ಅಪ್ಪನ ಕನಸಿನ ಕುಚ್ಚಿಕು
Team Udayavani, Jul 4, 2018, 11:50 AM IST
ಎಲ್ಲವೂ ಅಂದುಕೊಂಡ ಆಗಿದ್ದರೆ “ಕುಚ್ಚಿಕು ಕುಚ್ಚಿಕೂ’ ಚಿತ್ರ ಬಿಡುಗಡೆಯಾಗಿ ನಾಲ್ಕೈದು ವರ್ಷಗಳೇ ಕಳೆಯಬೇಕಿತ್ತು. ಆದರೆ, ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ನಿಧನ ಸೇರಿದಂತೆ ನಾನಾ ಕಾರಣಗಳಿಂದಾಗಿ ತಡವಾದ ಚಿತ್ರ, ಈ ವಾರ ಬಿಡುಗಡೆಯಾಗುತ್ತಿದೆ. ತನ್ನ ನಿರ್ದೇಶನದ ಸಿನಿಮಾದಲ್ಲಿ ಮಗಳನ್ನು ತೆರೆಯ ಮೇಲೆ ನೋಡಬೇಕೆಂಬ ಕನಸನ್ನು ಬಾಬು ಅವರು ಕಂಡಿದ್ದರು.
ತಮ್ಮ ಮಗಳ ನಟನೆತಯನ್ನು ನೋಡಿ ಬಾಬು ಅವರು ಸೆಟ್‌ನಲ್ಲಿ ಖುಷಿ ಕೂಡಾ ಪಟ್ಟಿದ್ದರಂತೆ. ಈ ವಿಷಯವನ್ನು ಬಾಬು ಅವರ ಮಗಳು, “ಕುಚ್ಚಿಕು ಕುಚ್ಚಿಕೂ’ ಚಿತ್ರದ ನಾಯಕಿ ನಕ್ಷತ್ರ (ದೀಪ್ತಿ) ನೆನಪಿಸಿಕೊಳ್ಳುತ್ತಾರೆ. “ಅಪ್ಪ ನನ್ನನ್ನು ಅವರ ಸಿನಿಮಾದ ಮೂಲಕ ತೆರೆಮೇಲೆ ನೋಡಬೇಕೆಂದು ಕನಸು ಕಂಡಿದ್ದರು. ಮೊದಲ ದಿನ ಅಪ್ಪನ ಸಿನಿಮಾದಲ್ಲಿ ನಟಿಸುವಾಗ ತುಂಬಾ ಭಯಪಟ್ಟಿದ್ದೆ.
ಏಕೆಂದರೆ, ಅವರಿಗೆ ಸಿಟ್ಟು ಬೇಗ ಬರುತ್ತಿತ್ತು. ಅವರ ಕಲ್ಪನೆಯ ದೃಶ್ಯ ಬಾರದೇ ಹೋದರೆ ಬೈಯ್ಯುತ್ತಾರೆಂಬ ಭಯದಿಂದಲೇ ಸೆಟ್‌ಗೆ ಹೋದೆ. ಆದರೆ, ನನಗೆ ಬೈಯ್ಯಲಿಲ್ಲ. ತುಂಬಾ ಕೂಲ್ ಆಗಿ ದೃಶ್ಯಗಳನ್ನು ತೆಗೆದರು. ನಟನೆಯ ವಿಷಯದಲ್ಲಿ ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಜೆಕೆ ಹಾಗೂ ಪ್ರವೀಣ್‌ಗೆ ಅನೇಕ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಆದರೆ, ನನಗೆ ಏನೂ ಹೇಳುತ್ತಿರಲಿಲ್ಲ. ಅ
ವರಿಗೆ ಹೇಳಿಕೊಡುತ್ತಿದ್ದಾರೆ, ನನಗ್ಯಾಕೆ ಏನೂ ಹೇಳುತ್ತಿಲ್ಲ ಎಂಬ ನಾನು ಯೋಚಿಸುತ್ತಲೇ ಇದ್ದೆ. ಆ ನಂತರ ಮನೆಗೆ ಹೋದ ಮೇಲೆ, “ಅವರಿಗೆ ಮಾತ್ರ ನಟನೆ ಬಗ್ಗೆ ಹೇಳ್ತಾ ಇದ್ರಿ, ನನಗೆ ಏನೂ ಹೇಳಲೇ ಇಲ್ಲ. ಯಾಕೆ’ ಎಂದು ಅಪ್ಪನನ್ನ ಕೇಳಿದೆ. ಆಗ ಅವರು, “ನೀನು ಚೆನ್ನಾಗಿ ನಟಿಸುತ್ತಿದ್ದೆ. ನಾನಂದುಕೊಂಡಂತೆ ಪಾತ್ರ ಪೋಷಣೆ ಮಾಡುತ್ತಿದ್ದೀಯ. ಹಾಗಾಗಿ, ನಿನಗೆ ಏನೂ ಹೇಳುವ ಸಂದರ್ಭ ಬರಲಿಲ್ಲ’ ಎಂದರು.
ಇದರಿಂದ ನಾನು ಖುಷಿಯಾದೆ’ ಎನ್ನುತ್ತಾ “ಕುಚ್ಚಿಕು ಕುಚ್ಚಿಕೂ’ ಸಿನಿಮಾದ ಚಿತ್ರೀಕರಣದ ಅನುಭವವನ್ನು ಬಿಚ್ಚಿಡುತ್ತಾರೆ ದೀಪ್ತಿ. ಈ ಸಿನಿಮಾದಲ್ಲಿ ನಕ್ಷತ್ರ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇವತ್ತಿನ ಟ್ರೆಂಡ್‌ಗೆ ಈ ಸಿನಿಮಾ ಹೊಂದುತ್ತದೆ ಎಂಬ ವಿಶ್ವಾಸ ಕೂಡಾ ನಕ್ಷತ್ರ ಅವರಿಗಿದೆಯಂತೆ. ಈ ಚಿತ್ರವನ್ನು ಕೃಷ್ಣಮೂರ್ತಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹಂಸಲೇಖಾ ಅವರ ಸಂಗೀತ, ನಂದಕುಮಾರ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.