ಮೆಚ್ಚುವಂಥ ‘ರಚ್ಚು’ ಕಥೆ: ರಚಿತಾ-ಅಜೇಯ್ ಇಮೇಜ್ ಬದಲು..?
Team Udayavani, Dec 27, 2021, 9:26 AM IST
“ನಮ್ಮದು ಔಟ್ ಆ್ಯಂಡ್ ಔಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಇಲ್ಲಿ ಲವ್, ರೊಮ್ಯಾನ್ಸ್, ಎಮೋಶನ್ಸ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ. ಇನ್ನೊಂದು ವಾರದಲ್ಲಿ ನಮ್ಮ ಕೆಲಸದ ರಿಸಲ್ಟ್ ಗೊತ್ತಾಗುತ್ತದೆ’ ಇದು “ಲವ್ ಯು ರಚ್ಚು’ ಚಿತ್ರದ ನಿರ್ದೇಶಕ ಶಂಕರ್ ಎಸ್. ರಾಜ್ ಮಾತು.
ಈಗಾಗಲೇ ಬಿಡುಗಡೆಯಾಗಿರುವ “ಲವ್ ಯು ರಚ್ಚು’ ಚಿತ್ರದ ಪೋಸ್ಟರ್, ಸಾಂಗ್ಸ್, ಟ್ರೇಲರ್ ಎಲ್ಲದಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೇ ಡಿ. 31ಕ್ಕೆ “ಲವ್ ಯು ರಚ್ಚು’ವನ್ನು ಥಿಯೇಟರ್‌ಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಭರ್ಜರಿಯಾಗಿ ಚಿತ್ರದ ಪ್ರಮೋಶನ್ಸ್‌ನಲ್ಲಿ ಬಿಝಿಯಾಗಿರುವ ಚಿತ್ರತಂಡ “ರಚ್ಚು’ವನ್ನು ಪ್ರೇಕ್ಷಕರಿಗೆ ತಲುಪಿಸುವ ಕೊನೆ ಹಂತದ ಕಸರತ್ತಿನಲ್ಲಿದೆ.
ಇದೇ ವೇಳೆ ಮಾತಿಗೆ ಸಿಕ್ಕ ಚಿತ್ರದ ನಿರ್ದೇಶಕ ಶಂಕರ್ ಎಸ್. ರಾಜ್ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
ಇದನ್ನೂ ಓದಿ:ಹಾವಿನ ಜತೆ ಸರಸ: ಗಾಯಕಿಗೆ ಸ್ನೇಕ್ ಬೈಟ್!
“ಕನ್ನಡದಲ್ಲಿ ಈಗಾಗಲೆ ಶಶಾಂಕ್ -ಅಜೇಯ್ ರಾವ್ ಕಾಂಬಿನೇಶನ್‌ನಲ್ಲಿ ಬಂದ ಎಲ್ಲ ಸಿನಿಮಾಗಳೂ ಹಿಟ್ ಆಗಿವೆ. “ಲವ್ ಯು ರಚ್ಚು’ ಸಿನಿಮಾದ ಕಥೆಯನ್ನು ಶಶಾಂಕ್ ಅವರು ಅಜೇಯ್ ರಾವ್ ಅವರಿಗಾಗಿಯೇ ಮಾಡಿಟ್ಟುಕೊಂಡಿದ್ದರು. ಅಂಥ ಕಥೆಯನ್ನ ಇಲ್ಲಿ ನಮಗೆ ಸಿನಿಮಾ ಮಾಡಲು ಕೊಟ್ಟಿದ್ದಾರೆ. ಹೀಗಾಗಿ ಈ ಕಥೆಯನ್ನು ಸಿನಿಮಾ ಮಾಡಿ ಸ್ಕ್ರೀನ್ ಮೇಲೆ ತರುವಾಗ ನಮಗೆ ಸಾಕಷ್ಟು ಜವಾಬ್ದಾರಿಗಳಿವೆ. ಕಥೆಯ ಸೂಕ್ಷ್ಮತೆಗಳನ್ನು ಅರ್ಥಮಾಡಿ ಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂಬ ನಂಬಿಕೆ ಇದೆ. “ಲವ್ ಯು ರಚ್ಚು’ ಸಿನಿಮಾ ಕೂಡ ಹಿಟ್ ಆಗುವುದೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಶಂಕರ್ ಎಸ್. ರಾಜ್.
“ಇಲ್ಲಿಯವರೆಗೆ ಅಜೇಯ್ ರಾವ್ ಮತ್ತು ರಚಿತಾ ರಾಮ್ ಇಬ್ಬರೂ ತಮ್ಮ ತಮ್ಮ ಸಿನಿಮಾಗಳ ಮೂಲಕ ತಮ್ಮದೇ ಆದ ಒಂದು ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಆದ್ರೆ “ಲವ್ ಯು ರಚ್ಚು’ ಸಿನಿಮಾದ ಮೂಲಕ ಇವರಿಬ್ಬರ ಇಮೇಜ್ ಕೂಡ ಬದಲಾಗಲಿದೆ ಎಂಬ ಬಲವಾದ ನಂಬಿಕೆ ನಮಗಿದೆ. ಯಾಕೆಂದರೆ, ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರಿಗೂ ಕಥೆಯ ಪಾತ್ರಗಳ ಮೂಲಕ ಇಬ್ಬರೂ ಕಾಡುತ್ತಾರೆ’ ಎನ್ನುವುದು ನಿರ್ದೇಶಕ ಶಂಕರ್ ಮಾತು.
ಒಟ್ಟಾರೆ ಥಿಯೇಟರ್‌ಗೆ ಬರೋದಕ್ಕೂ ಮೊದಲೇ ಸಾಕಷ್ಟು ಸೌಂಡ್ ಮಾಡುತ್ತಿರುವ “ರಚ್ಚು’ ವರ್ಷಾಂತ್ಯದಲ್ಲಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.