್ಯೂಸ್

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.