ಅದ್ಧೂರಿಯಾಗಿ ಸೆಟ್ಟೇರಿದ ಸತ್ಯಪ್ರಕಾಶ್ ರ ‘ಮ್ಯಾನ್ ಆಫ್ ದಿ ಮ್ಯಾಚ್’
Team Udayavani, Mar 21, 2021, 8:15 AM IST
ಕನ್ನಡ ಚಿತ್ರರಂಗಕ್ಕೆ “ರಾಮಾ ರಾಮಾ ರೇ’ ಮತ್ತು “ಒಂಲ್ಲಾ ಎರಡಲ್ಲಾ’ದಂತಹ ಅಪರೂಪದ ಸಿನಿಮಾಗಳನ್ನು ನೀಡಿದ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯಪ್ರಕಾಶ್ ತಮ್ಮ ಮೂರನೇ ನಿರ್ದೇಶನದ ಸಿನಿಮಾ “ಮ್ಯಾನ್ ಆಫ್ ದಿ ಮ್ಯಾಚ್ ‘ನೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿ ಇದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ, ಡಾಲಿ ಧನಂಜಯ, ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ದೇವರಾಜ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಇದನ್ನೂ ಓದಿ: ಪಂಚಿಂಗ್ ಡೈಲಾಗ್, ಪವರ್ ಫುಲ್ ಫೈಟ್ಸ್ ನ ‘ಯುವರತ್ನ’ ಟ್ರೈಲರ್ ರಿಲೀಸ್
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡಿ. ಸತ್ಯಪ್ರಕಾಶ್, “ಪ್ರತಿದಿನ ಪ್ರತಿಯೊಬ್ಬನಿಗೂ ಒಂದು ಮ್ಯಾಚ್ ಇದ್ದಂತೆ. ಸಂಜೆಯಾಗುತ್ತಲೆ ಅವನು ಗೆದ್ದಿರುತ್ತಾನೆ ಅಥವಾ ಸೋತಿರುತ್ತಾನೆ. ಗೆಲುವು ಸೋಲುಗಳ ಹಗ್ಗಾಜಗ್ಗಾಟದಲ್ಲಿ ಗೆಲ್ಲುವುದು ವ್ಯಕ್ತಿಯೋ ಅಥವಾ ಮೌಲ್ಯಗಳ್ಳೋ ಇಲ್ಲವೇ ಸಂದರ್ಭ-ಸನ್ನಿವೇಶವೋ ಎನ್ನುವುದನ್ನು ಹುಡುಕುತ್ತಾ ಚಿತ್ರ ಸಾಗುತ್ತದೆ. ಇಡೀ ಕಥೆ ಒಂದೇ ದಿನದಲ್ಲಿ ಒಂದೇ ಜಾಗದಲ್ಲಿ ನಡೆಯುತ್ತದೆ’ ಎಂದು ವಿವರಣೆ ನೀಡಿದರು.
ಇನ್ನು “ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಡಿ. ಸತ್ಯಪ್ರಕಾಶ್, “ಸತ್ಯ ಪಿಕ್ಚರ್’ ಎನ್ನುವ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. “ಸತ್ಯ ಪಿಕ್ಚರ್’ ಜೊತೆಗೆ “ಮಯೂರ ಮೋಶನ್ ಪಿಕ್ಚರ್’ನ ನಿರ್ಮಾಪಕರಾದ ಡಿ. ಮಂಜುನಾಥ ಕೂಡ “ಮ್ಯಾನ್ ಆಫ್ ದಿ ಮ್ಯಾಚ್’ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ.
“ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದಲ್ಲಿ “ರಾಮಾ ರಾಮಾ ರೇ..’ ಚಿತ್ರದ ಖ್ಯಾತಿಯ ನಟ ನಟರಾಜ್ ಮತ್ತು ಧರ್ಮಣ್ಣ ಕಡೂರ್ ಜೊತೆಗೆ ಸಾಕಷ್ಟು ಹೊಸ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮದನ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಮತ್ತು ನೊಬಿನ್ ಪೌಲ್ ಸಂಗೀತ ಸಂಯೋಜನೆಯಿದೆ. ಇದೇ ಏಪ್ರಿಲ್ ತಿಂಗಳಿನಿಂದ “ಮ್ಯಾನ್ ಆಫ್ ದಿ ಮ್ಯಾಚ್’ ಶೂಟಿಂಗ್ ಶುರುಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.