ನಟನೆಯಿಂದ ಮೇಕಪ್ ನತ್ತ ಬಂದ ಲಕ್ಷ್ಮೀ ಶೆಟ್ಟಿ
Team Udayavani, Dec 12, 2022, 6:01 PM IST
ಚಿತ್ರರಂಗದ ಒಂದು ವಿಭಾಗದಲ್ಲಿ ಬಿಝಿಯಾಗಿರುವವರಿಗೆ ಮತ್ತೂಂದು ವಿಭಾಗದಲ್ಲೂ ಅವಕಾಶ ಸಿಗುತ್ತದೆ. ನಿರ್ದೇಶಕನಾಗಲು ಬಂದವರು, ನಾಯಕರಾಗಿದ್ದಾರೆ. ನಾಯಕನಾಗಲು ಬಂದವರು ನಿರ್ಮಾಪಕರಾಗಿದ್ದಾರೆ. ಈ ತರಹದ ಸಾಕಷ್ಟು ಉದಾಹರಣೆ ಇದೆ. ಈಗ ನವನಟಿಯೊಬ್ಬರು ನಟನೆ ಜೊತೆಗೆ ಮೇಕಪ್ ಕಲಾವಿದೆಯಾಗಿಯೂ ಬಿಝಿಯಾಗುತ್ತಿದ್ದಾರೆ. ಆಕೆ ಲಕ್ಷ್ಮೀ ಶೆಟ್ಟಿ.
ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿರುವ ನಟಿ ಲಕ್ಷ್ಮೀ ಶೆಟ್ಟಿ ಅವರಿಗೆ ಸಿನಿಮಾ, ಧಾರಾವಾಹಿಗಳಿಂದ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ, ಲಕ್ಷ್ಮೀ ಮೇಕಪ್ ಕಲಾವಿದೆಯಾಗಿಯೂ ಬಿಝಿಯಾಗಿದ್ದಾರೆ.
ಈಕೆ ಮೊದಲ ಬಾರಿಗೆ ಕಲಾವಿದೆಯಾಗಿ ಬಣ್ಣಹಚ್ಚಿದ್ದು ಪುನರ್ವಿವಾಹದಲ್ಲಿ. ಆನಂತರ ಕಾರಂಜಿ, ಲವಲವಿಕೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಲಕ್ಷ್ಮೀ ಶೂಟಿಂಗ್ ಸೆಟ್ನಲ್ಲಿ ಮೇಕಪ್ ಕಲಾವಿದರನ್ನು ಗಮನಿಸುತ್ತಾ ಆ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡ ಪರಿಣಾಮ ಈಗ ಅಲ್ಲೂ ಬಿಝಿಯಾಗಿದ್ದಾರೆ.
ಮೇಕಪ್ ವಿಭಾಗದಲ್ಲಿ ಡಿಪ್ಲೊಮಾ ಇನ್ ಮೇಕಪ್ ಆರ್ಟ್ ಎಂಬ ಕೋರ್ಸ್ ಮಾಡಿಕೊಂಡು ನಂತರ ಚೆನ್ನೈ, ದೆಹಲಿಯಲ್ಲಿ ಪೂರ್ಣಪ್ರಮಾಣದ ತರಬೇತಿ ಪಡೆದುಕೊಂಡಿದ್ದಾರೆ ಕೂಡಾ. ತಾನು ಈಗಾಗಲೇ ಶಾನ್ವಿ ಶ್ರೀವಾತ್ಸವ್, ಅನುಪಮಾ ಗೌಡ, ಆಶಿಕಾ ರಂಗನಾಥ್, ರಚಿತಾರಾಮ್, ಕಾರುಣ್ಯ ರಾಮ್, ಮಾನ್ವಿತಾ ಹರೀಶ್ ಸೇರಿದಂತೆ ಸಾಕಷ್ಟು ನಟಿಯರನ್ನು ಮೇಕಪ್ ಮಾಡಿದ್ದೇನೆ ಎನ್ನುತ್ತಾರೆ ಲಕ್ಷ್ಮೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.