Kannada Cinema; ‘ಕುಟೀರ’ದೊಳಗೆ ಕೋಮಲ್‌ ಎಂಟ್ರಿ’: ಪ್ರಿಯಾಂಕಾ ಸಾಥ್


Team Udayavani, Feb 22, 2024, 11:54 AM IST

komal’s new movie kuteera

ನಟ ಕೋಮಲ್‌ ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಅವುಗಳ ಪೈಕಿ ಒಂದಾಗಿರುವ “ಕುಟೀರ’ ಸಿನಿಮಾ ಇತ್ತೀಚೆಗೆ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ. “ಕುಟೀರ’ ಸಿನಿಮಾವನ್ನು ಅನೂಪ್‌ ಆ್ಯಂಟೋನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, “ಕಂಸಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ಮಧು ಮರಿಸ್ವಾಮಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

“ಕುಟೀರ’ ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟ ಕೋಮಲ್, “ಇದೊಂದು ಹಾರರ್‌ ಕಾಮಿಡಿ ಶೈಲಿಯ ಸಿನಿಮಾ. “ಕುಟೀರ’ ಎಂದರೆ ಪಾಳು ಬಿದ್ದಿರುವ ಮನೆ. ಆ ಮನೆಯಲ್ಲಿ ನಡೆಯುವ ಚೇಷ್ಟೆಗಳ ಮೇಲೆ ಈ ಸಿನಿಮಾದ ಕಥೆ ನಡೆಯುತ್ತದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ಶೈಲಿಯ ಸಿನಿಮಾಗಳು ನನಗೆ ತುಂಬ ಇಷ್ಟ. ಹಾರರ್‌-ಕಾಮಿಡಿ ಶೈಲಿಯಲ್ಲಿ ನಾನು ಅಭಿನಯಿಸುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.  ಅಂದಹಾಗೆ, ಈ ಸಿನಿಮಾದಲ್ಲಿ “ಒಂದಲ್ಲ, ಎರಡಲ್ಲ ಬರೋಬ್ಬರಿ ಒಂದು ಡಜನ್‌ ದೆವ್ವಗಳ ಜೊತೆಗೆ ಕಣ್ಣಾಮುಚ್ಚಾಲೆ ಇದೆ’ ಎನ್ನುತ್ತಾರೆ ಕೋಮಲ್.

“ಸಾಮಾನ್ಯವಾಗಿ ಹಾರರ್‌ ಸಿನಿಮಾಗಳೆಂದರೆ, ಒಂದು ಮನೆಯಲ್ಲಿ ಕೆಲವರು ಲಾಕ್‌ ಆಗುತ್ತಾರೆ ಮತ್ತು ಅಲ್ಲಿ ದೆವ್ವದ ಚೇಷ್ಟೆ ಶುರುವಾಗುತ್ತದೆ. ಆದರೆ, ಇಲ್ಲಿ ಡಜನ್‌ ದೆವ್ವಗಳಿವೆ. ಒಂದು ದೆವ್ವವೇ ಅಷ್ಟು ಕಾಟ ಕೊಟ್ಟರೆ, ಡಜನ್‌ ದೆವ್ವಗಳು ಏನೆಲ್ಲಾ ಮಾಡಬಹುದು ಯೋಚಿಸಿ. ಇಲ್ಲಿ ಹಾರರ್‌ ಮತ್ತು ಕಾಮಿಡಿ ಜೊತೆಗೆ ವಿಡಂಬನೆ ಸಹ ಇದೆ. ಹಾಲಿವುಡ್‌ನ‌ಲ್ಲಿ “ಸ್ಕೇರಿ ಮೂವಿ’ ತರಹದ ಹಾರರ್‌ ಸರಣಿಗಳು ಬಂದಿವೆ. ಇಲ್ಲೂ ಸಹ ಕಥೆ ಯನ್ನು ಪಾರ್ಟ್‌ ಬೈ ಪಾರ್ಟ್‌ ಮಾಡಬಹುದು. ಸಿನಿಮಾದಲ್ಲಿ ಗ್ರಾಫಿಕ್ಸ್‌ ಹೆಚ್ಚಿರುತ್ತದೆ. ಒಂದು ಸೆಟ್‌ ಹಾಕಿ, ಗ್ರೀನ್‌ ಮ್ಯಾಟ್‌ ಹಾಕಿ ಶೂಟಿಂಗ್‌ ಮಾಡುತ್ತಿದ್ದೇವೆ’ ಎಂಬುದು ಕೋಮಲ್‌ ಮಾತು.

“ಕುಟೀರ’ ಸಿನಿಮಾದಲ್ಲಿ ಕೋಮಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್‌ ನಟಿಸುತ್ತಿದ್ದಾರೆ. ಮಿಕ್ಕಂತೆ ಅವಿನಾಶ್‌, ಯಶ್‌ ಶೆಟ್ಟಿ, ಕಾಕ್ರೋಚ್‌ ಸುಧಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸಿನಿಮಾದ ಹಾಡುಗಳಿಗೆ ಬಿ. ಜೆ. ಭರತ್‌ ಸಂಗೀತ ಸಂಯೋಜಿಸುತ್ತಿದ್ದು, ಅರುಣ್‌ ಸುರೇಶ್‌ ಛಾಯಾಗ್ರಹಣ, ಎನ್‌. ಎಂ. ವಿಶ್ವ ಸಂಕಲನವಿದೆ. ಅಂದಹಾಗೆ, ಇದೇ ಮಾರ್ಚ್‌ ಎರಡನೇ ವಾರದಿಂದ “ಕುಟೀರ’ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಪ್ಲಾನ್‌ ಹಾಕಿಕೊಂಡಿದೆ ಚಿತ್ರತಂಡ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.