‘ರಿಚ್ಚಿ’ ಪ್ರೇಮಗೀತೆಗೆ ಕುನಾಲ್ ಗಾಂಜಾವಾಲಾ ಧ್ವನಿ
Team Udayavani, May 19, 2023, 5:34 PM IST
ಯುವ ಪ್ರತಿಭೆ ರಿಚ್ಚಿ ನಾಯಕನಾಗಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ “ರಿಚ್ಚಿ’ ಸಿನಿಮಾದ ಮೊದಲ ರೊಮ್ಯಾಂಟಿಕ್ ಗೀತೆ ಕುನಾಲ್ ಗಾಂಜಾವಾಲಾ ಧ್ವನಿಯಲ್ಲಿ ಮೂಡಿಬಂದಿದ್ದು, ಸ್ವತಃ ಕುನಾಲ್ ಗಾಂಜಾವಾಲಾ ಅವರ ಸಮ್ಮುಖದಲ್ಲಿಯೇ ಚಿತ್ರತಂಡ ಈ ಗೀತೆಯನ್ನು ಬಿಡುಗಡೆಗೊಳಿಸಿದೆ.
ಇದೇ ವೇಳೆ ಮಾತನಾಡಿದ ಗಾಯಕ ಕುನಾಲ್ ಗಾಂಜಾವಾಲಾ, “ನಟ ಮತ್ತು ನಿರ್ದೇಶಕ ರಿಚ್ಚಿ ತುಂಬಾ ಪ್ರತಿಭಾನ್ವಿತ. ಹೊಸರೀತಿಯಲ್ಲಿ ಸಿನಿಮಾ ಮಾಡಬೇಕು ಎಂಬ ಅವರ ಹಂಬಲ ಸ್ಕ್ರೀನ್ ನಲ್ಲಿ ಕಾಣುತ್ತಿದೆ. ತುಂಬಾ ಸಮಯದ ನಂತರ ಕನ್ನಡದಲ್ಲಿ ರೊಮ್ಯಾಂಟಿಕ್ ಮೆಲೋಡಿ ಹಾಡಿಗೆ ಧ್ವನಿಯಾಗಿದ್ದು ಖುಷಿಕೊಟ್ಟಿದೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕುನಾಲ್ ಗಾಂಜಾವಾಲಾ ಹಾಡಿರುವ, “ಕಳೆದು ಹೋಗಿರುವೆ…’ ಎಂಬ ಸಾಲುಗಳಿಂದ ಶುರುವಾಗಿರುವ ಈ ರೊಮ್ಯಾಂಟಿಕ್ ಗೀತೆಗೆ ಗೌಸ್ ಫೀರ್ ಸಾಹಿತ್ಯವಿದ್ದು, ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದಾರೆ. ಗೀತೆಯಲ್ಲಿ ನಾಯಕ ರಿಚ್ಚಿ ಅವರಿಗೆ ರಮೋಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ.
“ಇದೊಂದು ಲವ್ ಮತ್ತು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾವಾದರೂ, ಹಾಡುಗಳಿಗೂ ಪ್ರಮುಖ ಪ್ರಾಶಸ್ತ್ಯ ಕೊಡಲಾಗಿದೆ. ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ “ರಿಚ್ಚಿ’ ಸಿನಿಮಾವನ್ನು ಮಾಡಿದ್ದೇವೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಆಗಸ್ಟ್ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂಬುದು ನಾಯಕ ಕಂ ನಿರ್ದೇಶಕ ರಿಚ್ಚಿ ಮಾತು.
“ರಿಚ್ಚಿ’ ಸಿನಿಮಾವನ್ನು ಅಣಜಿ ನಾಗರಾಜ್ ಅರ್ಪಿಸುತ್ತಿದ್ದು, ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.