ರಚೆಲ್ ಎಂಬ ಮಲಯಾಳಿ ಸುಂದರಿ: ನವನಟಿಯ ಕೈ ತುಂಬಾ ಸಿನಿಮಾ
Team Udayavani, Apr 11, 2023, 12:37 PM IST
ಕನ್ನಡ ಚಿತ್ರರಂಗಕ್ಕೆ ಪ್ರತಿ ವರ್ಷ ಬೇರೆ ಬೇರೆ ಭಾಷೆಗಳಿಂದ ನಾಯಕಿಯರು ಎಂಟ್ರಿಕೊಡುತ್ತಲೇ ಇರುತ್ತಾರೆ. ಹೀಗೆ ಬಂದ ನಟಿಯರು ಅನೇಕರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಕೂಡಾ. ಅದರಲ್ಲೂ ಮಲಯಾಳಂ ಮೂಲದ ನಟಿಯರಿಗೂ ಕನ್ನಡ ಚಿತ್ರರಂಗಕ್ಕೂ ಚೆನ್ನಾಗಿ ಕೂಡಿ ಬರುತ್ತದೆ. ಈಗಾಗಲೇ ಮಲಯಾಳಂನಿಂದ ಕನ್ನಡ ಚಿತ್ರರಂಗಕ್ಕೆ ನಾಯಕಿಯರಾಗಿ ಬಂದ ಅನೇಕ ನಟಿಯರು ಗಟ್ಟಿ ನೆಲೆಯೂರಿದ್ದಾರೆ. ಈಗ ಆ ಸಾಲಿಗೆ ಸೇರುವ ಮತ್ತೂಂದು ರಚೆಲ್ ಡೇವಿಡ್.
ಈ ಹೆಸರನ್ನು ನೀವು ಕೇಳಿರಬಹುದು. ನೀವು “ಲವ್ ಮಾಕ್ಟೇಲ್-2′ ಚಿತ್ರ ನೋಡಿದ್ದರೆ ಖಂಡಿತಾ ನಿಮಗೆ ಈ ಹೆಸರು ಹಾಗೂ ಮುಖ ನೆನಪಿಗೆ ಬರುತ್ತದೆ. ಕೇರಳ ಮೂಲದ ರಚೆಲ್ ಈಗ ಕನ್ನಡದಲ್ಲಿ ಬಿಝಿಯಾಗುತ್ತಿದ್ದಾರೆ.
ಈಗಾಗಲೇ ಪ್ರಮೋದ್ ನಾಯಕರಾಗಿರುವ “ಭುವನಂ ಗಗನಂ’, “ಅನ್‌ಲಾಕ್ ರಾಘವ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇನ್ನೊಂದಿಷ್ಟು ಚಿತ್ರಗಳು ಕೈಯಲ್ಲಿವೆ. ಈ ಮೂಲಕ ರಚೆಲ್ ಕನ್ನಡ ಚಿತ್ರರಂಗದಲ್ಲಿ ಒಂದು ರೌಂಡ್ ಹಾಕುವ ಸಾಧ್ಯತೆಗಳಿವೆ. ಮಲಯಾಳಂ ಮೂಲದ ರಚೆಲ್ ಬೇರೆ ಭಾಷೆಯಲ್ಲಿ ಕೆಲಸ ಮಾಡುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
“ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಈಗ “ಭುವನಂ ಗಗನಂ’ ಸಿನಿಮಾದಲ್ಲೂ ಒಳ್ಳೆಯ ಪಾತ್ರ ಸಿಕ್ಕಿದೆ. ನಟಿಯರನ್ನು ತುಂಬಾ ಗೌರವದಿಂದ ನಡೆಸಿಕೊಳ್ಳುವ ಕನ್ನಡ ಚಿತ್ರರಂಗದಲ್ಲಿ ಮುಂದೆ ಮತ್ತಷ್ಟು ಸಿನಿಮಾ ಮಾಡುವ ಕನಸಿದೆ’ ಎನ್ನುವುದು ರಚೆಲ್ ಮಾತು.
“ನಾನು ಬಣ್ಣದ ಬದುಕಿಗೆ ಈಗಷ್ಟೇ ಕಾಲಿಟ್ಟಿದ್ದೇನೆ. ಈ ಅವಧಿ ನನಗೆ ಅನೇಕ ಅನುಭವಗಳನ್ನು ತಂದುಕೊಟ್ಟಿದೆ. ನಾನೊಬ್ಬಳು ನಟಿಯಾಗಬೇಕು ಎಂದು ಇಲ್ಲಿಗೆ ಬಂದಾಗಿನಿಂದ ಎಲ್ಲರೂ ಸಹಕಾರ ನೀಡುತ್ತ ಬಂದಿದ್ದಾರೆ. ಈ ಮೂರು ವರ್ಷಗಳು ಸಾಕಷ್ಟು ಒಳ್ಳೆಯ ಅನುಭವಗಳನ್ನು ಕೊಟ್ಟಿವೆ. ಪ್ರತಿದಿನ ಹೊಸದೇನಾದ್ರೂ ಕಲಿಯುತ್ತಿದ್ದೀನಿ. ಮೊದಲು ಚಿತ್ರರಂಗ ಹೊಸದಾಗಿದ್ದರಿಂದ, ಚಿತ್ರಗಳ ಆಯ್ಕೆ, ಪಾತ್ರಗಳ ಆಯ್ಕೆ ಬಗ್ಗೆ ನನಗೆ ಸ್ಪಷ್ಟತೆಯಿರಲಿಲ್ಲ. ಈಗ ಆ ಬಗ್ಗೆ ಒಂದಷ್ಟು ಅನುಭವ ಸಿಕ್ಕಿದೆ. ಚಿತ್ರಗಳ ಕಥೆ, ಪಾತ್ರಗಳ ಆಯ್ಕೆ, ಅದಕ್ಕೆ ತಯಾರಿ ಹೇಗಿರಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿಕೊಳ್ಳುತ್ತೇನೆ.’ ಎನ್ನಲು ರಚೆಲ್ ಮರೆಯುವುದಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.