![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jul 13, 2021, 3:34 PM IST
ಬೆಂಗಳೂರು : ತಮ್ಮ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿಕೊಂಡು ಹಣ ವಂಚನೆಗೆ ಮುಂದಾಗಿದ್ದ ಪ್ರಕರಣದ ಸುತ್ತ ಹುಟ್ಟಿಕೊಂಡಿದ್ದ ಚರ್ಚೆಗಳಿಗೆ ಅಂತ್ಯ ಹಾಡಲು ನಟ ದರ್ಶನ್ ಮುಂದಾಗಿದ್ದಾರೆ.
ಮಂಗಳವಾರ ಮಾಧ್ಯಮಗಳ ಎದುರು ಮಾತನಾಡಿರುವ ದರ್ಶನ್, ”ನಮ್ಮ ನಿರ್ಮಾಪಕರು ಎಂದಿಗೂ ನಮ್ಮ ನಿರ್ಮಾಪಕರೇ. ನಾನು ನಮ್ಮ ನಿರ್ಮಾಪಕರನ್ನು ಬಿಟ್ಟುಕೊಡುವುದಿಲ್ಲ. ನಿನ್ನೆ ಎಲ್ಲ ನಾವು ತೋರಿಸಿದ್ದೀವಿ. ಚೆಂಡು ಅವರ ಅಂಗಳದಲ್ಲಿ ಇತ್ತು. ಇಂದು ಅವರೂ ಮಾತನಾಡಿದ್ದಾರೆ. ಇಲ್ಲಿಗೆ ಎಲ್ಲವನ್ನೂ ಮುಗಿಸೋಣ” ಎಂದಿದ್ದಾರೆ.
”ಈಗಾಗಲೇ ಈ ಪ್ರಕರಣದ ಬಗ್ಗೆ ಎರಡು ದಿನದಿಂದ ಮಾತನಾಡುತ್ತಲೇ ಇದ್ದೀವಿ. ಇದೇನು ನಿಲ್ಲುವಂಥಹಾ ಕೇಸಾ? ಗುದ್ದಾಡಲು. ಸಾಕು ಬಿಟ್ಟುಬಿಡೋಣ. ಇದೊಂದು ಸಣ್ಣ ವಿಷಯ. ಆದರೆ ಇದು ಏಕೆ ಬಂತು ಎಂಬ ಕುತೂಹಲ ನಮಗೆ ಇತ್ತು ಹಾಗಾಗಿ ನಾವು ಮಾತನಾಡಿದೆವು. ಈಗ ಎಲ್ಲ ಮುಗಿದಿದೆ” ಎಂದಿದ್ದಾರೆ ದರ್ಶನ್.
ಉಮಾಪತಿ ಅವರು ನಿಮ್ಮ ಜೊತೆ ಸಂಪರ್ಕದಲ್ಲಿದ್ದಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ”ಸಂಪರ್ಕದಲ್ಲಿದ್ದಾರೆ. ನಾವು ಮಾತನಾಡುತ್ತಲೇ ಇದ್ದೀವಿ” ಎಂದರು. ಮುಂದುವರೆದು, ”ಇದೇನು ಮಕ್ಕಳಾಟವಾ, ನೀನು ಚಾಕ್ಲೆಟ್ ಕೊಟ್ಟಿಲ್ಲ ಬರಬೇಡ ಎಂದು ಹೇಳಲು, ನನಗೆ 43 ವರ್ಷ ವಯಸ್ಸು ಈಗಲೂ ಹೀಗೆಲ್ಲ ಮಕ್ಕಳಂತೆ ವರ್ತಿಸಲು ಸಾಧ್ಯವಾ?” ಎಂದು ಪ್ರಶ್ನಿಸಿದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.