
Kannada Cinema; ತೆರೆಗೆ ಸಿದ್ದವಾದ ‘ಮನದರಸಿ’
Team Udayavani, Mar 4, 2024, 4:52 PM IST

ಟಿ.ಎಸ್.ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ “ಮನದರಸಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. “ಮುದ್ದು ಮನದ ಪಿಸು ಮಾತು’ ಎಂಬ ಅಡಿಬರಹವಿದೆ. “ಇದರಲ್ಲಿ ಲವ್ ಇರುವುದಿಲ್ಲ. ಆದರೂ ಪ್ರೇಮವಿದೆ. ಮಾಮೂಲು ಕಾಮಿಡಿ ಅಲ್ಲದಿದ್ದರೂ, ಮನರಂಜನೆ ಕೊಡುತ್ತದೆ. ಯಕ್ಷನ್ ಇಲ್ಲದಿದ್ದರೂ ಹೊಡೆದಾಟದ ದೃಶ್ಯಗಳು ಇರಲಿದೆ. ಇತ್ತೀಚೆಗೆ ಬರುತ್ತಿರವ ಸಿನಿಮಾಗಳ ಪೈಕಿ ವಿಭಿನ್ನ ಅಂತ ಹೇಳಬಹುದು. ಆದರ್ಶ ಪ್ರೇಮಿಗಳು ನೋಡಲೇಬೇಕಾದ ಚಿತ್ರ’ ಎನ್ನುವುದು ಚಿತ್ರತಂಡದ ಮಾತು.
“ಸಾರಿಕಣೇ’, “ಧೂಳಿಪಟ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರೂಪೇಶ್.ಡಿ.ರಾಜ್ ನಾಯಕ. ಅಲ್ಲದೇ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಪ್ರೀತು ಪೂಜಾ, ಸುಹಾನಗೌಡ, ಚುಂಬಿತ ನಾಯಕಿಯರು. ಇವರೊಂದಿಗೆ ಮೀಸೆ ಆಂಜನಪ್ಪ, ಅಂಜಲಿ, ಶ್ವೇತಾ ಮುಂತಾದವರು ನಟಿಸಿದ್ದಾರೆ.
ನಾಲ್ಕು ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ ಇರಲಿದೆ. ಬೆಂಗಳೂರು, ಮಂಗಳೂರು, ಕನಕಪುರ, ತುಮಕೂರು, ಕೋಲಾರ, ಹೊನ್ನಾವರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.