ಲಿಖಿತ್ ಶೆಟ್ಟಿಯ ‘ಫುಲ್ ಮೀಲ್ಸ್’ ತೆರೆಗೆ ಬರಲು ರೆಡಿ
Team Udayavani, Feb 10, 2023, 4:17 PM IST
ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಸಿಗುವ “ಫುಲ್ ಮೀಲ್ಸ್’ ಬಗ್ಗೆ ಕೇಳಿರುತ್ತೀರಿ. ಈಗ ಇದೇ “ಫುಲ್ ಮೀಲ್ಸ್’ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಥಿಯೇಟರ್ನಲ್ಲಿ ಸಿಗುವ ಈ “ಫುಲ್ ಮೀಲ್ಸ್’ ಪ್ರೇಕ್ಷಕರಿಗೆ ಮನಸ್ಸಿಗೆ ಫುಲ್ ಖುಷಿ ತುಂಬಿಸುತ್ತದೆ ಎಂಬುದು ಚಿತ್ರತಂಡದ
ಮಾತು. ಇತ್ತೀಚೆಗಷ್ಟೇ ಸದ್ದಿಲ್ಲದೆ, ಈ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೀರೋ ಇಂಟ್ರಡಕ್ಷನ್ ಚಿತ್ರೀಕರಣ ನಡೆಯುತ್ತಿದೆ. ಇದೇ ವೇಳೆ ಪತ್ರಕರ್ತರು ಮತ್ತು ಮಾಧ್ಯಮಗಳನ್ನು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಆಹ್ವಾನಿಸಿದ್ದ ಚಿತ್ರತಂಡ, “ಫುಲ್ ಮೀಲ್ಸ್’ ಬಗ್ಗೆ ಒಂದಷ್ಟು ಮಾತನಾಡಿತು.
“ಫುಲ್ ಮೀಲ್ಸ್’ ಸಿನಿಮಾದಲ್ಲಿ ಲಿಖೀತ್ ಶೆಟ್ಟಿ, ಖುಷಿ, ತೇಜಸ್ವಿನಿ ಶರ್ಮ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ವಿಜಯ್ ಚೆಂಡೂರ್, ಗಣೇಶರಾವ್ ಕೇಸರ್ಕರ್, ರಾಜೇಶ ನಟರಂಗ, ಸಾಧುಕೋಕಿಲ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮೊದಲಿಗೆ “ಫುಲ್ ಮೀಲ್ಸ್’ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ಮಾಪಕ ಲಿಖೀತ್ ಶೆಟ್ಟಿ, “ಇದೊಂದು ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಸಬೆjಕ್ಟ್ ಸಿನಿಮಾ. ಮೊದಲ ಹಂತದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶೂಟಿಂಗ್ ನಡೆಸುತ್ತಿದ್ದೇವೆ. ಒಬ್ಬ ಫೋಟೋಗ್ರಾಫರ್ನ ಕಥೆ ಈ ಸಿನಿಮಾದಲ್ಲಿದೆ. ಮದುವೆ ಮನೆಗೆ ಹೋದ ಪೋಟೋಗ್ರಾಫರ್ ಒಬ್ಬನಿಗೆ ಮದುಮಗಳ ಮೇಲೆ ಲವ್ ಆದರೆ, ನಂತರ ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ’ ಎಂದು ಕಥಾಹಂದರ ಬಿಚ್ಚಿಟ್ಟರು.
ಇನ್ನು ಚಿತ್ರದ ನಾಯಕಿ ಖುಷಿ ರವಿ, ಸಿನಿಮಾದಲ್ಲಿ ಪೂಜಾ ಎಂಬ ಮದುಮಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ಮತ್ತೂಬ್ಬ ನಾಯಕಿ ತೇಜಸ್ವಿನಿ ಶರ್ಮಾ ಮೇಕಪ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಮೊದಲ ಬಾರಿಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಿದೆ’ ಎಂಬುದು ಇಬ್ಬರೂ ನಾಯಕಿಯರ ಒಕ್ಕೊರಲ ಮಾತು. “ಎಲ್ಲ ಫೋಟೋಗ್ರಾಫರ್ಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಸಿನಿಮಾದಲ್ಲಿದೆ’ ಎಂಬುದು ನಿರ್ದೇಶಕ ವಿನಾಯಕ್ ಮಾತು.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.