ಪ್ರಾಮಾಣಿಕತೆಯಿಂದ ಸಿನಿಮಾ ಮಾಡಿ …
ಪತ್ರ ಮೂಲಕ ಬೇಸರ ಹೊರಹಾಕಿದ ಶಾನ್ವಿ
Team Udayavani, Oct 5, 2019, 4:00 AM IST
ಸಿನಿಮಾ ಕ್ಷೇತ್ರದಲ್ಲಿ ನಟ-ನಟಿಯರು ಆಗಾಗ ತಮ್ಮ ಬೇಸರ- ಖುಷಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಅದು ಸಿನಿಮಾಕ್ಕೆ ಸಂಬಂಧಪಟ್ಟಿದಾದರೂ ಇರಬಹುದು ಅಥವಾ ವೈಯಕ್ತಿಕವಾದರೂ ಆಗಿರಬಹುದು. ಈಗ ನಟಿ ಶಾನ್ವಿ ಶ್ರೀವಾತ್ಸವ್ ಕೂಡಾ ಬೇಸರ ವ್ಯಕ್ತಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಬರೆದಿರುವ ಶಾನ್ವಿ, ಅಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಎಲ್ಲಾ ಓಕೆ, ಯಾರ ವಿರುದ್ಧ, ಯಾವ ಸಿನಿಮಾದ ಕುರಿತಾಗಿ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಶಾನ್ವಿ ಇಲ್ಲಿ ಸಿನಿಮಾದ್ದಾಗಲೀ, ವ್ಯಕ್ತಿಯ ಹೆಸರನ್ನಾಗಲೀ ಹೇಳದೇ ತಮ್ಮ ಅನಿಸಿಕೆ ಎಂಬಂತೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ, ಈ ಪತ್ರ ನೋಡುತ್ತಿದ್ದಂತೆ ವೈಯಕ್ತಿಕವಾಗಿ ಶಾನ್ವಿಗೆ ಆದ ಅನುಭವದಂತೆ ಕಾಣುತ್ತದೆ. ಆ ಬೇಸರವನ್ನು ಈ ರೀತಿ ಹೊರ ಹಾಕಿದ್ದಾರೆನ್ನಲಾಗಿದೆ.
ಶಾನ್ವಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ; “ಯಾರು ತಾನೇ ಒಳ್ಳೆಯ ಸಿನಿಮಾಗಳನ್ನು ನೋಡಲು ಬಯಸುವುದಿಲ್ಲ ಹೇಳಿ? ಅದರಂತೆ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾಗಳನ್ನು ನೀಡಲು ಯಾರು ಬಯಸಲ್ಲ ಹೇಳಿ? ಸಿನಿಮಾ ಅಂತಿಮವಾಗಿ ಹೇಗೆ ಮೂಡಿಬರುತ್ತೋ ಅನ್ನೋದರ ಬಗ್ಗೆ ಯೋಚನೆ ಮಾಡುವುದಕ್ಕಿಂತ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ. ಸೋಲು-ಗೆಲುವಿನ ಲೆಕ್ಕಾಚಾರ ಹಾಕದ ಉತ್ತಮವಾದುದನ್ನು ನೀಡಲು ಪ್ರಯತ್ನಿಸಬೇಕು.
ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯೊಂದಿಗೆ ಒಳ್ಳೆಯ ಸಿನಿಮಾಗಳನ್ನು ಮಾಡಲು ಪ್ರಯತ್ನಿಸಿ ಎಂದು ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ. ಪ್ರತಿಯೊಬ್ಬ ನಟ ಕೂಡಾ ಆ ಸಿನಿಮಾದ ಭಾಗವಾಗಿರುತ್ತಾನೆ ಮತ್ತು ಅವರನ್ನು ಪ್ರಾಮಾಣಿಕತೆಯಿಂದ ನಡೆಸಿಕೊಳ್ಳಬೇಕು. ತೆರೆಮೇಲೆ ಏನು ತೋರಿಸಲು ಬಯಸುತ್ತಿರೋ ಅದೇ ರೀತಿ ಸ್ಕ್ರಿಪ್ಟ್ನ ನಿರೂಪಣೆಯಲ್ಲೂ ಇರಬೇಕು. ಒಂದು ವೇಳೆ ಏನಾದರೂ ಬದಲಾವಣೆ ಇದ್ದರೆ ಅದನ್ನು ನಟರ ಗಮನಕ್ಕೆ ತರಬೇಕು. ಬದಲಾವಣೆ ನಿಜಕ್ಕೂ ಸಿನಿಮಾಕ್ಕೆ ಅಗತ್ಯವಾಗಿದ್ದರೆ ಅದನ್ನು ಮಾಡಿಕೊಳ್ಳುತ್ತಾರೆ.
ಅದು ಬಿಟ್ಟು ನಟರ ದಾರಿ ತಪ್ಪಿಸೋದು ಸರಿಯಲ್ಲ ಮತ್ತು ಅದು ನೀತಿಬಾಹಿರ. ಅಲ್ಲದೇ ಸುಳ್ಳು, ಆಶ್ವಾಸನೆಗಳು, ಬೇಡದ ಸಮಜಾಯಿಷಿಗಳು, ವೃತ್ತಿಪರತೆ ಇಲ್ಲದಿರುವುದನ್ನು ಒಪ್ಪುವುದಿಲ್ಲ. ಒಳ್ಳೆಯದನ್ನು ಕೊಟ್ಟು ಒಳ್ಳೆಯದನ್ನೇ ನಿರೀಕ್ಷಿಸುವ …’ ಎಂದು ಪತ್ರದಲ್ಲಿ ಶಾನ್ವಿ ಹೇಳಿದ್ದಾರೆ. ಅಂದಹಾಗೆ, ಸದ್ಯ ಶಾನ್ವಿ ನಟಿಸಿರುವ “ಗೀತಾ’ ಚಿತ್ರ ಪ್ರದರ್ಶನ ಕಾಣುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲೂ ಶಾನ್ವಿ ನಾಯಕಿಯಾಗಿದ್ದು, ಆ ಚಿತ್ರ ನವೆಂಬರ್ ಕೊನೆ ವಾರದಲ್ಲಿ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.