ಯುವ ಮನಸ್ಸುಗಳಿಗೆ ಪ್ರೇಮಪಾಠ : ಮುಗಿಲ್‌ಪೇಟೆ
Team Udayavani, Nov 21, 2021, 8:37 AM IST
ಒಂದು ಸುಂದರವಾದ ಪ್ರೀತಿಯಲ್ಲಿ ಅಪನಂಬಿಕೆ ಮೂಡಲು, ಸಂಬಂಧಗಳು ಹಾಳಾಗಲು ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಕಾರಣವಾಗಬಹುದು. ಇಂಥ ಚಿಕ್ಕ ಸಂಗತಿಗಳನ್ನು ಬದಿಗಿಟ್ಟು ಬದುಕು ಸಾಗಿಸಿದರೆ, ಅದು ಸುಂದರವಾಗಿರುತ್ತದೆ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಮುಗಿಲ್‌ಪೇಟೆ’.
ಅಲ್ಲಲ್ಲಿ ಕೇಳಿರುವ, ಕೆಲವೊಮ್ಮೆ ನಮ್ಮ ಜೀವನದಲ್ಲೂ ನಡೆಯಬಹುದಾದ ಇಂಥ ವಿಷಯವನ್ನು ಇಟ್ಟುಕೊಂಡು “ಮುಗಿಲ್‌ಪೇಟೆ’ ಸಿನಿಮಾದಲ್ಲಿ ಅದಕ್ಕೊಂದು ದೃಶ್ಯರೂಪ ಕೊಟ್ಟಿದ್ದಾರೆ ನಿರ್ದೇಶಕ ಭರತ್ ನಾವುಂದ. ಆದರೆ ಸರಳವಾದ ಕಥೆಯನ್ನು ಸುಂದರವಾಗಿ ಕಟ್ಟಿಕೊಡುವ ಇನ್ನಷ್ಟು ಸಾಧ್ಯತೆಗಳಿದ್ದರೂ, ನಿರ್ದೇಶಕರು ಅದನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಬಳಸಿಕೊಂಡಂತೆ ಕಾಣುವುದಿಲ್ಲ.
ಅನಗತ್ಯ ತಿರುವು, ಅನಪೇಕ್ಷಿತ ಪಾತ್ರಗಳು, ಸಸ್ಪೆನ್ಸ್ ಗೊತ್ತಾಗಲು ತೆಗೆದುಕೊಳ್ಳುವ ಸಮಯ ಇವೆಲ್ಲವೂ ಚಿತ್ರಕಥೆಯ ಸಾರಾಗ ಓಟಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುವಂತಿದೆ. ಇನ್ನು ತಮ್ಮ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ, ನಾಯಕ ನಟ ಮನುರಂಜನ್ ಒಂದಷ್ಟು ಮಾಗಿದಂತೆ ಕಾಣುತ್ತದೆ. ನಾಯಕಿ ಖಯಾದು ಲೋಹರ್ ತಮ್ಮ ಅಂದ ಮತ್ತು ಅಭಿನಯ ಎರಡರಲ್ಲೂ ನೋಡುಗರಿಗೆ ಇಷ್ಟವಾಗುತ್ತಾರೆ. ಉಳಿದಂತೆ ತಾರಾ ಅನುರಾಧಾ, ಅವಿನಾಶ್, ರಂಗಾಯಣ ರಘು, ಸಾಧುಕೋಕಿಲ ಮತ್ತಿತರದ್ದು ಎಂದಿನಂತೆ ಸಹಜ ಅಭಿನಯ.
ತೆರೆಯ ಮೇಲೆ ಕಾಣುವ ಹಸಿರು, ಮಳೆ, ಮಂಜು ಎಲ್ಲವನ್ನು ಕಟ್ಟಿಕೊಡುವ ಛಾಯಾಗ್ರಹಣ ಮತ್ತು ಅದಕ್ಕೊಪ್ಪುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ “ಮುಗಿಲ್‌ಪೇಟೆ’ಯ ಸೌಂದರ್ಯಕ್ಕೆ ಪ್ಲಸ್ ಆಗಿದೆ. ಅತಿಯಾದ ನಿರೀಕ್ಷೆಗಳಿಲ್ಲದೆ, ಮಾಮೂಲಿ ಪ್ರೇಮಕಥೆಯನ್ನು ಹೊಸದಾಗಿ ಮತ್ತೂಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.