Majestic 2: ಶೂಟಿಂಗ್‌ ಮುಗಿಸಿದ ಮೆಜೆಸ್ಟಿಕ್‌-2

Team Udayavani, Oct 21, 2024, 3:42 PM IST

Majestic 2

“ಮೆಜೆಸ್ಟಿಕ್‌-2′ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಈ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಡಿಸೆಂಬರ್‌ನಲ್ಲಿ ತೆರೆಕಾಣಬಹುದು. ರಾಮು ಈ ಚಿತ್ರದ ನಿರ್ದೇಶಕರು. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್‌ ಅವರ ಪುತ್ರ ಭರತ್‌ ನಾಯಕ ನಟರಾಗಿ ಎಂಟ್ರಿಕೊಡುತ್ತಿದ್ದಾರೆ.

ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ಅಮ್ಮಾ ಎಂಟರ್‌ಪ್ರೈಸಸ್‌ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ನಿರ್ಮಾಪಕ ಆನಂದಪ್ಪ ಮಾತನಾಡಿ, “ಅಂದುಕೊಂಡಂತೆಯೇ ಸಿನಿಮಾ ಮುಗಿದಿದೆ. ಇಡೀ ಸಿನಿಮಾ ಶೂಟಿಂಗನಲ್ಲಿ ನಾನೇ ಜೊತೆ ಇದ್ದು ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ’ ಎನ್ನುತ್ತಾರೆ.

ಮೆಜೆಸ್ಟಿಕ್‌-2 ಚಿತ್ರದಲ್ಲಿ ಮೆಜೆಸ್ಟಿಕ್‌ನಲ್ಲಿ ನಡೆಯುವ ದಂಧೆಗಳ ಬಗ್ಗೆಯೂ ಹೇಳಲಾಗಿದೆಯಂಥೆ. ಈಗಿನ ಮೆಜೆಸ್ಟಿಕ್‌ ಏರಿಯಾ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯನ್ನು ಮೆಜೆಸ್ಟಿಕ್‌-2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳ ಹೊರಟಿದ್ದಾರೆ. ಹೀಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲದಂಥ ಅನೇಕ ಚಟುವಟಿಕೆಗಳನ್ನು ಮೆಜೆಸ್ಟಿಕ್‌-2 ಅನಾವರಣಗೊಳಿಸಲಿದೆ ಎನ್ನುವುದು ನಿರ್ದೇಶಕರ ಮಾತು.

ಸತತವಾಗಿ 126 ದಿನ ಶೂಟಿಂಗ್‌ ಮಾಡಲಾಗಿದೆ.  ಚಿತ್ರವನ್ನು ಡಿಸೆಂಬರ್‌ 26ಕ್ಕೆ ರಿಲೀಸ್‌ ಮಾಡಬೇಕೆಂಬ ಪ್ಲಾನ್‌ ಇದೆ. ನಾನು, ಭರತ್‌ ಇಬ್ಬರೂ ದರ್ಶನ್‌ ಅಭಿಮಾನಿಗಳು. ರಿಲೀಸ್‌ ಟೈಮಲ್ಲಿ ಮೈಸೂರಿನಿಂದ ಬೆಂಗಳೂರುವರೆಗೆ 101 ಸ್ಟಾರ್ಸ್‌ ಮೆರವಣಿಗೆ ಮಾಡಿಸಬೇಕು, ದರ್ಶನ್‌ ಅವರ 101 ಅಡಿ ಕಟೌಟ್‌ ಹಾಕಬೇಕು ಎಂಬ ಪ್ಲಾನ್‌ ಎನ್ನುವುದು ನಿರ್ದೇಶಕರ ಮಾತು.

ನಾಯಕ ಭರತ್‌ “ಇದು 2024ರ ಮೆಜೆಸ್ಟಿಕ್‌ ಕಥೆ. ಬೆಂಗಳೂರಲ್ಲಿ ಏನೇನೆಲ್ಲ ನಡೀತಿದೆ ಅಂತ ತೋರಿಸಿದ್ದೇವೆ. ನಾವೆಲ್ಲ ತುಂಬಾ ಎಫ‌ರ್ಟ್‌ ಹಾಕಿ ಸಿನಿಮಾ ಮಾಡಿದ್ದೇವೆ. 6 ಫೈಟ್‌ ಅದ್ಭುತವಾಗಿ ಮೂಡಿಬಂದಿವೆ. ಮೆಜೆಸ್ಟಿಕ್‌ ನಲ್ಲೇ ಹುಟ್ಟಿಬೆಳೆದ ಹುಡುಗನ ಕಥೆ. ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ’ ಎಂದರು. ನಾಯಕಿ ಸಂಹಿತಾ ವಿನ್ಯಾ ಮಿಡಲ್‌ ಕ್ಲಾಸ್‌ ಹುಡುಗಿ ಪಾತದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರ ನಿರ್ವಹಿಸಿದ್ದಾರೆ.

ಟಾಪ್ ನ್ಯೂಸ್

Omar Abdulla

Jammu and Kashmir; ಬದ್ಗಾಮ್ ಬಿಟ್ಟು ಗಂದರ್‌ಬಾಲ್‌ ಉಳಿಸಿಕೊಂಡ ಸಿಎಂ ಒಮರ್ ಅಬ್ದುಲ್ಲಾ

BJP FLAG

BJP; ಜಾರ್ಖಂಡ್ ನಲ್ಲಿ ಭುಗಿಲೆದ್ದ ಭಿನ್ನಮತ:ಬಂಡಾಯ, ಪರಿವಾರವಾದ ಆರೋಪ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

013

Kiccha Sudeep: ಪ್ರಜ್ಞೆಯಲ್ಲಿರುವಾಗ ನನ್ನ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲ..

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ

BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ

Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?

Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?

Easy Take it Easy song from Maryade prashne movie

Easy Take it Easy…; ಮಧ್ಯಮ ವರ್ಗದ ಸುತ್ತ ಮರ್ಯಾದೆ ಪ್ರಶ್ನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Omar Abdulla

Jammu and Kashmir; ಬದ್ಗಾಮ್ ಬಿಟ್ಟು ಗಂದರ್‌ಬಾಲ್‌ ಉಳಿಸಿಕೊಂಡ ಸಿಎಂ ಒಮರ್ ಅಬ್ದುಲ್ಲಾ

15

Katpadi: ವೈರಲ್‌ ಸಾಂಗ್‌ ಹುಟ್ಟಿದ ರಸ್ತೆ ಹೊಂಡಗಳಿಗೆ ಮುಕ್ತಿ ಯಾವಾಗ?

BJP FLAG

BJP; ಜಾರ್ಖಂಡ್ ನಲ್ಲಿ ಭುಗಿಲೆದ್ದ ಭಿನ್ನಮತ:ಬಂಡಾಯ, ಪರಿವಾರವಾದ ಆರೋಪ

14

Holehonnuru: ರಣಭೀಕರ ಮಳೆ; ಕೋಳಿ ಫಾರಂಗೆ ನುಗ್ಗಿದ ನೀರು; 3500 ಕೋಳಿ ಬಲಿ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.