ಮಾತನಾಡಲು ಅವಕಾಶ ಕೊಡಿ: ಸತ್ಯಜಿತ್
Team Udayavani, May 10, 2017, 11:20 AM IST
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಯಾರಿಗೆ ಗೊತ್ತಿಲ್ಲ ಹೇಳಿ. ವಿಶಿಷ್ಟ ಅಭಿನಯದ ಜೊತೆಗೆ ತಮ್ಮ ಧ್ವನಿಯಿಂದಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಸತ್ಯಜಿತ್ ಈಗ ತಮ್ಮಲ್ಲೇ ಡಬ್ಬಿಂಗ್ ಮಾಡಿಸಿ ಎಂದು ಚಿತ್ರತಂಡವೊಂದನ್ನು ಕೇಳಿಕೊಂಡಿದ್ದಾರೆ. ಅದು “ಬಣ್ಣ ಬಣ್ಣದ ಬದುಕು’.
ಈ ಚಿತ್ರದಲ್ಲಿ ಸತ್ಯಜಿತ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ ನಿರ್ದೇಶಕರು ಸತ್ಯಜಿತ್ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದಾರೆ. ಇದು ಸತ್ಯಜಿತ್‌ಗೆ ಬೇಸರ ತಂದಿದೆ. ಹಾಗಾಗಿ, ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ನಿರ್ದೇಶಕರಲ್ಲಿ ತನ್ನಲ್ಲೇ ಡಬ್ಬಿಂಗ್ ಮಾಡಿಸುವಂತೆ ಕೇಳಿಕೊಂಡರು.
“ಈ ಚಿತ್ರದಲ್ಲಿ ನನಗೆ ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನನ್ನ ಅನಾರೋಗ್ಯದ ಸಮಯದಲ್ಲಿ ನಿರ್ಮಾಪಕರು ಕೂಡಾ ಸಹಾಯ ಮಾಡಿದ್ದಾರೆ. ಆದರೆ, ನನ್ನ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದಾರೆ. ನನ್ನ ಧ್ವನಿ ಕರ್ನಾಟಕದ ಜನತೆಗೆ ಚಿರಪರಿಚಿತ. ನಾನು ನಟಿಸಿ, ಬೇರೆಯವರಿಂದ ಧ್ವನಿ ಕೊಡಿಸಿದರೆ ಅದು ಸರಿ ಕಾಣೋದಿಲ್ಲ. ಎಷ್ಟೇ ಕಷ್ಟವಾದರೂ ನಾನೇ ಡಬ್ಬಿಂಗ್ ಮಾಡುತ್ತೇನೆ’ ಎಂದು ಕೇಳಿಕೊಂಡರು.
ಕೊನೆಗೆ ನಿರ್ದೇಶಕರು, ನಿರ್ಮಾಪಕರಲ್ಲಿ ಕೇಳಿ ಮತ್ತೆ ಸತ್ಯಜಿತ್ ಅವರಿಂದಲೇ ಡಬ್ಬಿಂಗ್ ಮಾಡಿಸುವ ಭರವಸೆ ನೀಡಿದ್ದಾರೆ. ತಾನು ಅನಾರೋಗ್ಯಕ್ಕೆ ಒಳಗಾಗಿದ್ದರೂ ಕಲಾವಿದರ ಸಂಘದಿಂದ ಯಾವುದೇ ಸಹಾಯಹಸ್ತ ಬಂದಿಲ್ಲ. ನಾನು ಇಷ್ಟು ವರ್ಷ ಚಿತ್ರರಂಗದಲ್ಲಿ ಸೇವೆಸಲ್ಲಿಸಿದ್ದರೂ ಕಲಾವಿದರ ಸಂಘ ಯಾವುದೇ ಸಹಾಯ ಹಸ್ತ ಚಾಚಿಲ್ಲವೆಂದು ಬೇಸರ ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.