ಮನೋರಂಜನ್ ಹೊಸ ಚಿತ್ರ ಪ್ರಾರಂಭ
Team Udayavani, Dec 11, 2018, 11:55 AM IST
ಮನೋರಂಜನ್ ರವಿಚಂದ್ರನ್ “ಸಾಹೇಬ’, “ಬೃಹಸ್ಪತಿ’ ನಂತರ ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಪ್ರಶ್ನೆಗೆ “ಚಿಲಂ’ ಚಿತ್ರ ಉತ್ತರವಾಗಿತ್ತು. ಅವರೀಗ ಮತ್ತೂಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಪ್ರಾರಂಭ’ ಎಂಬ ಹೆಸರಿಡಲಾಗಿದೆ. ಈ ಹಿಂದೆ ಒಂದಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಮನು ಕಲ್ಯಾಡಿ ಅವರು ಈ ಚಿತ್ರದ ನಿರ್ದೇಶಕರು. ಇದು ಅವರ ಮೊದಲ ನಿರ್ದೇಶನದ ಚಿತ್ರ.
ಇನ್ನು, ಅವರ ಸಹೋದರ ಜಗದೀಶ್ ಕಲ್ಯಾಡಿ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. “ಪ್ರಾರಂಭ’ ಚಿತ್ರಕ್ಕೆ ಜನವರಿ 14 ರಿಂದ ಚಾಲನೆ ಸಿಗಲಿದೆ. ಇದೊಂದು ಪಕ್ಕಾ ಲವ್‌ಸ್ಟೋರಿ ಚಿತ್ರ. ಆದರೂ, ಈಗಿನ ಟ್ರೆಂಡ್‌ಗೆ ತಕ್ಕಂತೆ ಇರುವ ಕಥೆ ಹೆಣೆದು, ವಿಭಿನ್ನ ನಿರೂಪಣೆಯೊಂದಿಗೆ “ಪ್ರಾರಂಭಿ’ಸುತ್ತಿರುವುದಾಗಿ ಹೇಳುತ್ತಾರೆ ಮನು. “ಮನೋರಂಜನ್ ಅವರಿಲ್ಲಿ ಹೊಸ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಕಷ್ಟು ಹೊಸತನ ಚಿತ್ರದಲ್ಲಿದೆ.
ಎರಡು ಭರ್ಜರಿ ಫೈಟ್ಸ್‌ಗಳಿದ್ದು, ಸಂಭಾಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಮಾತುಗಳಲ್ಲಿ ಫೊರ್ಸ್ ಇರಲಿದ್ದು, ಮಾಸ್ ಮತ್ತು ಕ್ಲಾಸ್ ಜನರಿಗೆ ಇಷ್ಟವಾಗುವಂತಹ ಮಾತುಗಳನ್ನು ಪೋಣಿಸಲಾಗಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಮನೋರಂಜನ್ ಅವರಿಗೆ ಕೀರ್ತಿ ಎಂಬ ಹೊಸ ಹುಡುಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಹುಬ್ಬಳ್ಳಿ ಹುಡುಗಿಯಾಗಿರುವ ಕೀರ್ತಿ ಅವರಿಗೂ ಇದು ಮೊದಲ ಚಿತ್ರ.
ಸುಮಾರು 55 ದಿನಗಳ ಕಾಲ ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಹಾಗು ಬಳ್ಳಾರಿ ಸೇರಿದಂತೆ ಇತರೆ ಕಡೆ ಚಿತ್ರೀಕರಣ ನಡೆಸುವ ಯೋಚನೆ ಇದೆ’ ಎಂದು ವಿವರ ಕೊಡುತ್ತಾರೆ ಮನು ಕಲ್ಯಾಡಿ. ಚಿತ್ರದಲ್ಲಿ ಶ್ರೀನಿವಾಸಪ್ರಭು, ಕಡ್ಡಿಪುಡಿ ಚಂದ್ರ ಸೇರಿದಂತೆ ದೊಡ್ಡ ಕಲಾವಿದರ ದಂಡು ಕಾಣಿಸಿಕೊಳ್ಳಲಿದೆ. ಈ ಹಿಂದೆ “ಉಪ್ಪು ಹುಳಿ ಖಾರ’ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರಜ್ವಲ್ ಪೈ ಅವರು ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದು,
ನಾಲ್ಕು ಹಾಡುಗಳಿಗೆ ಸಂತೋಷ್ ನಾಯಕ್ ಅವರು ಗೀತೆ ರಚಿಸುತ್ತಿದ್ದಾರೆ. ಸುರೇಶ್ ಬಾಬು ಅವರಿಲ್ಲಿ ಛಾಯಾಗ್ರಹಣ ಮಾಡಲಿದ್ದಾರೆ. ವಿಜಯ್ ಎಂ.ಕುಮಾರ್ ಸಂಕಲನ ಮಾಡಿದರೆ, ರವಿ ಸಂತೆಹೈಕ್ಲು ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಅಂದಹಾಗೆ, ಡಿ.11 (ಇಂದು) ಮನೋರಂಜನ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ “ಪ್ರಾರಂಭ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.