ಏ. 9ಕ್ಕೆ ‘ಮಹಾನ್ ಹುತಾತ್ಮ’ ಬಿಡುಗಡೆ: ಕಿರುಚಿತ್ರದ ಬಜೆಟ್ 25 ಲಕ್ಷ!
Team Udayavani, Apr 8, 2021, 9:30 AM IST
2018ರಲ್ಲಿ ಅತ್ಯುತ್ತಮ ಕಿರುಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ, ಬಳಿಕ ಸುಮಾರು 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ “ಮಹಾನ್ ಹುತಾತ್ಮ’ ಕಿರುಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅಂದಹಾಗೆ, “ಮಹಾನ್ ಹುತಾತ್ಮ’ ಇದೇ ಏ. 9 ರಂದು ಎಂಎಚ್ ಫಿಲಂ.ಇನ್ ನಲ್ಲಿ ಪೇಡ್ ಪ್ರೀಮಿಯರ್ ಆಗಲಿದೆ.
ಆಸಕ್ತರು ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ ಈ ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ “ಮಹಾನ್ ಹುತಾತ್ಮ’ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಅಕ್ಷಯ್ ಚಂದ್ರಶೇಖರ್ ಈ ಕಿರುಚಿತ್ರ ನಿರ್ಮಿಸಿದ್ದು, ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ “ಮಹಾನ್ ಹುತಾತ್ಮ’ನ ಬಿಡುಗಡೆಯ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಇದನ್ನೂ ಓದಿ:ಲಕ್ಷ್ಮೀ ರೈ ಎಂಗೇಜ್‌ಮೆಂಟ್ ಟ್ವಿಸ್ಟ್!
ಮೊದಲಿಗೆ “ಮಹಾನ್ ಹುತಾತ್ಮ’ ಕಿರುಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಮತ್ತು ನಾಯಕ ಅಕ್ಷಯ್ ಚಂದ್ರಶೇಖರ್, “ಬೆಳಗಾವಿ ಮೂಲದವನಾದ ನಾನು ಮೊದಲಿನಿಂದಲೂ ಭಗತ್ ಸಿಂಗ್ ಫಾಲೋವರ್ ಆಗಿದ್ದೆ. ಅವರ ಕುರಿತು ಸಿನಿಮಾ ಮಾಡುವ ಯೋಚನೆ ಇತ್ತು. ಮೊದಲಿಗೆ ಸಿನಿಮಾ ಬದಲು 80 ಸಾವಿರ ಬಜೆಟ್‌ನಲ್ಲಿ ಶಾರ್ಟ್ ಫಿಲಂ ಮಾಡಲು ಪ್ಲಾನ್ ಹಾಕಿಕೊಂಡೆವು. ಆನಂತರ ಅದು ದೊಡ್ಡ ಮಟ್ಟದಲ್ಲಿ ಸಿದ್ಧವಾಯ್ತು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಜೆಟ್‌ನ ಶಾರ್ಟ್ ಫಿಲಂ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಸುಮಾರು ಮೂರು ವರ್ಷದ ಕನಸು ಈ ಕಿರುಚಿತ್ರದಲ್ಲಿ ನನಸಾಗಿದೆ. ಈ ಶಾರ್ಟ್ ಫಿಲಂನಲ್ಲಿ ಸೈನಿಕ ಮತ್ತು
ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕನ್ನಡದ ಈ ಶಾರ್ಟ್ ಫಿಲಂ ರಾಷ್ಟ್ರ ಪ್ರಶಸ್ತಿಯ ಮೂಲಕ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸಿನಿಮಾ ಮಾಡುವ ಆಲೋಚನೆಯೂ ಇದೆ’ ಎಂದರು.
ಇನ್ನು “ಮಹಾನ್ ಹುತಾತ್ಮ’ ಕಿರುಚಿತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ, ಸಾಗರ್ ಪುರಾಣಿಕ್, ವರುಣ್ ಶ್ರೀನಿವಾಸ್, ಹಿರಿಯ ನಟ ಶ್ರೀನಾಥ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್, ಬಾಲನಟ ಅಚಿಂತ್ಯ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಮಹಾನ್ ಹುತಾತ್ಮ’ ಕಿರುಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಾಗರ್ ಪುರಾಣಿಕ್, “ಈ ಶಾರ್ಟ್ ಫಿಲಂ ನಿರ್ದೇಶನದ ಜತೆಗೆ ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಡಿಮೆ ಬಜೆಟ್‌ನಲ್ಲಿ ಮಾಡಬೇಕೆಂದು ಕೊಂಡಿದ್ದ ಶಾರ್ಟ್ ಫಿಲಂಗೆ ಆ ನಂತರ ಸುಮಾರು 25 ಲಕ್ಷ ಖರ್ಚಾಯಿತು. ಸ್ವಾತಂತ್ರ್ಯ ಪೂರ್ವದ ಹಿನ್ನೆಲೆಯಲ್ಲಿ ಈ ಶಾರ್ಟ್ ಫಿಲಂ ನಡೆಯುವುದರಿಂದ, ಅಂಥದ್ದೇ ಲೊಕೇಶನ್ ಹುಡುಗಿ ಇದನ್ನು ಶೂಟಿಂಗ್ ಮಾಡಿದ್ದೇವೆ. ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕಿರುಚಿತ್ರ ಎಂಬ ಹೆಮ್ಮ ಈ ಕಿರುಚಿತ್ರಕ್ಕಿದೆ’ ಎಂದರು.
“ಮಹಾನ್ ಹುತಾತ್ಮ’ ಕಿರುಚಿತ್ರಕ್ಕೆ ಅಭಿಲಾಷ್ ಕಲಾತಿ ಛಾಯಾಗ್ರಹಣ, ಮಹೇಶ್ ಎಸ್. ಸಂಕಲನ, ಅನಂತ್ ಕಾಮತ್ ಸೌಂಡ್ ಡಿಸೈನ್ ಇದೆ. “ಅಕ್ಷಯ್ ಎಂಟರ್‌ಟೈನ್ಮೆಂಟ್’ ಮತ್ತು “ಪುರಾಣಿಕ್ ಪ್ರೊಡಕ್ಷನ್ಸ್’ ಬ್ಯಾನರ್ ಲಾಂಛನದಲ್ಲಿ ಈ ಕಿರುಚಿತ್ರ ತಯಾರಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.