‘ಕೊನೆಯ ನಿಲ್ದಾಣ’ ಚಿತ್ರಕ್ಕೆ ಮುಹೂರ್ತ
Team Udayavani, Mar 7, 2023, 3:50 PM IST
“ಕೊನೆಯ ನಿಲ್ದಾಣ’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನ ವಿದ್ಯಾರಣ್ಯಪುರ ಲಿಂಗಾಯಿತರ ರುದ್ರಭೂಮಿಯಲ್ಲಿ ಸರಳವಾಗಿ ನಡೆಯಿತು.ಚಿತ್ರಕ್ಕೆ “ಹೆಣ್ಣು ಅಬಲೆಯಲ್ಲ’ ಎಂಬ ಅಡಿಬರಹವಿದೆ.
ಅಮೆರಿಕಾದಲ್ಲಿರುವ ಕನ್ನಡಿಗ ಹರೀಶ್.ಎಸ್.ಕೋಲಾರ ನಿರ್ಮಾಣ ಮಾಡುತ್ತಿದ್ದು, ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಆಕ್ಷನ್ ಕಟ್ ಹೇಳುವ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೂರು ದಶಕಕ್ಕೂ ಹೆಚ್ಚು ಕಾಲ ರುದ್ರಭೂಮಿಯಲ್ಲಿ ಕೆಲಸ ಮಾಡಿರುವ ನೀಲಮ್ಮ ಚಿತ್ರದಲ್ಲೂ ಅದೇ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಮಹೇಶ್ ದೇವು, ಪೂಜಾ ರಘುನಂದನ್, ಮೀಸೆ ಆಂಜನಪ್ಪ, ಬಸವರಾಜ ಮೈಸೂರು, ಉಗ್ರಂ ಸುರೇಶ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣವಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಸ್ಮಶಾನದಲ್ಲಿ ನಡೆಯಲಿದೆ.