2019ರಲ್ಲಿ ಮತ್ತೊಮ್ಮೆ ನಟಿಸುತ್ತಾರಾ ರಮ್ಯ?
Team Udayavani, Jun 10, 2018, 11:01 AM IST
ಶಿವರಾಜಕುಮಾರ್ ಅಭಿನಯದ “ಆರ್ಯನ್’ ನಂತರ ನಟನೆಯಿಂದ ಮತ್ತು ಚಿತ್ರರಂದಿಂದ ದೂರವೇ ಉಳಿದಿದ್ದ ನಟಿ ರಮ್ಯ, ಇದೀಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ನಟಿಸುವ ಹಿಂಟ್ ಕೊಟ್ಟಿದ್ದಾರೆ. ಮುಂದಿನ ವರ್ಷ ಅಂದರೆ 2019ರಲ್ಲಿ ಮತ್ತೊಮ್ಮೆ ಚಿತ್ರಗಳಲ್ಲಿ ನಟಿಸಬಹುದು ಎಂದು ಹೇಳಿಕೊಂಡಿದ್ದಾರೆ. ಹೌದು, ಮುಂದಿನ ವರ್ಷ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂದು ರಮ್ಯ ಸುಳಿವು ಕೊಟ್ಟಿದ್ದಾರೆ.
ಇತ್ತೀಚೆಗೆ ಟ್ವಿಟರ್‌ನಲ್ಲಿ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಜೊತೆಗೆ ರಮ್ಯ ಸಂಭಾಷಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಮ್ಯ ಅವರನ್ನು ಮತ್ತೆ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೆ ಬಯಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಿರುವ ರಮ್ಯ, 2019ರ ನಂತರ ಎಂದು ಉತ್ತರಿಸಿದ್ದಾರೆ. ಹೀಗೆ ಉತ್ತರಿಸುವ ಮೂಲಕ 2019ರ ನಂತರ ಮತ್ತೊಮ್ಮೆ ಚಿತ್ರಗಳಲ್ಲಿ ನಟಿಸುವ ಸುಳಿವು ನೀಡಿದ್ದಾರೆ.
ರಮ್ಯ ಕಡೆಯದಾಗಿ ಒಪ್ಪಿ ನಟಿಸಿದ ಚಿತ್ರ ಎಂದರೆ ಅದು “ಆರ್ಯನ್’. ಆದರೆ, ಕೊನೆಯದಾಗಿ ಬಿಡುಗಡೆಯಾಗಿದ್ದು “ನಾಗರಹಾವು’. ಅದಕ್ಕೆ ಕಾರಣವೂ ಇದೆ. “ನಾಗರಹಾವು’ ಚಿತ್ರದ ಚಿತ್ರೀಕರಣ “ಆರ್ಯನ್’ಗಿಂತ ಮುನ್ನ ಪ್ರಾರಂಭವಾದರೂ, ಸಾಕಷ್ಟು ತಡವಾದ್ದರಿಂದ, “ಆರ್ಯನ್’ ಮೊದಲು ಬಿಡುಗಡೆಯಾಗಿ, ಅದರ ನಂತರ “ನಾಗರಹಾವು’ ಬಿಡುಗಡೆಯಾಯಿತು.
“ಆರ್ಯನ್’ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡ ರಮ್ಯ, ಆ ನಂತರ ಅಭಿನಯಿಸಲೇ ಇಲ್ಲ. ಈ ಮಧ್ಯೆ ಅವರು ಒಂದೆರೆಡು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ರಮ್ಯ ಮಾತ್ರ ನಟನೆಯಿಂದ ದೂರವಾಗಿದ್ದರು. ಈಗ ಅವರು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಇದ್ದು, ಆ ಚುನಾವಣೆಗಳ ನಂತರ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಒಂದು ಪಕ್ಷ ಚುನಾವಣೆಗಳಲ್ಲಿ ಗೆದ್ದರೆ ರಮ್ಯ ಸಕ್ರಿಯ ರಾಜಕಾರಣ ಮಾಡಬಹುದು, ಇಲ್ಲವಾದರೆ ಮತ್ತೊಮ್ಮೆ ಅಭಿನಯದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಮುಂಬರುವ 2019ರ ನಂತರ ಎಂದು ರಮ್ಯ ಸೂಕ್ಷ್ಮವಾಗಿ ಉತ್ತರ ಕೊಟ್ಟಿದ್ದಾರೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ರಮ್ಯ ಮತ್ತೆ ನಟಿಸುತ್ತಾರಾ ಎಂಬ ಪ್ರಶ್ನೆಗೆ ಯಾವುದಕ್ಕೂ ಮುಂದಿನ ವರ್ಷದವರೆಗೂ ಕಾಯಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.