ಮದ್ವೆ-ಗಿದ್ವೆ ಎಲ್ಲಾ ಸುಳ್ಳು, ನಾವಿಬ್ಬರು ಫ್ರೆಂಡ್ಸ್‌


Team Udayavani, May 7, 2017, 11:40 AM IST

kirik-party.jpg

“ಅದೊಂದು ಕಾರ್ಯಕ್ರಮದಲ್ಲಿ ನನ್ನ ಅಮ್ಮ ಮತ್ತು ರಶ್ಮಿಕಾ ಅಮ್ಮ ಮಾತನಾಡಿಕೊಂಡು ಖುಷಿಯಿಂದ ನಕ್ಕರು. ಅಷ್ಟೇ ಆಗಿದ್ದು ಮಾರ್ರೆ…  ಕಟ್‌ ಮಾಡಿದರೆ ನಮ್ಮಿಬ್ಬರ ಮದುವೆ ಕತೆ ಹುಟ್ಟಿಕೊಂಡಿದೆ … ‘

– ಹೀಗೆ ಹೇಳಿ ರಕ್ಷಿತ್‌ ನಕ್ಕರು. ಅವರ ನಗುವಿನಲ್ಲಿ ಯಾವತ್ತೋ ಆಗಬೇಕಿದ್ದ ಅವರ ಮದುವೆಗೆ ಈಗಲೇ ವೇದಿಕೆ ಸೃಷ್ಟಿಯಾಗುತ್ತಿರುವ, ಅವರಿಗೇ ಗೊತ್ತಿಲ್ಲದ ವಿಚಾರಗಳು ಸೇರಿಕೊಳ್ಳುತ್ತಿರುವ ಬಗ್ಗೆ ಆಶ್ಚರ್ಯವೂ ಇತ್ತು. ಹೌದು, “ಕಿರಿಕ್‌ ಪಾರ್ಟಿ’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್‌ ನಡುವೆ ಅಫೇರ್‌ ಇದ್ದು, ಇಬ್ಬರು ಮದುವೆ ಆಗಲಿದ್ದಾರೆಂಬ ಸುದ್ದಿ ಕೇಳಿಬಂದಿತ್ತು. ಈಗಷ್ಟೇ ಇಬ್ಬರು ಚಿತ್ರರಂಗದಲ್ಲಿ ಸೆಟ್ಲ ಆಗುತ್ತಿದ್ದಾರೆ, ಆಗಲೇ ಮದುವೇನಾ ಎಂದು ಅನೇಕರು ಹುಬ್ಬೇರಿಸಿದ್ದರು ಕೂಡಾ.

ರಕ್ಷಿತ್‌ ಶೆಟ್ಟಿ ಕೂಡಾ ತಮ್ಮ ಹಾಗೂ ರಶ್ಮಿಕಾ ನಡುವಿನ ಲವ್‌ಸ್ಟೋರಿ, ಮದುವೆಯನ್ನು ತಳ್ಳಿ ಹಾಕುತ್ತಾರೆ. “ಅವೆಲ್ಲಾ ಸುಳ್ಳು. ಅದು ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ರಶ್ಮಿಕಾ ಒಳ್ಳೆಯ ಹುಡುಗಿ. ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ. ಅದು ಬಿಟ್ಟು ನಮ್ಮ ನಡುವೆ ಏನೂ ಇಲ್ಲ. ಫ್ರೆಂಡ್ಲಿಯಾಗಿ ಇಡೀ ನಮ್ಮ ತಂಡ ಆಗಾಗ ಭೇಟಿಯಾಗಿರುತ್ತದೆ. ಆದರೆ ಈ ಸುದ್ದಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ನನಗಂತೂ ಎರಡು ವರ್ಷ ಮದುವೆಯಾಗುವ ಯಾವುದೇ ಯೋಚನೆ ಇಲ್ಲ.

ಒಂದಷ್ಟು ಕಮಿಟ್‌ಮೆಂಟ್‌ಗಳಿವೆ. ಅವೆಲ್ಲವೂ ಮುಗಿಯಲು ಎರಡು ವರ್ಷ ಬೇಕು. ಆ ನಂತರ ಮದುವೆ ಯೋಚನೆ ಮಾಡಬೇಕು. ಮದುವೆ ಅಂದಮೇಲೆ ಎರಡು ಕುಟುಂಬದ ಸಮ್ಮತಿ, ಮಾತುಕತೆ ಬೇಕು. ಸದ್ಯಕ್ಕೆ ಸಿನಿಮಾ ಬಿಟ್ಟರೆ ನಾನು ಬೇರೆ ಯಾವುದರ ಬಗ್ಗೆಯೂ ಆಲೋಚಿಸುತ್ತಿಲ್ಲ’ ಎಂದು ತಮ್ಮ ಲವ್‌ಸ್ಟೋರಿ, ಮದುವೆ ವಿಚಾರದ ಬಗ್ಗೆ ಹೇಳುತ್ತಾರೆ. ಅಲ್ಲಿಗೆ ರಕ್ಷಿತ್‌ ಮದುವೆಯನ್ನು ಬೇಗನೇ ಕಣ್ತುಂಬಿಕೊಳ್ಳಬೇಕೆಂದು ಆಸೆಪಟ್ಟವರಿಗೆ ನಿರಾಸೆಯಾದಂತಾಗಿದೆ. 

ಇನ್ನು, ಸುದೀಪ್‌ಗೆ ರಕ್ಷಿತ್‌ ಶೆಟ್ಟಿ ನಿರ್ದೇಶನ ಮಾಡಬೇಕಿದ್ದ “ಥಗ್ಸ್‌ ಆಫ್ ಮಾಲ್ಗುಡೀಸ್‌’ ಚಿತ್ರ ಮುಂದೆ ಹೋಗಿದೆ. ಸಿನಿಮಾ ಮುಂದೆ ಹೋಗಿರುವುದನ್ನು ಸ್ವತಃ ಸುದೀಪ್‌ ಹಾಗೂ ರಕ್ಷಿತ್‌ ಒಬ್ಬರು ಒಪ್ಪಿಕೊಳ್ಳುತ್ತಾರೆ. “ಥಗ್ಸ್‌ಗೆ ಆರಂಭಿಸಲು ಬೇಕಾದರೆ ನಾವು ಐದು ವರ್ಷ ತೆಗೆದುಕೊಳ್ಳುವ ..’ ಎನ್ನುವ ಮೂಲಕ ಸಿನಿಮಾ ಮುಂದೆ ಹೋಗಿರುವ ಬಗ್ಗೆ ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಅಷ್ಟಕ್ಕೂ ಥಗ್ಸ್‌ ಮುಂದೆ ಹೋಗಲು ಕಾರಣವೇನು ಎಂದರೆ “ಅವನೇ ಶ್ರೀಮನ್ನಾರಾಯಣ’.

ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರವಿದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಶುರುವಾಗಬೇಕಿತ್ತು. ಆದರೆ ಆ ಚಿತ್ರ ಮುಂದೆ ಹೋಗಿದ್ದು, ಜೂನ್‌ನಲ್ಲಿ ಶುರುವಾಗಲಿದೆ. ಆ ಚಿತ್ರ ಮುಗಿಯುವ ಹೊತ್ತಿಗೆ ನವೆಂಬರ್‌ ಬಂದಿರುತ್ತದೆ. ಆ ನಂತರ ರಕ್ಷಿತ್‌ ಮೂರು ತಿಂಗಳು ಬ್ರೇಕ್‌ ಪಡೆದು “ಥಗ್ಸ್‌ ಆಫ್ ಮಾಲ್ಗುಡೀಸ್‌’ ಚಿತ್ರದ ಸ್ಕ್ರಿಪ್ಟ್ ಫೈನಲ್‌ ಮಾಡಲಿದ್ದಾರೆ. ಹಾಗಾಗಿ, ಸಿನಿಮಾ ಮುಂದೆ ಹೋಗಿದೆ. 

ನಮ್ಮಿಬ್ಬರ ಮಧ್ಯೆ ಎಂಥದ್ದೂ ಇಲ್ಲ
ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರಿಬ್ಬರ ಮದುವೆ ಸುದ್ದಿ ಹರಡಿದ್ದೇ ತಡ, ಅತ್ತ ರಕ್ಷಿತ್‌ ಶೆಟ್ಟಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಇತ್ತ ರಶ್ಮಿಕಾ ಮಂದಣ್ಣ ಕೂಡ “ನನ್ನ ಮತ್ತು ರಕ್ಷಿತ್‌ ಶೆಟ್ಟಿ ಮದ್ವೆ ವಿಷಯ ಸುಳ್ಳು’ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, “ನನಗೆ ನನ್ನ ಭವಿಷ್ಯ ಮುಖ್ಯ. ಓದೋದು ಮುಖ್ಯ. ಆದರೆ, ನಮ್ಮಿಬ್ಬರ ಬಗ್ಗೆ ಹರಡಿರುವ ಮದುವೆ ವಿಷಯ ಸುಳ್ಳು.

ನಮ್ಮ ನಡುವೆ ಯಾವ ಲವ್ವು ಇಲ್ಲ. ನಮ್ಮದು ಒಳ್ಳೆಯ ಫ್ರೆಂಡ್‌ಶಿಪ್‌ ಮಾತ್ರವಿದೆ. ಅದು ಹೊರತಾಗಿ ಬೇರೇನೂ ಇಲ್ಲ. ಎಲ್ಲೆಡೆ ಸುದ್ದಿಯಾಗಿರುವಂತೆ ಎಂಗೇಜ್‌ಮೆಂಟೂ ಇಲ್ಲ, ಮದುವೆಯೂ ಇಲ್ಲ. ಅದೆಲ್ಲಾ ಸುಳ್ಳು. ನಾನು ಕನ್ನಡ ಸೇರಿದಂತೆ ತೆಲುಗಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ. ಅದರ ಬಗ್ಗೆ ಹೆಚ್ಚು ಗಮನಕೊಡುತ್ತೇನೆ. ನಮ್ಮಿಬ್ಬರ ನಡುವೆ ಎಂಥದ್ದೂ ಇಲ್ಲ’ ಎಂದು ಹೇಳಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ಟಾಪ್ ನ್ಯೂಸ್

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.