ಮಾರಾಟಕ್ಕಿಟ್ಟಿರೋ ಮನೆಯಲ್ಲಿ ದೆವ್ವವಿದೆಯಂತೆ!
Team Udayavani, Nov 14, 2019, 7:40 PM IST
ಕನ್ನಡ ಚಿತ್ರರಂಗದಲ್ಲಿ ಹಾರರ್ ಜಾನರಿನ ಚಿತ್ರಗಳಿಗೆ ಬಹು ಬೇಡಿಕೆ ಇದೆ. ಇಂಥಾ ಹಾರರ್ ಸಿನಿಮಾ ನೋಡೋ ಕ್ರೇಜ್ ಅಂತೂ ಎಲ್ಲ ವರ್ಗಗಳ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ. ಇದರೊಂದಿಗೆ ಕಾಮಿಡಿ ಕಚಗುಳಿ ಇದ್ದರಂತೂ ಆ ಗೆಲುವಿಗೆ ಬೇರೆಯದ್ದೇ ಓಘವಿರುತ್ತದೆ. ಈ ಹಿಂದೆ ಕೆಲವೇ ಕೆಲ ಕಾಮಿಡಿ ಕಂ ಹಾರರ್ ಚಿತ್ರಗಳು ತೆರೆ ಕಂಡಿವೆ. ಭಾರೀ ಗೆಲುವನ್ನೂ ದಾಖಲಿಸಿವೆ. ಮತ್ತೆ ಇಂಥಾ ಸಿನಿಮಾವೊಂದನ್ನು ಕಣ್ತುಂಬಿಕೊಳ್ಳಲು ದೊಡ್ಡದೊಂದು ಪ್ರೇಕ್ಷಕ ವರ್ಗ ಕಾದು ಕೂತಿರುವಾಗಲೇ ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರ ತೆರೆಗಾಣಲು ರೆಡಿಯಾಗಿದೆ. ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ ಈ ವಾರವೇ ರಾಜ್ಯಾದ್ಯಂತ ತೆರೆಗಾಣಲಿದೆ.
ಎಸ್.ವಿ ಬಾಬು ನಿರ್ಮಾಣದಲ್ಲಿ ಮೂಡಿ ಬಂದಿರೋ ಮನೆ ಮಾರಾಟಕ್ಕಿದೆ ಚಿತ್ರ ಟ್ರೇಲರ್ ಮೂಲಕವೇ ಹಾರರ್ ಸ್ವರೂಪದಲ್ಲಿ ಬೆಚ್ಚಿ ಬೀಳಿಸುತ್ತಾ ಕಾಮಿಡಿ ಕಿಕ್‌ನೊಂದಿಗೆ ಕಚಗುಳಿ ಇಟ್ಟಿದೆ. ಕೆಲವೇ ಕೆಲ ನಿಮಿಷಗಳ ಟ್ರೇಲರ್ ಇಷ್ಟೊಂದು ಚೆನ್ನಾಗಿರುವಾಗ ಇಡೀ ಚಿತ್ರ ಇನ್ನೆಷ್ಟು ಮಜವಾಗಿರ ಬಹುದೆಂಬ ಕ್ಯೂರಿಯಾಸಿಟಿಯಂತೂ ಎಲ್ಲ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ. ಇದುವೇ ಈ ಸಿನಿಮಾದ ಅಸಲೀ ಶಕ್ತಿ. ಅದುವೇ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದು ಗ್ರ್ಯಾಂಡ್ ಓಪನಿಂಗ್ ಸಿಗೋ ಭರವಸೆ ಚಿತ್ರತಂಡದಲ್ಲಿದೆ.
ಮಾರಾಟಕ್ಕಿಟ್ಟಿರೋ ಮನೆಯೊಳಗೆ ಭಯಾನಕ ದೆವ್ವಗಳಿರುವಂತೆಯೇ ಅದರೊಳಗೇ ಕಾಮಿಡಿ ನಟರ ದಂಡೂ ಇದೆ. ಕನ್ನಡ ಚಿತ್ರರಂಗದ ದಿಗ್ಗಜ ಹಾಸ್ಯ ಕಲಾವಿದರೆಲ್ಲ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ಸಾಧು ಕೋಕಿಲಾ, ಕುರಿ ಪ್ರತಾಪ್, ಚಿಕ್ಕಣ್ಣ, ರವಿಶಂಕರ್ ಗೌಡ ವಿಶಿಷ್ಟವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರೆಲ್ಲ ಬೇರೆ ಬೇರೆ ಸಿನಿಮಾಗಳಲ್ಲಿ ಒಂದಷ್ಟು ಸೀನುಗಳಲ್ಲಿ ಸುಳಿದು ಹೋದರೂ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಆರಂಭದಿಂದ ಕ್ಲೈಮಾಕ್ಸ್ ವರೆಗೂ ಈ ಕಲಾವಿದರು ನಗಿಸಲಿದ್ದಾರೆ. ಹಾಗಿದ್ದ ಮೇಲೆ ಭೂತ ಚೇಷ್ಟೆಯ ಈ ಸಿನಿಮಾದಲ್ಲಿ ಭರಪೂರ ಕಾಮಿಡಿ ಇದೆ ಎಂದೇ ಅರ್ಥ. ಅದೆಲ್ಲವೂ ಈವಾರವೇ ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.