ದಸರಾ ಹಬ್ಬಕ್ಕೆ ಲೇರ್ಯ
Team Udayavani, Sep 2, 2017, 10:34 AM IST
ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಪ್ರಾದೇಶಿಕ ಭಾಷೆಯ ಚಿತ್ರಗಳು ಸದ್ದಿಲ್ಲದೆಯೇ ಚಿತ್ರೀಕರಣಗೊಂಡು, ತೆರೆಯ ಮೇಲೆ ಬರುವುದು ಹೊಸದೇನಲ್ಲ. ಈಗ ಬಂಜಾರ (ಲಂಬಾಣಿ) ಸಮುದಾಯದ ಆಚರಣೆ ಕುರಿತ “ಲೇರ್ಯ’ ಎಂಬ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರಕ್ಕೆ ಚೈತನ್ಯ ನಿರ್ದೇಶಕರು. ಕಥೆ, ಚಿತ್ರಕಥೆ, ಸಾಹಿತ್ಯದ ಜತೆ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ ಚೈತನ್ಯ.
ಇನ್ನು, ಕೇಳೂತ್ ಬ್ಯಾನರ್‌ನಲ್ಲಿ ಅರುಣ್ ಕೇಳೂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚೈತನ್ಯಗೆ ಅಮೃತ ವಿ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚೈತನ್ಯ ಕಳೆದ ಐದು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟವರು. ಒಂದಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಬಳಿಕ ಬಂಜಾರ ಸಮುದಾಯಕ್ಕೊಂದು ಸಿನಿಮಾ ಮಾಡಬೇಕೆಂಬ ಉದ್ದೇಶದಿಂದ “ಲೇರ್ಯ’ ಸಿನಿಮಾ ಮಾಡಿದ್ದಾರೆ.
ಇದು ಬಂಜಾರ ಸಮುದಾಯದ ಸಾಂಸ್ಕೃತಿಕ ಆಚರಣೆಗಳು, ಪದ್ಧತಿಗಳು, ಅವರ ಉಡುಗೆ, ಬದುಕುವ ಪರಿ ಇವೆಲ್ಲವನ್ನೂ ಇದರಲ್ಲಿ ಅಳವಡಿಸಿರುವ ಚೈತನ್ಯ, ಬಂಜಾರ ಸಮುದಾಯದ ಆಚರಣೆಗಳಲ್ಲೊಂದಾದ ಮದುವೆಯ ಕಥಾವಸ್ತು ಚಿತ್ರದ ಹೈಲೈಟ್ ಎನ್ನುತ್ತಾರೆ ನಿರ್ದೇಶಕರು. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ವಿನು ಮನಸು ಐದು ಹಾಡುಗಳನ್ನು ನೀಡಿದ್ದಾರೆ.
ಚಿತ್ರಕ್ಕೆ ಜಂಟಿ, ಅರುಣ್, ರವಿ ಅವರು ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಶಾಂತಿಸಾಗರ (ಸೂಳೆಕೆರೆ) ಸುತ್ತಮುತ್ತ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಲೋಕೇಶ್ ನಾಯ್ಕ್, ಮಹೇಂದ್ರ ನಾಯ್ಕ್, ಜಯರಾಜ್ ನಾಯ್ಕ್, ವಿನೋದ ಬಾಯಿ, ಗೋವರ್ಧನ್ ಪೂಜಾರ್, ವಿಷ್ಣು, ಸೋನು ಚೌಹಾಣ, ಖುಷಿ ಶೆಟ್ಟಿ, ರಾಘವೇಂದ್ರ ತುಮಕೂರು, ನಿಂಗಾನಾಯ್ಕ್, ಪವಿತ್ರ, ಸ್ವಪ್ನ, ಸ್ವಾತಿ ದಿಲೀಪ್ ಕೇಳೂತ್, ರಘು ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.