ಲೇಡೀಸ್‌ ಪ್ರಾಬ್ಲಂ!


Team Udayavani, Sep 25, 2017, 3:45 PM IST

25-ZZ-12.jpg

ಈ ವರ್ಷದ ನಿರೀಕ್ಷೆಯ ಚಿತ್ರಗಳ ಪಟ್ಟಿಗೆ ಸೇರಿದ್ದ ವಿಜಯಪ್ರಸಾದ್‌ ನಿರ್ದೇಶನದ “ಲೇಡೀಸ್‌ ಟೈಲರ್‌’ ಚಿತ್ರವು ಶುರುವಾಗುವುದಕ್ಕಿಂತ ಮುಂಚೆಯೇ ನಿಂತು ಹೋಗಿದೆ. ಅಲ್ಲಿಗೆ ನಿರ್ದೇಶಕ ವಿಜಯಪ್ರಸಾದ್‌ ಅವರು ಕತ್ತರಿ, ಟೇಪು, ಸೂಜಿ, ದಾರ … ಎಲ್ಲವನ್ನೂ ಒಳಗಿಟ್ಟು, ಇನ್ನೊಂದು ಕಥೆಯನ್ನು ಹೆಣೆಯುವ ಸಿದ್ಧತೆಯಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 26ಕ್ಕೆ ಚಿತ್ರ ಶುರುವಾಗಬೇಕಿತ್ತು. ಆದರೆ, ಈಗ “ಲೇಡೀಸ್‌ ಟೈಲರ್‌’ ಎನ್ನುವುದು ಸದ್ಯಕ್ಕೆ ನೆನಪು ಮಾತ್ರ.

“ಲೇಡೀಸ್‌ ಟೈಲರ್‌’ ಚಿತ್ರವು ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇದೆ. ಈ ಚಿತ್ರ ಶುರುವಾದಾಗ ನಿರ್ದೇಶಕ ವಿಜಯಪ್ರಸಾದ್‌ ಅವರಿಗೆ ಬೇರೆಯದೇ ತಲೆನೋವು ಇತ್ತು. ಅದೇನೆಂದರೆ, ಚಿತ್ರದ ನಾಯಕಿ 125 ಕೆಜಿ ತೂಕವಿರಬೇಕಂತೆ. ಅಂತಹ ನಟಿಯ ಹುಡುಕಾಟಕ್ಕಾಗಿ ವಿಜಯಪ್ರಸಾದ್‌ ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಕೆಲವು ನಟಿಯರು ಸಿಗದಿದ್ದಾಗ ಬೇಸರಗೊಂಡಿದ್ದರು. “ಕಥೆ ಮತ್ತು ಪಾತ್ರ ದಪ್ಪಗಿರುವ ಮತ್ತು ತುಂಬಾ ತೂಕವಾಗಿರುವ ನಾಯಕಿಯನ್ನೇ ಡಿಮ್ಯಾಂಡ್‌ ಮಾಡಿದ್ದಕ್ಕೆ ಆ ರೀತಿಯ ನಾಯಕಿಗೆ ಹುಡುಕಾಟ ನಡೆಯುತ್ತಿದೆ. ಅದೊಂದು ಮುಸ್ಲಿಂ ಹೆಣ್ಣುಮಗಳ ಪಾತ್ರ. ಅದಕ್ಕಾಗಿ ಕನ್ನಡದ ಕೆಲ ನಟಿಯರನ್ನು ಕೇಳಿದ್ದಾಗಿದೆ. ಆದರೆ, ಯಾರೊಬ್ಬರೂ ಆ ಪಾತ್ರ ಮಾಡೋಕೆ ಒಪ್ಪುತ್ತಿಲ್ಲ. ಪಾತ್ರ ಓಕೆ ಆದರೆ, ತೂಕ ಅಷ್ಟೊಂದು ಯಾಕೆ ಎನ್ನುವವರೇ ಜಾಸ್ತಿ. ಆ ಕಾರಣಕ್ಕೆ ಫೇಸ್‌ಬುಕ್‌ನಲ್ಲಿ 125 ಕೆಜಿ ತೂಕವಿರುವ, ದಪ್ಪವಿರುವ ನಾಯಕಿ ಬೇಕಾಗಿದ್ದಾರೆ ಎಂದು ಸ್ಟೇಟಸ್‌ ಹಾಕಿದ್ದೇನೆ. ಆಸಕ್ತಿ ಇದ್ದವರು ಫೋಟೋ ಕಳುಹಿಸಬಹುದು ಎಂಬ ನಿರೀಕ್ಷೆ ಇದೆ. ಮೊದಲ ಆದ್ಯತೆ ಕನ್ನಡದವರಿಗೆ. ಒಂದು ವೇಳೆ, ಇಲ್ಲಿ ಸಿಗದೇ ಹೋದಲ್ಲಿ, ಪರಭಾಷೆಯತ್ತ ಮುಖ ಮಾಡ್ತೀನಿ’ ಎಂದು ವಿಜಯಪ್ರಸಾದ್‌ ಹೇಳಿಕೊಂಡಿದ್ದರು.

ಆದರೆ, ಸಮಸ್ಯೆಯಾಗಿದ್ದೇ ಬೇರೆ. ನಾಯಕಿಯ ಹುಡುಕಾಟದಲ್ಲಿದ್ದ ವಿಜಯಪ್ರಸಾದ್‌, ರವಿಶಂಕರ್‌ ಗೌಡ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ನಿರ್ಮಾಪಕರಲ್ಲೇ ಸಾಕಷ್ಟು ಗೊಂದಲಗಳಿದ್ದ ಕಾರಣ, ರವಿಶಂಕರ್‌ ಬದಲು ಸತೀಶ್‌ ನೀನಾಸಂ ಅವರನ್ನು ಆಯ್ಕೆ ಮಾಡಲಾಗಿತ್ತು. ಎಲ್ಲಾ ಸರಿ ಹೋಯಿತು ಎನ್ನುವಷ್ಟರಲ್ಲಿ ಸತೀಶ್‌ ಸಹ ಚಿತ್ರದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿ ಹೊರಬಂದರು. ಆ ನಂತರ ಚಿತ್ರದಲ್ಲಿ ಜಗ್ಗೇಶ್‌ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಜಗ್ಗೇಶ್‌ ಸಹ ತಾವು ನಟಿಸುತ್ತಿಲ್ಲ ಮತ್ತು ಅದು ಕೇವಲ ಗಾಳಿಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟಾಗುತ್ತಿದ್ದಂತೆಯೇ, “ಲೇಡೀಸ್‌ ಟೈಲರ್‌’ ಚಿತ್ರವನ್ನು ವಿಜಯಪ್ರಸಾದ್‌ ಡ್ರಾಪ್‌ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ವಿಜಯಪ್ರಸಾದ್‌, “ಯಾಕೋ ಈ ಚಿತ್ರ ಶುರುವಾದಾಗಿನಿಂದ, ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಮೊದಲು ರವಿಶಂಕರ್‌ ಗೌಡ ಚಿತ್ರದಲ್ಲಿ ನಟಿಸುತ್ತಾರೆ ಎಂದಾಯಿತು. ಆ ನಂತರ ಅವರ ಬದಲು ಸತೀಶ್‌ ಅಂತ ಸುದ್ದಿಯಾಯಿತು. ಕೊನೆಗೆ ಜಗ್ಗೇಶ್‌ ಅವರ ಹೆಸರು ಬಂತು. ನಾವು ಜಗ್ಗೇಶ್‌ ಅವರ ಹತ್ತಿರ ಮಾತಾಡಿದ್ದು ಹೌದು. ಆದರೆ, ನಮ್ಮ ಕಡೆಯಿಂದಲೇ ಕೆಲವು ಸಮಸ್ಯೆಗಳು ಎದುರಾಗಿವೆ. ನೂರೆಂಟು ತೊಡಕುಗಳಿಂದ ಚಿತ್ರ ಶುರುವಾಗುತ್ತಿಲ್ಲ. ಇಷ್ಟೆಲ್ಲಾ ಗೊಂದಲಗಳಿರುವುದರಿಂದ ಚಿತ್ರ ಡ್ರಾಪ್‌ ಮಾಡಬೇಕಾಗಿದೆ’ ಎನ್ನುತ್ತಾರೆ ವಿಜಯಪ್ರಸಾದ್‌.

ವಿಜಯಪ್ರಸಾದ್‌ ಅವರ ಪ್ರತಿಯೊಂದು ಚಿತ್ರ ಸಹ ಸಮಸ್ಯೆ, ವಿವಾದಗಳಿಲ್ಲದೆ ಮುಗಿಯುವುದೇ ಇಲ್ಲ ಎನ್ನುವಂತಾಗಿದೆ. ಅವರ ಮೊದಲ ಚಿತ್ರ “ಸಿದ್ಲಿಂಗು’ ಸಂಭಾಷಣೆ ಸರಿ ಇಲ್ಲ ಎಂದು ನಟಿ ರಮ್ಯ ಚಿತ್ರದಿಂದ ಹೊರಬಂದಿದ್ದರು. ಕೊನೆಗೆ ಅವರನ್ನು ಮನವೊಲಿಸಿ ವಾಪಸ್ಸು ಕರೆತರುವಂತಾಯಿತು. ಆ ನಂತರ “ನೀರ್‌ದೋಸೆ’ಯ ರಗಳೆಯಂತೂ ಎಲ್ಲರಿಗೂ ಗೊತ್ತೇ ಇದೆ. ಚಿತ್ರತಂಡದಿಂದ ರಮ್ಯ ಹೊರಹೋಗಿದ್ದು, ಆ ಜಾಗಕ್ಕೆ ಹರಿಪ್ರಿಯಾ ಬಂದಿದ್ದು, ಚಿತ್ರದ ನಿರ್ಮಾಪಕರು ಬದಲಾಗಿದ್ದು, ಚಿತ್ರ ನಿಧಾನವಾಗಿದ್ದು … ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಮಧ್ಯೆ ಶುರುವಾಗಬೇಕಿದ್ದ “ಪೆಟ್ರೋಮ್ಯಾಕ್ಸ್‌’ ಎಂಬ ಚಿತ್ರವು ಅನಿವಾರ್ಯ ಕಾರ್ಯಗಳಿಂದ ನಿಂತೇ ಹೋಯಿತು. ಈಗ “ಲೇಡೀಸ್‌ ಟೈಲರ್‌’ ಸಹ ಅದೇ ಹಾದಿ ಹಿಡಿದಿದೆ.

ಹೀಗೆ ನಿಲ್ಲುತ್ತಿರುವುದು ಹೊಸದೇನಲ್ಲ!
ಒಂದು ಚಿತ್ರ ನಿಲ್ಲುವುದು ಹೊಸದೇನಲ್ಲ. ಈ ಹಿಂದೆ ಈ ತರಹದ ಹಲವು ಉದಾಹರಣೆಗಳು ಸಿಗುತ್ತವೆ. ತೀರಾ ಇತ್ತೀಚೆಗೆ ನೋಡಿದರೆ, ಸ್ಕ್ರಿಪ್ಟ್ ಪೂಜೆ ನಡೆದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಮಾಣದ ಮತ್ತು ನಿಖೀಲ್‌ ಅಭಿನಯದ ಹೊಸ ಚಿತ್ರ ನಿಂತು ಹೋಯಿತು. ಅದಕ್ಕೂ ಮುನ್ನ ಖಾಸನೀಸ್‌ ಸಹೋದರರು ಶುರು ಮಾಡಿದ್ದ ಮತ್ತು ಶುರು ಮಾಡಬೇಕೆಂದಿದ್ದ “ಐರಾ’, “ಶಾದಿಭಾಗ್ಯ’, “ಎಂಟಿವಿ ಸುಬ್ಬುಲಕ್ಷ್ಮೀ’, “ಪ್ರೇಮದಲಿ’, “ಪ್ರೀತಿ ಪ್ರಾಪ್ತಿರಸ್ತು’, “ದಂಡಯಾತ್ರೆ’, “ಉತ್ಸವ್‌’, “ಸೆಕೆಂಡ್‌ ಬಕೆಟ್‌ ಬಾಲ್ಕನಿ’ ಮುಂತಾದ ಚಿತ್ರಗಳು ಕಾರಣಾಂತರಗಳಿಂದ ಒಂದೇ ಏಟಿಗೆ ನಿಂತು ಹೋಗಿವೆ. ಪ್ರೇಮ್‌ ನಿರ್ದೇಶನದ ಶಿವರಾಜಕುಮಾರ್‌ ಮತ್ತು ಸುದೀಪ್‌ ಅಭಿನಯದ “ಕಲಿ’ ಚಿತ್ರದ ಟೈಟಲ್‌ ಲಾಂಚ್‌ಗೆ ಖುದ್ದು ಮುಖ್ಯಮಂತ್ರಿಗಳು ಬಂದು ಟೈಟಲ್‌ ಲಾಂಚ್‌ ಮಾಡಿ ಹೋಗಿದ್ದರು. ಇನ್ನೇನು ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಆ ಚಿತ್ರ ಸದ್ಯಕ್ಕಿಲ್ಲ ಎಂಬ ಸುದ್ದಿ ಇಬ್ಬರೂ ಕಲಾವಿದರ, ಲಕ್ಷಾಂತರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಪ್ರೇಮ್‌ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಅದೇ ಡೇಟ್‌ ಇಟ್ಟುಕೊಂಡು, “ಕಲಿ’ ಬದಲು, “ದಿ ವಿಲನ್‌’ ಎಂಬ ಚಿತ್ರವನ್ನು ಶುರು ಮಾಡಿದ್ದಾರೆ. ಇನ್ನು ಇದೇ ಪ್ರೇಮ್‌, ವಿನಯ್‌ ರಾಜಕುಮಾರ್‌ ಅಭಿನಯದಲ್ಲಿ “ಆರ್‌ – ದಿ ಕಿಂಗ್‌’ ಎಂಬ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದರು. ಚಿತ್ರ ಮುಹೂರ್ತದವರೆಗೂ ಬಂದು ಅದ್ಯಾಕೋ ನಿಂತುಹೋಯಿತು. ರವಿಚಂದ್ರನ್‌ ಅವರ ಮಹತ್ವಾಕಾಂಕ್ಷೆಯ ಚಿತ್ರವಾದ “ಮಂಜಿನ ಹನಿ’ಗಾಗಿ ನಾಲ್ಕೈದು ವರ್ಷಗಳ ಕಾಲ ಅವರು ಬೆವರು ಸುರಿಸಿದ್ದರು. ಎಲ್ಲಾ ಆದರೂ, ಈ ಚಿತ್ರ ಮುಕ್ತಾಯವಾಗಲಿಲ್ಲ. ಅದೇ ರೀತಿ, ರವಿಚಂದ್ರನ್‌ ಅವರು ತಮ್ಮ ಮಗನಿಗಾಗಿ ಶುರು ಮಾಡಿದ “ರಣಧೀರ – ಪ್ರೇಮಲೋಕ’ದಲ್ಲಿ ಭರ್ಜರಿಯಾಗಿ ಶುರುವಾಯಿತಾದರೂ, ಚಿತ್ರ ಮುಂದುವರೆಯಲಿಲ್ಲ.

ಉಪೇಂದ್ರ ಅಭಿನಯದ “ದೇವದಾಸ್‌’, “ಕಲ್ಕಿ’, “ದಶಾವತಾರ’, “ಭೀಮೂಸ್‌ ಬ್ಯಾಂಗ್‌ ಬ್ಯಾಂಗ್‌ ಕಿಡ್ಸ್‌’ ಚಿತ್ರಗಳು, ಸುದೀಪ್‌ ಅಭಿನಯದ ಮತ್ತು ನಿರ್ದೇಶನದ “ಕನ್ವರ್‌ಲಾಲ್‌’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಕಾಲ ನಡೆದು ನಿಂತು ಹೋಗಿತ್ತು. ಪುನೀತ್‌ ರಾಜಕುಮಾರ್‌ ಅಭಿನಯದ “ಮಯೂರ’ ಎಂಬ ಚಿತ್ರದ ಮುಹೂರ್ತ ಇಸ್ಕಾನ್‌ ದೇವಸ್ಥಾನದಲ್ಲಿ ಭರ್ಜರಿಯಾಗಿ ನಡೆದಿತ್ತು. ಆದರೆ, ನಿರ್ದೇಶಕ ಶೋಭನ್‌ ಅವರ ನಿಧನದಿಂದಾಗಿ ಚಿತ್ರ ನಿಂತೇ ಹೋಯಿತು. ಆದಿತ್ಯ ಅಭಿನಯದ “ರಕ್ತಾಕ’Ò, “ಕಾಟನ್‌ಪೇಟೆ’, “ಮಾಸ್‌’ ಮತ್ತು “ರ್ಯಾಸ್ಕಲ್‌’ ಎಂಬ ನಾಲ್ಕು ಚಿತ್ರಗಳು ಅದ್ಧೂರಿಯಾಗಿ ಮುಹೂರ್ತವಾಗಿ ಒಂದಿಷ್ಟು ಚಿತ್ರೀಕರಣ ಸಹ ಆಗಿತ್ತು. ಆದರೆ, ನಾಲ್ಕೂ ಚಿತ್ರಗಳೂ ನಿಂತಿವೆ.

ಇದು ಶುರುವಾಗಿ ನಿಂತ ಹಲವು ಚಿತ್ರಗಳ ಪೈಕಿ ಕೆಲ ಉದಾಹರಣೆಯಾದರೆ, ಬರೀ ಸುದ್ದಿ ಮಾಡಿ, ನಿಂತು ಹೋದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿವೆ. “ಗಂಡುಗಲಿ ಕುಮಾರರಾಮ’ ನಂತರ ಪಟ್ಟಾಭಿರಾಮ್‌ ಅವರು ಘೋಷಿಸಿದ್ದ “ಭರತೇಶ ವೈಭವ’, ಶಿವಾರಾಜಕುಮಾರ್‌-ರಾಘವೇಂದ್ರ ರಾಜಕುಮಾರ್‌-ಪುನೀತ್‌ ರಾಜಕುಮಾರ್‌ ಒಟ್ಟಾಗಿ ಅಭಿನಯಿಸಿದ್ದ “ಓಂ’, ಡಾ. ವಿಷ್ಣುವರ್ಧನ್‌ ಮತ್ತು ಉಪೇಂದ್ರ ಒಟ್ಟಾಗಿ ನಟಿಸಬೇಕಿದ್ದ “ಯುಗೇ ಯುಗೇ’, ಕುಮಾರ್‌ ಬಂಗಾರಪ್ಪ ಅಭಿನಯದಲ್ಲಿ ನಾಗಾಭರಣ ನಿರ್ದೇಶಿಸಬೇಕಿದ್ದ “ಕೆಳದಿ ಶಿವಪ್ಪನಾಯಕ’, ತ.ರಾ.ಸು ಅವರ ಮೂರು ಕಾದಂಬರಿಗಳನ್ನಾಧರಿಸಿದ ಟಿ.ಎಸ್‌. ನಾಗಾಭರಣ ಅವರು ಪ್ರಕಾಶ್‌ ರೈ ಅಭಿನಯದಲ್ಲಿ ನಿರ್ದೇಶಿಸಬೇಕಿದ್ದ “ದಳವಾಯಿ ಮುದ್ದಣ್ಣ’ ಈ ಎಲ್ಲಾ ಚಿತ್ರಗಳು ಆಯಾ ಕಾಲಕ್ಕೆ ಸುದ್ದಿ ಮಾಡಿದ್ದವು. ಆದರೆ, ಈ ಚಿತ್ರಗಳು ಶುರುವಾಗಲೇ ಇಲ್ಲ.

ಟಾಪ್ ನ್ಯೂಸ್

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.