‘ಕೋಟಿಗೊಬ್ಬ-3’ ಪೊಸ್ಟರ್ ಡಿಸೈನರ್ ಸಾಯಿ ಕೃಷ್ಣನನ್ನು ಕೈಬಿಟ್ಟ ನಿರ್ಮಾಣ ಸಂಸ್ಥೆ
Team Udayavani, Apr 13, 2021, 6:29 PM IST
ಬೆಂಗಳುರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾಗಳ ಪೋಸ್ಟರ್ ಡಿಸೈನ್ ಮಾಡುತ್ತಿದ್ದ ಸಾಯಿ ಕೃಷ್ಣ ಅವರನ್ನು ಕೋಟಿಗೊಬ್ಬ 3 ಚಿತ್ರತಂಡ ಕೈ ಬಿಟ್ಟಿದೆ.
ಇಂದು ಈ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿರುವ ಸಾಯಿ ಕೃಷ್ಣ, ಕಾರಣ ಕೊಡದೆ ‘ಕೋಟಿಗೊಬ್ಬ 3’ ನಿರ್ಮಾಣ ಸಂಸ್ಥೆ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೂ ಈ ಚಿತ್ರವನ್ನು ಅವರು ಒಪ್ಪಿಕೊಳ್ಳಲು ಮುಖ್ಯವಾಗಿ ಸುದೀಪ್ ಹಾಗೂ ಅವರ ಅಭಿಮಾನಿಗಳು ಮತ್ತು ಹಣ. ಇವುಗಳನ್ನು ಬಿಟ್ಟು ಇನ್ಯಾರು ಅಲ್ಲ ಎಂದು ಟ್ವಿಟ್ಟಿಸಿದ್ದಾರೆ.
ಸುದೀಪ್ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿರುವ ಸಾಯಿ ಕೃಷ್ಣ, ಇಂದಿನಿಂದ ನಾನು ಕೋಟಿಗೊಬ್ಬ-3 ಚಿತ್ರದ ಆಫೀಸಿಯಲ್ ಪೋಸ್ಟರ್ ಡಿಸೈನರ್ ಅಲ್ಲ ಎಂದಿದ್ದಾರೆ.
ಸಾಯಿ ಕೃಷ್ಣ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಅವರು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದಿರಿ. ಈ ಸಿನಿಮಾ ಮುಗಿಯುವರೆಗೆ ನಿಮ್ಮ ಪ್ರಯಾಣ ಮುಂದುವರೆಯಬೇಕೆಂದು ನಾನು ಬಯಸುತ್ತೇನೆ. ಇಂದಿನ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಸದ್ಯ ನೀವು ಹೊರಹಾಕಿರುವ ವಿಷಯದ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಸಾಯಿ ಕೃಷ್ಣ ಅವರು ಸುದೀಪ್ ಅವರ ಕೆಂಪೇಗೌಡ,ವಿಷ್ಣುವರ್ಧನ ಹಾಗೂ ವರದನಾಯಕ ಸೇರಿದಂತೆ ಹಲವು ಸಿನಿಮಾಗಳ ಅದ್ಭುತ ಪೋಸ್ಟರ್ ಗಳನ್ನು ಡಿಸೈನ್ ಮಾಡಿದ್ದಾರೆ. ಇದೀಗ ಅವರು ಕೋಟಿಗೊಬ್ಬ 3 ಚಿತ್ರದಿಂದ ಹೊರಬಂದಿರುವುದಕ್ಕೆ ಸುದೀಪ್ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.
U have traveled wth k3 this distance and my wish is tat you continue the journey til the end. I shall respect ur decision, whatever it is though.
But I shall surely look into the matters as to what made u tweet this.
Cheers for now and happy Ugadi my friend.@Sai_Eveready https://t.co/iCxB5aWat4— Kichcha Sudeepa (@KicchaSudeep) April 13, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.