ಮದನ್ ಪಟೇಲ್ ಕಾದಂಬರಿ ಬರೆದಿದ್ದಾರೆ
Team Udayavani, Oct 19, 2017, 3:28 PM IST
ಇದುವರೆಗೂ ಚಿತ್ರಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಮದನ್ ಪಟೇಲ್, ಈಗ ಕಾದಂಬರಿಕಾರರಾಗಿದ್ದಾರೆ. ಮದನ್ ಪಟೇಲ್ ಅವರು “ತಮಟೆ’ ಎಂಬ ಕಾದಂಬರಿಯನ್ನು ಬರೆದಿದ್ದು, ಅಕ್ಟೋಬರ್ 25ರ ಭಾನುವಾರದಂದು ಸಂಜೆ ಕಬ್ಬನ್ ಪಾರ್ಕ್‌ನಲ್ಲಿರುವ ಎನ್.ಜಿ.ಓ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇನ್ನು ಸಚಿವರಾದ ಡಿ.ಕೆ. ಶಿವಕುಮಾರ್, ಎಚ್.ಎಂ. ರೇವಣ್ಣ ಮುಂತಾದವರು ಹಾಜರಿರಲಿದ್ದಾರೆ. ಮದನ್ ಪಟೇಲ್ ಅವರು ರಾತ್ರೋರಾತ್ರಿ ಕಾದಂಬರಿಕಾರರಾಗಿದ್ದು ಹೇಗೆ ಎಂಬ ಪ್ರಶ್ನೆ ಬೇಡ. ಇದು ರಾತ್ರೋರಾತ್ರಿ ಆಗಿದ್ದಲ್ಲ. ಇದು ಸುಮಾರು ಎರಡು ವರ್ಷಗಳ ಕನಸಂತೆ. ಎರಡು ವರ್ಷಗಳ ಕನಸು ಇದೀಗ ನನಸಾಗುತ್ತಿದೆ.
ಬರವಣಿಗೆಯ ಕೃಷಿಗೆ ನೀರೆರೆಡು ಪೋಷಿಸಿದ್ದು ಕಾದಂಬರಿಕಾರರಾದ ಕುಂ. ವೀರಭದ್ರಪ್ಪ. ಪೋಷಿಸುವುದರ ಜೊತೆಗೆ ಕಾದಂಬರಿಗೆ ಮುನ್ನುಡಿಯನ್ನೂ ಅವರೇ ಬರೆದುಕೊಟ್ಟಿದ್ದಾರೆ. ಇನ್ನು ಬೆನ್ನುಡಿಯನ್ನು ಬರೆದುಕೊಟ್ಟಿರುವುದು ಡಾ. ಸಿದ್ಧಲಿಂಗಯ್ಯ. ಈ ಕಾದಂಬರಿಯಿಂದ ಬರುವ ಆದಾಯವನ್ನು ಅವರು ಸಮೃದ್ಧಿ ಟ್ರಸ್ಟಿಗೆ ಸಮರ್ಪಿಸುತ್ತಿದ್ದಾರೆ. ಪುಸ್ತಕ ಬಿಡುಗಡೆಯ ದಿನ ಪುಸ್ತಕ 75 ರೂಪಾಯಿಗೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.