ಗಣರಾಜ್ಯೋತ್ಸವಕ್ಕೆ ಮದಗಜ ಮೋಷನ್ ಟೀಸರ್
Team Udayavani, Jan 24, 2019, 5:47 AM IST
ಶ್ರೀಮುರಳಿ ಅಭಿನಯದ “ಮದಗಜ’ ಶುರುವಿಗೆ ಮುನ್ನವೇ ಒಂದಷ್ಟು ಸುದ್ದಿ ಮಾಡುತ್ತಿದೆ. ಮೊದಲು ಶೀರ್ಷಿಕೆಯಲ್ಲಿ ಗೊಂದಲ ಉಂಟಾಗಿತ್ತು. ಅದು ಬಗೆಹರಿಯಿತು. ನಂತರದ ದಿನಗಳಲ್ಲಿ ದರ್ಶನ್ ಅವರಿಂದ “ಮದಗಜ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿಸಲಾಯಿತು. ಆ ಬಳಿಕ ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸಂಕ್ರಾಂತಿ ಹಬ್ಬದಂದು ಚಿತ್ರದ ಸ್ಕ್ರಿಪ್ಟ್ ಪೂಜೆ ಮತ್ತು ಶೀರ್ಷಿಕೆ ಹಾಡಿಗೆ ಚಾಲನೆ ಸಿಕ್ಕಿತು.
ಈಗ ಹೊಸ ಸುದ್ದಿಯೆಂದರೆ, ಜನವರಿ 26 ರ ಗಣರಾಜ್ಯೋತ್ಸವ ದಿನದಂದು “ಮದಗಜ’ ಚಿತ್ರದ ಮೋಷನ್ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ನಿರ್ದೇಶಕ ಎಸ್.ಮಹೇಶ್ ಕುಮಾರ್ ಅವರು ಸುಮಾರು ಒಂದುವರೆ ನಿಮಿಷದ ಟೀಸರ್ ಸಿದ್ಧಗೊಳಿಸಿದ್ದು, ಅದನ್ನು ಜನವರಿ 26 ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿರುವ ಅವರು, ವಿಶೇಷ ದಿನವಾಗಿರುವ ಗಣರಾಜ್ಯೋತ್ಸವದಂದು ವಿಶೇಷ ವ್ಯಕ್ತಿಯೊಬ್ಬರ ಕೈಯಿಂದಲೇ ಮೋಷನ್ ಟೀಸರ್ ಬಿಡುಗಡೆ ಮಾಡಿಸುವುದಾಗಿ ಹೇಳುತ್ತಾರೆ.
ಆದರೆ, ಅಂದು “ಮದಗಜ’ ಚಿತ್ರ ಮೋಷನ್ ಟೀಸರ್ ಅನ್ನು ಬಿಡುಗಡೆ ಮಾಡಲಿರುವ ಆ ವಿಶೇಷ ವ್ಯಕ್ತಿ ಯಾರೆಂಬುದು ಮಾತ್ರ ಗೌಪ್ಯ. ಸದ್ಯಕ್ಕೆ ಆನಂದ್ ಆಡಿಯೋದ ಯುಟ್ಯೂಬ್ ಚಾನೆಲ್‌ನಲ್ಲಿ ಜ.26 ರಂದು ಬೆಳಗ್ಗೆ 11 ಗಂಟೆಗೆ ಮೋಷನ್ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಮೋಷನ್ ಟೀಸರ್ ಪ್ರೋಮೋವೊಂದು ಹರಿದಾಡುತ್ತಿದ್ದು, “ಮದಗಜ’ ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು ಉಮಾಪತಿ ಎಸ್.ಗೌಡ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.
ಇಷ್ಟರಲ್ಲೇ ನಾಯಕಿಯ ಆಯ್ಕೆ ಸೇರಿದಂತೆ ಇನ್ನುಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯಲಿದೆ ಎಂಬುದು ಚಿತ್ರತಂಡದ ಮಾತು. ಸದ್ಯಕ್ಕೆ ಶ್ರೀಮುರಳಿ ಅವರು “ಭರಾಟೆ’ ಬಿಜಿಯಲ್ಲಿದ್ದಾರೆ. ಚೇತನ್‌ಕುಮಾರ್ ನಿರ್ದೇಶನದ “ಭರಾಟೆ’ ಇನ್ನೇನು ಮುಗಿಯುವ ಹಂತ ತಲುಪಿದೆ. ಆ ಚಿತ್ರದ ನಂತರ, “ಮದಗಜ’ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. ಇದೂ ಕೂಡ ಶ್ರೀಮುರಳಿ ಅವರ ಮತ್ತೂಂದು ಮಾಸ್ ಚಿತ್ರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.