ಕುಸ್ತಿಗಿಂತ ಮೊದಲು ವಿಜಯ್ ಮಸ್ತಿ
Team Udayavani, Nov 15, 2018, 3:56 PM IST
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ “ದುನಿಯಾ’ ವಿಜಯ್ ನಟನೆಯ “ಕುಸ್ತಿ’ ಚಿತ್ರ ಶುರುವಾಗಬೇಕಿತ್ತು. ವಿಜಯ್ ಹಾಗೂ ಅವರ ಮಗ ಸಾಮ್ರಾಟ್ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಕೇಸು, ಕೋರ್ಟ್, ಜೈಲು ಎಂದು ವಿಜಯ್ ಓಡಾಡಿಕೊಂಡ ಕಾರಣ ಸಿನಿಮಾ ಸಾಕಷ್ಟು ತಡವಾಗಿದ್ದು ಸುಳ್ಳಲ್ಲ. ಈ ನಡುವೆಯೇ ಗಾಂಧಿನಗರದಲ್ಲಿ ಸುದ್ದಿಯೊಂದು ಹರಿದಾಡಿದೆ. ಅದು “ಕುಸ್ತಿ’ ಸಿನಿಮಾ ನಿಂತು ಹೋಯಿತಂತೆ ಎನ್ನುವುದು. ಏಕೆಂದರೆ ಇಷ್ಟು ದಿನವಾದರೂ ಸಿನಿಮಾದ ಯಾವುದೇ ಕೆಲಸಗಳಿಗೆ ಚಾಲನೆ ಸಿಗದ ಹಿನ್ನೆಲೆಯಲ್ಲಿ ಈ ಸುದ್ದಿ ಹರಿದಾಡಲಾರಂಭಿಸಿದೆ. ಆದರೆ, ನಿರ್ದೇಶಕ ರಾಘು ಶಿವಮೊಗ್ಗ ಮಾತ್ರ ಈ ಸುದ್ದಿಯನ್ನು ಒಪ್ಪುವುದಿಲ್ಲ. ಸಿನಿಮಾ ನಿಂತಿಲ್ಲ, ಮುಂದೆ ಹೋಗಿದೆಯಷ್ಟೇ ಎನ್ನುತ್ತಾರೆ ರಾಘು.
ಹೌದು, ರಾಘು ಶಿವಮೊಗ್ಗ ಹೇಳುವಂತೆ, “ಕುಸ್ತಿ’ ಚಿತ್ರ ಮುಂದಕ್ಕೆ ಹೋಗಿದೆ. ಎಷ್ಟು ಮುಂದಕ್ಕೆ ಎಂದರೆ ಒಂದು ಆರು ತಿಂಗಳು ಎಂಬ ಉತ್ತರ ಅವರಿಂದ ಬರುತ್ತದೆ. ಹಾಗಾದರೆ ವಿಜಯ್ ಬೇರೆ ಸಿನಿಮಾ ಮಾಡುತ್ತಾರಾ, ಇಷ್ಟು ದಿನ “ಕುಸ್ತಿ’ಗಾಗಿ ಬೆವರು ಸುರಿಸಿದ್ದ ರಾಘು ಶಿವಮೊಗ್ಗ ಏನು ಮಾಡುತ್ತಾರೆ ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಬರುತ್ತದೆ. “ಕುಸ್ತಿ’ಗಿಂತ ಮುಂಚೆ ವಿಜಯ್ ಹೊಸ ಸಿನಿಮಾವೊಂದರಲ್ಲಿ ನಟಿಸಲಿದ್ದು, ಆ ಚಿತ್ರವನ್ನು ರಾಘು ಶಿವಮೊಗ್ಗ ನಿರ್ದೇಶಿಸಲಿದ್ದಾರಂತೆ.
“ವಿಜಯ್ “ಕುಸ್ತಿ’ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದರು. ಜಿಮ್‌ನಲ್ಲಿ ವಕೌìಟ್ ಮಾಡಿ ಅದಕ್ಕೆ ಬೇಕಾದ ರೀತಿ ಸಿದ್ಧರಾಗಿದ್ದರು. ಆದರೆ, ಅವರ ಜೀವನದಲ್ಲಿ ನಡೆದ ಘಟನೆಯಿಂದ ಬಾಡಿ ಬಿಲ್ಡ್ ಕಡೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಮತ್ತೆ ಆ ತರಹದ ಫಿಟ್‌ನೆಸ್ ಮಾಡಿಕೊಳ್ಳಲು ಸುಮಾರು ಆರು ತಿಂಗಳು ಬೇಕೇ ಬೇಕು. ಏಕೆಂದರೆ “ಕುಸ್ತಿ’ಯಲ್ಲಿ ಅವರ ದೇಹದಾಡ್ಯìತೆ ಕೂಡಾ ಮುಖ್ಯವಾಗುತ್ತದೆ. ಆ ಕಾರಣದಿಂದ ಸಿನಿಮಾ ಮುಂದೆ ಹೋಗಿದೆಯೇ ಹೊರತು ಬೇರೆ ಯಾವ ಕಾರಣದಿಂದ ಅಲ್ಲ, ಮುಂದೆ “ಕುಸ್ತಿ’ ಆಗೋದು ಪಕ್ಕಾ. ಅದಕ್ಕಿಂತ ಮುಂಚೆ ವಿಜಯ್ ಅವರೊಂದು ಸಿನಿಮಾ ಮಾಡಲಿದ್ದು, ಅದನ್ನು ನಾನು ನಿರ್ದೇಶನ ಮಾಡಲಿದ್ದೇನೆ. ಈಗಾಗಲೇ ಆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸದ್ಯಕ್ಕೆ ಕಥೆಯಾಗಲೀ, ಇತರ ಅಂಶಗಳಾಗಲೀ ಯಾವುದೂ ಅಂತಿಮವಾಗಿಲ್ಲ’ ಎನ್ನುತ್ತಾರೆ ರಾಘು ಶಿವಮೊಗ್ಗ. ಹೊಸ ಚಿತ್ರವನ್ನು ವಿಜಯ್ ತಮ್ಮ ಬ್ಯಾನರ್‌ನಲ್ಲೇ ನಿರ್ಮಿಸಲಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.