ಹೊರಬಂತು ‘ಕೋರ’ ಟೀಸರ್; ಧ್ರುವ ಸರ್ಜಾ ಸಾಥ್
Team Udayavani, Nov 13, 2022, 3:37 PM IST
ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದ ಸುನಾಮಿ ಕಿಟ್ಟಿ ಈಗ ನಾಯಕ ನಟನಾಗಿ “ಕೋರ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
“ಒರಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ “ಕೋರ’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ಇದರ ನಡುವೆಯೇ ನಿಧಾನವಾಗಿ “ಕೋರ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಸಿನಿಮಾದ ಮೊದಲ ಟೀಸರ್ ಹೊರತಂದಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ “ಕೋರ’ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ಧ್ರುವ ಸರ್ಜಾ, “ಸಿನಿಮಾದ ಟೀಸರ್‌ನಲ್ಲಿ ಪಾಸಿಟಿವ್ ವೈಬ್ಸ್ ಕಾಣುತ್ತಿದೆ. ಟೀಸರ್‌ನಲ್ಲಿ ಬ್ಯಾಗ್ರೌಂಡ್ ಸ್ಕೋರ್, ಸುನಾಮಿ ಕಿಟ್ಟಿ ಸ್ಟಂಟ್ಸ್ ಗಮನ ಸೆಳೆಯುತ್ತಿದೆ. ಹಂಡ್ರೆಡ್ ಪರ್ಸೆಂಟ್ ಈ ಸಿನಿಮಾ ರಿಲೀಸ್ ಆದ ಮೇಲೆ ಜನಗಳು ಸುನಾಮಿ ತರ ಥಿಯೇಟರ್‌ಗೆ ಬರುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಟೀಸರ್‌ನಲ್ಲಿ ಯಾವ ರೀತಿ ಮೇಕಿಂಗ್, ಕ್ವಾಲಿಟಿ ಇದೆಯೋ ಅದೇ ರೀತಿ ಇಡೀ ಸಿನಿಮಾ ಇದೆ. ಈ ಸಿನಿಮಾದಲ್ಲಿ ಬುಡುಕಟ್ಟು ಜನಾಂಗದ ಕಥೆ ಹೇಳುತ್ತಿದ್ದೇವೆ. ಇಂದು ಬುಡಕಟ್ಟು ಜನರಿಂದಲೇ ಕಾಡು ಉಳಿದಿದೆ. ನಾವೆಲ್ಲರೂ ಆ ಜನಾಂಗದವರನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ಬುಡಕಟ್ಟು ಜನರ ಭಾವನೆ, ಆಚಾರ, ವಿಚಾರ, ನೋವು ಎಲ್ಲವೂ ಸಿನಿಮಾದಲ್ಲಿದೆ. ತುಂಬಾ ದೊಡ್ಡ ಮಟ್ಟದಲ್ಲಿ ಆ್ಯಕ್ಷನ್ ಪ್ಯಾಕೇಜ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ’ ಎನ್ನುವುದು ನಿರ್ದೇಶಕ ಶ್ರೀ ಮಾತು.
ನಿರ್ಮಾಪಕರಾದ ಪಿ. ಮೂರ್ತಿ ಮಾತನಾಡಿ, “ಈ ಸಿನಿಮಾದ ನಿರ್ಮಾಣದ ಜೊತೆಗೆ ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸಿದ್ದೇನೆ. ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಸಾಕಷ್ಟು ಪರಿಶ್ರಮ ಹಾಕಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹೊಸಬರ ತಂಡಕ್ಕೆ ಎಲ್ಲರ ಸಹಕಾರವಿರಲಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.