ಲವ್ಗೆ ಜೈ ಅಂದವರು…
Team Udayavani, Nov 25, 2017, 3:45 PM IST
“ವೈರ’ ನಂತರ ನವರಸನ್ ಕೇಳಿದ ಕಥೆಗಳೆಷ್ಟು ಗೊತ್ತಾ? ಬರೋಬ್ಬರಿ ಇಪ್ಪತ್ತು! ಆ ಪೈಕಿ ಅವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಒಂದು. ಅದೀಗ ಶುರುವಾಗೋಕೆ ಅಣಿಯಾಗಿದೆ. ಅಂದಹಾಗೆ, ನವರಸನ್ ಅಭಿನಯಿಸುತ್ತಿರುವ ಚಿತ್ರಕ್ಕೆ “ಜೈ ಲವ್ಸ್ ಜಾನು’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಮೂಲಕ ಪ್ರಾಣ್ ಪೂಜಾರಿ ನಿರ್ದೇಶಕರಾಗುತ್ತಿದ್ದಾರೆ. ಇವರಿಗೆ ಇದು ಮೊದಲ ಸಿನಿಮಾ.
“ರಥಾವರ’ ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ “ಜೈ ಲವ್ಸ್ ಜಾನು’ ಮಾಡುತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಪಕ್ಕಾ ಲವ್ಸ್ಟೋರಿ ಚಿತ್ರ. ಹಾಗಾದರೆ, ಇಲ್ಲಿ ಕಥೆ ಏನು? ಸಿವಿಲ್ ಎಂಜಿನಿಯರ್ ಆಗಿರುವ ಹೀರೋ ಒಬ್ಬನ ಪ್ರೇಮಕಥೆ ಇಲ್ಲಿ ಹೈಲೈಟ್. ಒಂದು ಲವ್ ಜರ್ನಿಯಲ್ಲಿ ಅವನ ಲವ್ ಬ್ರೇಕಪ್ ಆದಾಗ, ಅವನ ಇನ್ನೊಂದು ಬದುಕು ಅನಾವರಣಗೊಳ್ಳುತ್ತೆ. ಅದೇ ಚಿತ್ರದ ಒನ್ಲೈನ್’ ಎನ್ನುತ್ತಾರೆ ನಾಯಕ ನವರಸನ್.
ಕನ್ನಡದಲ್ಲಿ ಸಾಕಷ್ಟು ಲವ್ಸ್ಟೋರಿಗಳು ಬಂದಿವೆ. ಇಲ್ಲೂ ಲವ್ಸ್ಟೋರಿ ಇದೆಯಾದರೂ, ಅದೊಂದು ಹೊಸತನದಿಂದ ಕೂಡಿರುತ್ತೆ. ಈಗಿನ ಟ್ರೆಂಡ್ಗೆ ತಕ್ಕಂತಹ ಕಥೆ ಆಯ್ಕೆ ಮಾಡಿಕೊಂಡಿದ್ದು, ನಿರೂಪಣೆಯಲ್ಲೂ ಚಿತ್ರವನ್ನು ವಿಭಿನ್ನವಾಗಿ ತೋರಿಸಬೇಕು ಎಂಬುದು ನಮ್ಮ ಚಿತ್ರತಂಡದ ಯೋಚನೆ ಎಂಬುದು ನವರಸನ್ ಮಾತು. ಇನ್ನು, ಈ ಚಿತ್ರ ಗೀತಾ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ತಯಾರಾಗುತ್ತಿದೆ.
ಸದ್ಯಕ್ಕೆ ನವರಸನ್ ಚಿತ್ರಕ್ಕೆ ಹೀರೋ ಅನ್ನೋದು ಪಕ್ಕಾ. ನಾಯಕಿಯ ಹುಡುಕಾಟ ನಡೆದಿದೆ. ಜನವರಿಯಲ್ಲಿ “ಜೈ ಮತ್ತು ಜಾನು’ ಲವ್ಸ್ಟೋರಿಗೆ ಚಾಲನೆ ಸಿಗಲಿದೆ. ಉಳಿದಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕಿದೆ. ಮಡಿಕೇರಿ, ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ರವಿಬಸ್ರೂರ್ ಅವರ ಸಂಗೀತವಿದೆ. ನಿತಿನ್ ಅವರು ಕ್ಯಾಮೆರಾ ಹಿಡಿಯಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.