ಸರ್ವಂ ಪ್ರೇಮ ಮಯಂ


Team Udayavani, Jun 26, 2017, 10:32 AM IST

sarvam-prema-maym.jpg

ಆಷಾಢಕ್ಕೂ ಮುನ್ನ ಒಂದಷ್ಟು ಸಿನಿಮಾಗಳು ಮುಹೂರ್ತ ಕಂಡಿವೆ. ಆ ಪೈಕಿ ಹೊಸಬರ ಸಿನಿಮಾಗಳೇ ಹೆಚ್ಚು. ಅಂತಹ ಹೊಸಬರ ಚಿತ್ರಗಳ ಸಾಲಿಗೆ “ಸರ್ವಂ ಪ್ರೇಮಂ’ ಚಿತ್ರವೂ ಸೇರಿದೆ. ಶಿವರಾಜ್‌ ಚಿತ್ರದ ನಿರ್ದೇಶಕರು. ನಿರ್ಮಾಣವೂ ಇವರದೇ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಪ್ರೀತಿ ಕುರಿತಾದ ಸಿನಿಮಾ. ಇದರೊಂದಿಗೆ ರಾಜಕೀಯ, ದ್ವೇಷ, ನೋವು, ನಲಿವು, ಹಾಸ್ಯ, ಅನುಬಂಧ, ಬಾಂಧವ್ಯ ಹೀಗೆ ಇನ್ನೂ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಎಲ್ಲರ ಬದುಕಿನಲ್ಲೂ ತರಹೇವಾರಿ ಭಾವನೆಗಳಿರುತ್ತವೆ. ಅವೆಲ್ಲವನ್ನೂ ಒಂದು ಕಡೆ ಕೂಡಿಸಿ, ಕ್ಲೈಮ್ಯಾಕ್ಸ್‌ನಲ್ಲಿ ಪ್ರೀತಿಯೇ ದೊಡ್ಡದು ಎಂಬ ಸಂದೇಶ ಸಾರುವ ಪ್ರಯತ್ನ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಕಮ್‌ ನಿರ್ಮಾಪಕ ಶಿವರಾಜ್‌. ಇನ್ನು, ಈ ಚಿತ್ರಕ್ಕೆ ಆನಂದ್‌ ಹೀರೋ. ಅವರಿಲ್ಲಿ ಎಂಜಿನಿಯರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆನಂದ್‌ ಮೂರು ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ.

ಆನಂದ್‌ಗೆ ಇಲ್ಲಿ ಸುಹಾನ ಎಂಬ ನಾಯಕಿ ನಟಿಸುತ್ತಿದ್ದಾರೆ. ಅವರಿಲ್ಲಿ ಹಳ್ಳಿ ಹುಡುಗಿಯೊಬ್ಬಳು ಪಟ್ಟಣ್ಣಕ್ಕೆ ಬಂದು ಆಶ್ರಮವೊಂದರಲ್ಲಿ ಟೀಚರ್‌ ಆಗಿರುವ ಪಾತ್ರ ಮಾಡುತ್ತಿದ್ದಾರೆ. ಒಂದು ಸಂದರ್ಭದಲ್ಲಿ ನಾಯಕನ ಪರಿಚಯವಾಗಿ, ಆ ಪರಿಚಯ ಪ್ರೀತಿಗೂ ತಿರುಗಿ, ಮುಂದೆ ಏನೆಲ್ಲಾ ರಾದ್ಧಾಂತ ಆಗುತ್ತೆ ಅನ್ನೋದು ಒನ್‌ಲೈನ್‌ ಎಂಬುದು ಸುಹಾನ ಮಾತು. ಹಂಸಲೇಖ ಅವರ ಶಿಷ್ಯ ಲೋಕಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮಾಗಡಿ ಲೋಕೇಶ್‌ ಗೀತೆಗಳನ್ನು ಬರೆದಿದ್ದಾರೆ.

ಜಯ ಮಲ್ಲಿಕಾರ್ಜುನ ಅವರು ಮಾತುಗಳನ್ನು ಪೋಣಿಸಿದ್ದಾರೆ. ಪ್ರವೀಣ್‌ಶೆಟ್ಟಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಉಳಿದಂತೆ “ಸರ್ವಂ ಪ್ರೇಮಂ’ ಚಿತ್ರದಲ್ಲಿ ಹಿರಿಯ ನಟ ಶ್ರೀನಿವಾಸಪ್ರಭು, ಶೋಭರಾಜ್‌, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಇತರರು ನಟಿಸುತ್ತಿದ್ದಾರೆ. ಇನ್ನು, ಶಿವರಾಜ್‌ ಜತೆ ಎ.ಜಿ. ಪ್ರಭಾಕರ್‌ ಮತ್ತು  ಕೆ.ಆರ್‌.ಅಶ್ವತ್‌ನಾರಾಯಣ್‌ ಸಹ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಇತ್ತೀಚೆಗೆ ಚಿತ್ರತಂಡ ಮುಹೂರ್ತ ಆಚರಿಸಿಕೊಂಡ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಭಗವಾನ್‌ ಆಗಮಿಸಿದ್ದರು. ತಮ್ಮ ಶಿಷ್ಯನ ಚಿತ್ರಕ್ಕೆ ಶುಭ ಹಾರೈಸಿದ ಅವರು, ಈ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು. ಅಂದಹಾಗೆ, ತುಂಬಾ ಉತ್ಸಾಹದಲ್ಲಿರುವ ತಂಡ, ಕೇವಲ ಮೂರು ತಿಂಗಳಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ, ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಮಾಡಿದೆ.

ಟಾಪ್ ನ್ಯೂಸ್

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naa ninna bidalaare movie releasing on Nov 29

Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್‌ ಬಂತು: ನ.29ಕ್ಕೆ ಸಿನಿಮಾ ತೆರೆಗೆ

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Ullala-Swim-1

Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.