ಪಿಸುಮಾತಿನಲ್ಲಿ ʼಲವ್ ಬರ್ಡ್ಸ್ʼ
Team Udayavani, Jan 18, 2023, 1:36 PM IST
“ಲವ್ ಮಾಕ್ಟೇಲ್’ ಸಿನಿಮಾದ ಸಕ್ಸಸ್ ಬಳಿಕ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರುತ್ತಿದೆ. ಈ ವರ್ಷದ ಆರಂಭದಲ್ಲಿಯೇ “ಮಿ. ಬ್ಯಾಚುಲರ್’ ಸಿನಿಮಾದ ಮೂಲಕ ಒಟ್ಟಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ, ಶೀಘ್ರದಲ್ಲಿಯೇ “ಲವ್ ಬರ್ಡ್ಸ್’ ಮೂಲಕ ಮತ್ತೂಮ್ಮೆ ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ.
ಹೌದು, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯಾಗಿ ಅಭಿನಯಿಸಿರುವ ಮತ್ತೂಂದು ಚಿತ್ರ “ಲವ್ ಬರ್ಡ್ಸ್’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಪಿ. ಸಿ ಶೇಖರ್ ನಿರ್ದೇಶನದಲ್ಲಿ ಮತ್ತು ಕಡ್ಡಿಪುಡಿ ಚಂದ್ರು ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಲವ್ ಬರ್ಡ್ಸ್’ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ “ಲವ್ ಬರ್ಡ್ಸ್’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಇನ್ನು “ಲವ್ ಬರ್ಡ್ಸ್’ ಸಿನಿಮಾದ ಬಗ್ಗೆ ಕೃಷ್ಣ ಮತ್ತು ಮಿಲನಾ ಇಬ್ಬರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುವ ಕೃಷ್ಣ ಮತ್ತು ಮಿಲನಾ ಜೋಡಿ, “ನಾವಿಬ್ಬರೂ ತೆರೆಯ ಮೇಲೆ ಮತ್ತೆ ಜತೆಯಾಗಿ ಕಾಣಿಸಿಕೊಳ್ಳಬೇಕು, ಅದಕ್ಕೆ ಸ್ಕ್ರಿಪ್ಟ್ ಬರೆಯಬೇಕು ಎಂದು ಯೋಚಿಸಿದ್ದೆವು. ಆಗ ಈ ಸಿನಿಮಾದ ಆಫರ್ ಬಂದಿತು. ಸಿನಿಮಾದ ಸ್ಕ್ರಿಪ್ಟ್ ಕೇಳಿದಾಗ ನಮ್ಮಿಬ್ಬರಿಗೂ ಕನೆಕ್ಟ್ ಆಯಿತು. “ಲವ್ ಮಾಕ್ಟೇಲ್’ಗಿಂತ ವಿಭಿನ್ನವಾಗಿರುವ ಈ ಸಿನಿಮಾ ಆಡಿಯನ್ಸ್‌ಗೆ ಹೊಸ ಅನುಭವ ತರಲಿದೆ’ ಎನ್ನುತ್ತದೆ.
“ಹೊಸದಾಗಿ ಮದುವೆಯಾದ ಆಧುನಿಕ ಕಾಲಘಟ್ಟದ ದಂಪತಿಯ ಕತೆಯನ್ನು ಚಿತ್ರ ಒಳಗೊಂಡಿದೆ. ಕಳೆದ ಒಂದೆರಡು ದಶಕಗಳಲ್ಲಿ ಮದುವೆಯ ಬಗೆಗಿನ ದೃಷ್ಟಿಕೋನಗಳು ಬದಲಾಗಿವೆ. ಈಗ ಮಹಿಳೆ ಪುರುಷನ ಮೇಲೆ ಅವಲಂಬಿತವಾಗಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಿರುವುದು ಮನೆಯಲ್ಲಿನ ಅಧಿಕಾರದ ದೃಷ್ಟಿಕೋನವನ್ನು ಬದಲಾಯಿಸಿದೆ. ಇದೆಲ್ಲವನ್ನು ಚಿತ್ರ ಒಳಗೊಂಡಿರಲಿದೆ’ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕ ಪಿ. ಸಿ ಶೇಖರ್ ಮಾತು.
ಮ್ಯೂಸಿಕಲ್ ಲವ್ ಸ್ಟೋ ರಿಯಾಗಿರುವ “ಲವ್ ಬರ್ಡ್ಸ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಕೃಷ್ಣ, ಮಿಲನಾ ಅವರೊಂದಿಗೆ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್, ಅವಿನಾಶ್ ಮತ್ತಿತರರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ “ಲವ್ ಬರ್ಡ್ಸ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಫೆಬ್ರವರಿ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.