![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Jan 30, 2020, 3:30 PM IST
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಲವ್ ಮೊಕ್ಟೈಲ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಿಕ್ಕಿರೋ ರೆಸ್ಪಾನ್ಸ್ನಿಂದ ಚಿತ್ರತಂಡದ ಸಂತಸ ದುಪ್ಪಟ್ಟಾಗಿದೆ. ಇದೇ ಸಿನಿ ಶುಕ್ರವಾರ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದಿರುವ ನಟ ಡಾರ್ಲಿಂಗ್ ಕೃಷ್ಣ ಲವ್ ಮೊಕ್ಟೈಲ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಲವ್ ಮೊಕ್ಟೈಲ್ ಚಿತ್ರದ ಒಂದಷ್ಟು ವೆರಿ ಇಂಟ್ರಸ್ಟಿಂಗ್ ಅಂಶಗಳು ಇಲ್ಲಿವೆ. ಲವ್ ಮೊಕ್ಟೈಲ್ ಚಿತ್ರ ಇಷ್ಟು ರೆಸ್ಪಾನ್ಸ್ ಪಡೆದುಕೊಂಡಿದೆ ಅಂದ್ರೆ ಅದ್ರ ಎಲ್ಲಾ ಕ್ರೆಡಿಟ್ಸ್ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಅವ್ರಿಗೆ ಸಲ್ಲಬೇಕು. ಸಿನಿಮಾ ಮೇಲಿನ ಇವ್ರ ಪ್ಯಾಶನ್ ಹಾಗೂ ಕೆಲಸದಲ್ಲಿನ ಡೆಡಿಕೇಶನ್ ಇಂದು ಲವ್ ಮೊಕ್ಟೈಲ್ ಸಿನಿಮಾ ಆಗೋಕೆ ಕಾರಣ.
ಡಾರ್ಲಿಂಗ್ ಕೃಷ್ಣ ಬೆಂಗಳೂರಿನಿಂದ ಮೈಸೂರಿಗೆ ಪಯಣ ಬೆಳೆಸುವಾಗ ಹೊಳೆದ ಚಿಕ್ಕ ಸ್ಟೋರಿ ಲೈನ್ ಇಂದು ಲವ್ ಮೊಕ್ಟೈಲ್ ಚಿತ್ರವಾಗಿ ಸಿದ್ದವಾಗಿದೆ. ನಂತರ ನಟಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಇಬ್ಬರು ಕೂತು ಇಡೀ ಕಥೆ ಹೆಣೆದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲ್ಲವನ್ನು ಮಾಡಿ ಮುಗಿಸಲು ತೆಗೆದುಕೊಂಡಿದ್ದು ಕೇವಲ ಇಪ್ಪತ್ತು ದಿವಸ.
ಲವ್ ಮೊಕ್ಟೈಲ್ ಚಿತ್ರದ ವೆರಿ ಇಂಟ್ರಸ್ಟಿಂಗ್ ಸಂಗತಿಯೊಂದಿದೆ ಅದನ್ನು ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಹೌದು, ಈ ಚಿತ್ರಕ್ಕೆ ಯಾವುದೇ ಮೇಕಪ್ ಮ್ಯಾನ್ ಇಲ್ಲ, ಕಾಸ್ಟ್ಯೂಮ್ ಡಿಸೈನರ್ ಇಲ್ಲ. ಎಲ್ಲವನ್ನು ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಇಬ್ಬರೇ ನಿಭಾಯಿಸಿದ್ದಾರೆ. ಮಿಲನ ನಾಗರಾಜ್ ತಮ್ಮ ಮೇಕಪ್ ಮಾಡಿಕೊಳ್ಳುವುದರ ಜೊತೆ ಎಲ್ಲಾ ಆರ್ಟಿಸ್ಟ್ಗಳಿಗೂ ಚಿತ್ರದುದ್ದಕ್ಕೂ ತಾವೇ ಮೇಕಪ್ ಮಾಡಿದ್ದಾರೆ. ಕಾಸ್ಟ್ಯೂಮ್ ಜವಾಬ್ದಾರಿ ಕೂಡ ಇವರಿಬ್ಬರದ್ದೇ.
ಅಷ್ಟೆಲ್ಲ ಶ್ರಮ ಪಟ್ಟಿದಕ್ಕೆ ಸಿನಿಮಾ ತುಣುಕುಗಳು ಇಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ. ಚಿತ್ರದ ಬಗ್ಗೆ ಎಲ್ಲ ಕಡೆಗಳಲ್ಲೂ ಒಳ್ಳೆಯ ಟಾಕ್ ಕ್ರಿಯೇಟ್ ಆಗಿದೆ. ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರ ಚಿತ್ರಮಂದಿರದಲ್ಲಿ ಸಿನಿ ರಸಿಕರ ಮನಸ್ಸಿಗೆ ಎಷ್ಟು ಇಷ್ಟವಾಗುತ್ತೆ ಅನ್ನೋದನ್ನ ಕಾದು ನೋಡಬೇಕು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.