777 ಚಾರ್ಲಿಗೆ ಕೊಂಕಣಿ ಹಾಡು
Team Udayavani, Nov 20, 2021, 8:20 AM IST
ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ’ ತೆರೆಗೆ ಬರುವ ತಯಾರಿಯಲ್ಲಿದೆ. ಒಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಮತ್ತೂಂದೆಡೆ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿದೆ. ಇದರ ನಡುವೆಯೇ “777 ಚಾರ್ಲಿ’ ಚಿತ್ರದ ಕಡೆಯಿಂದ ಮತ್ತೂಂದು ಹೊಸ ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಚಿತ್ರದಲ್ಲಿ ಕೊಂಕಣಿ ಭಾಷೆಯ ಹಾಡೊಂದು ಇರಲಿದೆಯಂತೆ!
ಹೌದು, ಸುಮಾರು 4 ವರ್ಷದ ಹಿಂದೆ ನಿರ್ದೇಶಕ ಕಿರಣ್ ರಾಜ್ ಕೆ. “777 ಚಾರ್ಲಿ’ಯ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾಗ, ಹೈಸ್ಕೂಲ್ ಹುಡುಗಿಯೊಬ್ಬಳು ಗಿಟಾರ್ ವಾದಕನೊಂದಿಗೆ ರಸ್ತೆ ಬದಿಯಲ್ಲಿ ಕೊಂಕಣಿ ಭಾಷೆಯಲ್ಲಿ ಹಾಡುತ್ತಿದ್ದ ವಿಡಿಯೋವೊಂದನ್ನು ನೋಡಿದ್ದರಂತೆ. ಇದರಿಂದ ಪ್ರೇರಿತ ರಾದ ಕಿರಣ್ ರಾಜ್, ತಮ್ಮ “777 ಚಾರ್ಲಿ’ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರಗಳು ದೇಶಾದ್ಯಂತ ಪ್ರಯಾಣಿಸುವ ಸಂದರ್ಭದಲ್ಲಿ ಬರುವಂತೆ ಕೊಂಕಣಿ ಹಾಡೊಂದನ್ನು ಸಂಯೋಜಿಸಿದರಂತೆ. ಇನ್ನೊಂದು ವಿಶೇಷವೆಂದರೆ, ಸುಮಾರು ನಾಲ್ಕೂವರೆ ವರ್ಷಗಳ ನಂತರ, ಈ ಹಾಡನ್ನು ಹಾಡಲು ಚಿತ್ರತಂಡ ಅದೇ ಗಾಯಕಿ ಯನ್ನು ಸಂಪರ್ಕಿಸಿದೆ.
“ಈ ಹಾಡು ಚಿತ್ರಕ್ಕೆ ಪ್ರಾದೇಶಿಕ ಸ್ಪರ್ಶವನ್ನು ಕೊಟ್ಟು ಕಥೆಯನ್ನು ಮುನ್ನಡೆಸುವುದಲ್ಲದೆ, ಚಿತ್ರದ ಮುಖ್ಯ ಪಾತ್ರಗಳು ದೇಶದ ಬೇರೆ ಬೇರೆ ಕಡೆ ಪ್ರಯಾಣಿ ಸುತ್ತಾ ಹೋದಂತೆ ಆಯಾ ಜಾಗಗಳ ಸಂಸ್ಕೃತಿ, ವಿಸ್ತಾರ ಹಾಗೂ ಹಲವಾರು ಭಾಗಗಳನ್ನು ಪರಿಚಯಿಸುತ್ತದೆ’ ಎನ್ನುತ್ತದೆ ಚಿತ್ರತಂಡ.
ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ “ಓ ಗಾ…’ ಎಂಬ ಸ್ಟ್ರೀಟ್ ಸಾಂಗ್ ಹಿಪ್ಪಿ ಶೈಲಿಯಲ್ಲಿ ರೂಪುಗೊಂಡಿದೆ. ಜನಪ್ರಿಯ ಮಲಯಾಳಂ ಬ್ಯಾಂಡ್ “ಥೈಕ್ಕುಡಂ ಬ್ರಿಡ್ಜ್’ನ ಗಾಯಕ ವಿಯಾನ್ ಫೆರ್ನಾಂಡಿಸ್ ಈ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನೋಬಿನ್ ಪೌಲ್ ಅವರು ಸಂಗೀತ ಸಂಯೋಜಿಸಿದ ಈ ಹಾಡಿಗೆ ಧಿತಿ ಎಸ್. ಲೋಟ್ಲಿಕರ್ ಧ್ವನಿಯಾ ಗಿದ್ದು, ಸಾಯೇಶ್ ಪಾಯ್ ಪನಾಂಡಿಕರ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಶೀಘ್ರದ ಲ್ಲಿಯೇ “777 ಚಾರ್ಲಿ’ಯ ಈ ಕೊಂಕಣಿ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.