ಕೈ ಹಿಡಿದ “ಲವ್ ಸ್ಟೋರಿ” ಕೃಷ್ಣ ಮೊಗದಲ್ಲಿ ನಗು
ರಾಜ್ಯಾದ್ಯಂತ 130 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ "ಲವ್ ಮಾಕ್ಟೇಲ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ
Team Udayavani, Feb 10, 2020, 10:17 AM IST
ಕಳೆದ ವಾರ ಬಿಡುಗಡೆಗೊಂಡಿದ್ದ “ಮದರಂಗಿ’ ಕೃಷ್ಣ ನಿರ್ದೇಶಿಸಿ, ನಟಿಸಿದ “ಲವ್ ಮಾಕ್ಟೇಲ್’ ಚಿತ್ರಕ್ಕೆ ಈಗ ಪ್ರದರ್ಶನಗಳು ಹೆಚ್ಚಿವೆ. ಅಷ್ಟೇ ಅಲ್ಲ, ಮಾಲ್‌ಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಸ್ವತಃ ಮಾಲ್‌ನವರೇ ಪ್ರದರ್ಶನವನ್ನು ಹೆಚ್ಚಿಸಿದ್ದಾರೆ. ಈ ಬೆಳವಣಿಗೆಯಿಂದ ಕೃಷ್ಣ ಅವರಿಗೆ ಖುಷಿಯಾಗಿದೆ.
ಬಿಡುಗಡೆ ದಿನದಂದು ರಾಜ್ಯಾದ್ಯಂತ 130 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ “ಲವ್ ಮಾಕ್ಟೇಲ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಗಳಿಕೆ ಕೊಂಚ ಏರುಪೇರು ಆಗಿದ್ದರಿಂದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆಗೆಯಲಾಗಿತ್ತು. ಕೊನೆಗೆ, “ಮದರಂಗಿ’ ಕೃಷ್ಣ
ಸ್ವತಃ ಮಾಲ್‌ನ ಮುಖ್ಯಸ್ಥರಿಗೆ ಫೋನ್ ಮಾಡಿ, ಒಂದೊಂದು ಶೋ ಕೊಡಿ ಎಂಬ ಮನವಿ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನ ಮಾಲ್‌ವೊಂದರಲ್ಲಿ ಹಾಗೂ ರಾಕ್‌ಲೈನ್ ಮಾಲ್‌ನಲ್ಲಿ “ಲವ್ ಮಾಕ್ಟೇಲ್’ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಆ ಎರಡು ಶೋ ಕೂಡ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ನಂತರ ನೋಡುಗರ ಪ್ರತಿಕ್ರಿಯೆ ಕಂಡು, ಭಾನುವಾರ, ಒರಾಯನ್, ಗೋಪಾಲನ್, ಈಟಾ ಹಾಗೂ ಮೈಸೂರು ಮಾಲ್ ಸೇರಿದಂತೆ ಇತರೆ ಕಡೆ ಹನ್ನೆರೆಡು ಪ್ರದರ್ಶನ ಹೆಚ್ಚಿಸಲಾಗಿದೆ. ಅತ್ತ, ಶಾರದಾ ಚಿತ್ರಮಂದಿರದಲ್ಲೂ ಕೂಡ ಪ್ರದರ್ಶನ ಮುಂದುವರಿಕೆ ಕಷ್ಟ ಎಂಬ ಮಾತಿದ್ದಾಗಲೂ, ನೋಡುಗರ ಪ್ರತಿಕ್ರಿಯೆ ಹಾಗ ಹೌಸ್‌ಫುಲ್ ಪ್ರದರ್ಶನ ಕಂಡು, ಆ ಚಿತ್ರಮಂದಿರದಲ್ಲೂ ಪ್ರದರ್ಶನ ಮುಂದುವರೆಸಲಾಗಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.
ಇನ್ನು, ಮೊದಲ ಸಲ ನಿರ್ದೇಶಿಸಿರುವ “ಲವ್ ಮಾಕ್ಟೇಲ್’ ಚಿತ್ರವನ್ನು “ಬಿಗ್‌ಬಾಸ್’ ರಿಯಾಲಿಟಿಗೆ ಸ್ಪರ್ಧಿಸಿದ್ದ ಸ್ಪರ್ಧಿಗಳು ಬಂದು ನೋಡಿ, ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಒಂದು ಒಳ್ಳೆಯ ಸಿನಿಮಾಗೆ ಈ ಪರಿ ಬೆಂಬಲ ಸಿಗುತ್ತಿರುವುದರಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಸಂತಸದಲ್ಲಿದ್ದಾರೆ.
“ಯಾವುದೇ ಒಂದು ಒಳ್ಳೆಯ ಸಿನಿಮಾಗೆ ಒಂದು ವಾರವಾದರೂ ಸಮಯ ಬೇಕು. ಈಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಬಲಿಸಿದ ಕನ್ನಡಿಗರಿಗೆ ಧನ್ಯವಾದ’ ಎಂದಿದ್ದಾರೆ ಕೃಷ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.