ಬದುಕು ಬದಲಿಸಬಲ್ಲ ಸಿನಿಮಾ ಹಾಡುಗಳು
Team Udayavani, Mar 5, 2018, 9:00 PM IST
ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ?
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ … ವಿನೋದವಾಗಲಿ …
ಅದೇನೆ ಆಗಲೀ, ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ?
ಚಿತ್ರರಂಗದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ. ಕೆಲವು ಹಾಡುಗಳು ಸಂಗೀತದಿಂದ, ಇನ್ನು ಕೆಲವು ಅವುಗಳ ಸಾಹಿತ್ಯದಿಂದ ಗಮನಸೆಳೆಯುತ್ತವೆ. ಹಾಡುಗಳೇ ಚಿತ್ರವನ್ನು ಗೆಲ್ಲಿಸಿಬಿಡುತ್ತವೆ. ಅದಕ್ಕೆ ಉದಾಹರಣೆಗಳೂ ಇವೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಅನೇಕ ಚಿತ್ರಸಾಹಿತಿಗಳ ಹಾಡು ಇಂದಿಗೂ ಸ್ಮರಣೀಯ. ಸಾಹಿತ್ಯದ ದೃಷ್ಟಿಯಿಂದ ನೋಡಿದಾಗ ಕನ್ನಡ ಗೀತ ಸಾಹಿತ್ಯ ಉನ್ನತವಾಗಿಯೇ ಇದೆ. ಕು.ರ.ಸೀ., ವಿಜಯನಾರಸಿಂಹ, ಸೋರಟ್ ಅಶ್ವಥ್, ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ಹಂಸಲೇಖ ಅವರಂತಹ ಹಿರಿಯರ ಹಾಡಿನ ಸಾಲುಗಳನ್ನು ನೆನೆಯದವರಿಲ್ಲ.
ಇಂಪಾದ, ಮನಸ್ಸಿಗೆ ಮುದ ನೀಡುವ ಹಾಡುಗಳು ಎಂದಿಗೂ ಜನ ಮಾನಸದಲ್ಲಿ ತಮ್ಮದೇ ನೆಲೆ ಕಂಡುಕೊಂಡಿವೆ. ಕೆಲವು ಚಿತ್ರಗಳು, ಹಾಡುಗಳು ಅನೇಕರ ಬದುಕನ್ನೇ ಬದಲಿಸಿವೆ. ಹಾಡಿಗೆ ಸಂಗೀತ ಹೇಗೋ, ಸಾಹಿತ್ಯವೂ ಹಾಗೇ ಮುಖ್ಯ. ಸರಳ, ಎಲ್ಲರಿಗೂ ಅರ್ಥವಾಗುವ ಪದಗಳ ಮೂಲಕ ರೂಪ ತಳೆದ ಹಾಡುಗಳು ಕೇವಲ ಕೇಳಲಷ್ಟೇ ಅಲ್ಲ, ಆ ಅರ್ಥಪೂರ್ಣ ನುಡಿಗಳು ಜೀವನ ಸಾರವನ್ನು ತಿಳಿಸುತ್ತವೆ.
ಅಂತಹ ಹಾಡುಗಳ ವಿಶೇಷ ಪುಟಗಳು ಈ ಬಾರಿಯ “ರೂಪತಾರಾ’ದ ಸ್ಪೆಷಾಲಿಟಿ. ಈ ಹಾಡುಗಳು ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ಮಹತ್ವ ಪಡೆದಂಥವು. ಬೇಸರವಾದಾಗ ಈ ಹಾಡುಗಳನ್ನು ಕೇಳುತ್ತಿದ್ದರೆ, ಅವು ಮನಸ್ಸಿಗೆ ಹಿತ ನೀಡುತ್ತವೆ, ನೀತಿ ಹೇಳುತ್ತವೆ. ಮಾರ್ಗದರ್ಶಕ ಪದಗಳ ಗಾರುಡಿ ಈ ಹಾಡುಗಳಲ್ಲಿವೆ. ಬದುಕು ಬದಲಿಸಬಲ್ಲ ಅಂತಹ ಹಲವು ಅಪರೂಪದ ಹಾಡುಗಳ್ಯಾವುವು ಎಂಬ ಕುತೂಹಲವಿದ್ದರೆ, ಮಾರ್ಚ್ ತಿಂಗಳ “ರೂಪತಾರಾ’ ಓದಿ ಆನಂದಿಸಿ …
ಹುಟ್ಟು-ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲೀ?
ಹೂವು-ಮುಳ್ಳು ಎರಡು ಉಂಟು ಬಾಳಲತೆಯಲಿ!
ದುರಾಸೆಯೇತಕೆ? ನಿರಾಸೆಯೇತಕೆ?
ಅದೇನೆ ಬಂದರೂ, ಅವನ ಕಾಣಿಕೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.