ಕಾಲೇಜು ಹುಡುಗರ ಪ್ರೇಮರಥ
Team Udayavani, Aug 28, 2017, 10:44 AM IST
ಕನ್ನಡದಲ್ಲಿ ಈಗಂತೂ ಹೊಸಬರದೇ ಕಲರವ. ಅದರಲ್ಲೂ ಸದ್ದಿಲ್ಲದೆಯೇ ಹೊಸತನವುಳ್ಳ ಸಿನಿಮಾಗಳನ್ನು ಮಾಡಿ ಮುಗಿಸುವ ಮೂಲಕ ಮೆಲ್ಲನೆ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಈಗ “ಮಹಾರಥ’ ಎಂಬ ಹೊಸಬರ ಚಿತ್ರವೂ ಹೊಸ ಸೇರ್ಪಡೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ. ಅಂದಹಾಗೆ, ರನ್ನ ಸೂಪರ್ ಮೂವೀಸ್ ಬ್ಯಾನರ್‌ನಡಿ ತಯಾರಾಗಿರುವ “ಮಹಾರಥ’ ಚಿತ್ರದ ಮೂಲಕ ಪ್ರೀತಮ್ ನಿಗಡೆ ನಿರ್ದೇಶಕರಾಗುತ್ತಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ನಿರ್ಮಾಣದ ಹೊಣೆಯನ್ನೂ ಪ್ರೀತಮ್ ನಿಗಡೆ ಹೊತ್ತಿದ್ದಾರೆ. ಬಹುತೇಕ ಉತ್ತರ ಕರ್ನಾಟಕ ಮಂದಿ ಸೇರಿಕೊಂಡು ಮಾಡಿರುವ ಈ ಚಿತ್ರ ಕಾಲೇಜು ಪ್ರೇಮ ಕಥಾನಕವನ್ನು ಹೊಂದಿದೆ. ಒಂದು ಮುಗ್ಧಪ್ರೇಮ ಕಥೆಯ ಜತೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಅಂಶಗಳನ್ನು ಹೊಂದಿದೆ. ಒಂದು ಹಂತದಲ್ಲಿ ಹಾರರ್‌ಗೂ ಸ್ಪರ್ಶ ಕೊಟ್ಟಿದ್ದು, ಈಗಿನ ಕಾಲೇಜು ಲೋಕದಲ್ಲಿ ಅರಳುವ ಪ್ರೀತಿ, ಹೇಗಿರುತ್ತೆ, ಹೇಗೆಲ್ಲಾ ಆಗುತ್ತೆ, ಯುವಕರು ಪ್ರೀತಿ ಹಿಂದೆ ಹೋದರೆ ಏನೆಲ್ಲಾ ಎದುರಾಗುತ್ತೆ ಎಂಬುದು “ಮಹಾರಥ’ದ ಕಥೆ.
ಇನ್ನು, ನಾಯಕರಾಗಿ ನಟಿಸುತ್ತಿರುವ ನವೀನ ಮತ್ತು ಪ್ರೀತಮ್‌ಗೆ ಇದು ಮೊದಲ ಸಿನಿಮಾ. ಇವರಿಗೆ ಅಪೂರ್ವಾ ನಾಯಕಿ. ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಮನಸಿನ ಚಿತ್ತಾರ’ ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಹೊಸಬರೇ ತುಂಬಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಬ್ಯಾಂಕ್ ಜನಾರ್ಧನ್, ರಮೇಶ್ ಪಂಡಿತ್, “ಕಾಮಿಡಿ ಕಿಲಾಡಿ’ ಖ್ಯಾತಿಯ ಪ್ರವೀಣ್‌ಕುಮಾರ್, ಸಂಜು, “ಹಳ್ಳಿಮೇಷ್ಟ್ರು’ ಖ್ಯಾತಿಯ ಕಪ್ಪೆರಾಯ , ಹೊಸ ಪ್ರತಿಭೆಗಳಾದ ವಿಠuಲ್ ಆನಂದ, ಅಭಿಜೀತ್, ರೇವಣ್ಣ, ಮಹೇಶ ಸೇರಿದಂತೆ ಯುವ ಪ್ರತಿಭೆಗಳು ನಟಿಸಿದ್ದಾರೆ.
ಚಿತ್ರದ ಬಹುತೇಕ ಚಿತ್ರೀಕರಣ ರನ್ನ ಮುಧೋಳ, ಜಮಖಂಡಿ, ಸಂಕೇಶ್ವರ, ಗೋಕಾಕ, ನಿಡಸೋಸಿ ಸೇರದಂತೆ ಉತ್ತರ ಕರ್ನಾಟಕದ ಕೆಲವು ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಚಂದ್ರಶೇಖರ ಜನವಾಡೆ ಮತ್ತು ಅಮೀತ್ ಚೌಗುಲೆ ಸಂಗೀತವಿದೆ. ಅತುಲ್ ಲೋಂಡೆ ರಾಗ ಸಂಯೋಜಿಸಿದ್ದಾರೆ. ರೋಹನ್ ದೇಸಾಯಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಿ.ಬಿ.ಪಾಟೀಲ, ಕಾಡೇಶ ಬಸ್ತವಾಡಿ, ಚಂದ್ರಶೇಖರ ಜನವಾಡೆ, ಕೃಷ್ಣಾ ಚೌಧರಿ ಗೀತೆ ರಚಿಸಿದ್ದಾರೆ. ಸಂತೋಷ ವೆಂಕಿ, ಅಮೀತ್ ಚೌಗುಲೆ, ಜೋಗಿ ಸುನೀತಾ, ಮಹಾನಂದಾ ಗೊಸಾವಿ, ಸಪ್ನಾ ಉಪಾಧ್ಯ ಹಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.