“ಮಜೆಸ್ಟಿಕ್’ ಕನ್ನಡ ಸಿನಿಮಾ 16 ನೇ ವರ್ಷದ ನೆನಪು
Team Udayavani, Feb 18, 2018, 11:03 AM IST
“ಮೆಜೆಸ್ಟಿಕ್’ ಇದು ದರ್ಶನ್ ಅವರ ವೃತ್ತಿ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಚಿತ್ರ. ಈ ಚಿತ್ರ ಬಿಡುಗಡೆಯಾಗಿ ಹದಿನಾರು ವರ್ಷಗಳು ಕಳೆದಿದೆ. ಇತ್ತೀಚೆಗೆ ನೆಲಮಂಗಲ ಸಮೀಪದ ರೆಸಾರ್ಟ್‌ನಲ್ಲಿ “ಮಜೆಸ್ಟಿಕ…’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಆ ಚಿತ್ರದಲ್ಲಿ ದುಡಿದ ವ್ಯಕ್ತಿಗಳನ್ನು ಗೌರವಿಸಲಾಯಿತು. ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರು ಬಳಸುತ್ತಿದ್ದ ಮಾರುತಿ 800 ಕಾರನ್ನು ಅವರಿಂದ ಪಡೆದಿದ್ದು ವಿಶೇಷವಾಗಿತ್ತು.
ಅಂದು ಆ ದಿನಗಳನ್ನು ಮೆಲುಕು ಹಾಕಿದ್ದಲ್ಲೆ, ಆ ಮಾರುತಿ 800 ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದಿದ್ದು ಇನ್ನೊಂದು ವಿಶೇಷವಾಗಿತ್ತು. ವಿಶೇಷವೆಂದರೆ, ಮಾರುತಿ 800 ದರ್ಶನ್ ಅವರು ಆಸೆ ಪಟ್ಟ ಕಾರು ಅದು. ಹಾಗಾಗಿ ಅದು ಅವರ ಮನೆಯಲ್ಲಿ ನೆನಪಾಗಿಯೇ ಉಳಿದಿದೆ. ದರ್ಶನ್ ಅವರ ಜೊತೆ ಎಂ.ಜಿ.ರಾಮಮೂರ್ತಿ ಅವರು ಒಂದು ಚಿತ್ರ ಮಾಡಲಿದ್ದಾರೆ. ಅದು ಅವರ 53 ನೇ ಚಿತ್ರವಾಗಲಿದೆ.
ಅಂದು “ಮಜೆಸ್ಟಿಕ್’ ನಿರ್ದೇಶಕ ಪಿ.ಎನ್. ಸತ್ಯ, ಸಹ ನಿರ್ದೇಶಕರಾಗಿದ್ದ ಮಾದೇಶ್ ಹಾಗೂ ಸುರೇಶ್ ಗೋಸ್ವಾಮಿ, ಪ್ರಚಾರಕರ್ತ ವಿಜಯಕುಮಾರ್, ಛಾಯಾಗ್ರಾಹಕರಾದ ಎಂ.ಆರ್.ಸೀನು, ಅಣಜಿ ನಾಗರಾಜ್ , ಮ್ಯಾನೇಜರ್ ರಾಮು, ಸ್ಥಿರ ಛಾಯಾಗ್ರಹಕ ರಮೇಶ್ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಅಂದು ಹಿರಿಯ ನಟರಾದ ಜೈ ಜಗದೀಶ್, ಹರೀಶ್‌ರಾಯ, ನಿರ್ಮಾಪಕ ಭೋಜರಾಜ ರೈ ಹಾಗೂ 200ಕ್ಕು ಹೆಚ್ಚು ಮಂದಿ ಅಂದಿನ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.