Sandalwood: ಸಂಗೀತಮಯ ದೂರ ತೀರಯಾನ
Team Udayavani, Oct 23, 2024, 7:34 PM IST
“ದೂರ ತೀರ ಯಾನ’ ಹೀಗೊಂದು ಸಿನಿಮಾ ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಈಗ ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ದೇವರಾಜ್ ಆರ್ ನಿರ್ಮಾಣದ “ದೂರ ತೀರ ಯಾನ’ ಈ ಚಿತ್ರವನ್ನು ಮಂಸೋರೆ ನಿರ್ದೇಶಿಸುತ್ತಿದ್ದಾರೆ.
ಚಿತ್ರತಂಡ ಹೇಳಿಕೊಂಡಂತೆ ಇದು ಹೊಸ ತಲೆಮಾರಿನ ಸಂಗೀತಮಯ ಪ್ರೇಮಕಥೆ.
ಈ ಸಿನಿಮಾದ ಮುಖ್ಯಪಾತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣ, ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ, ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಅವರ ಗೀತ ಸಾಹಿತ್ಯ, ನಾಗೇಂದ್ರ ಕೆ ಉಜ್ಜನಿ ಸಂಕಲನ, ಸರವಣ ಅವರ ಕಲಾ ನಿರ್ದೇಶನ ಹಾಗೂ ವಿವಿಡ್ ಐ ನಿರ್ಮಾಣ ವಿನ್ಯಾಸದ ಹೊಣೆ ಈ ಸಿನಿಮಾಕ್ಕಿದೆ.
ಈ ಸಿನಿಮಾದಲ್ಲಿ ಮುಖ್ಯವಾದ ವಿಶೇಷ ಪಾತ್ರಗಳಲ್ಲಿ ಹಲವರು ಪ್ರಮುಖ ನಟಿ-ನಟರು ನಟಿಸಿದ್ದಾರೆ. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ – ಹುಡುಗಿ ಹೊಸ ರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು ಎನ್ನುವುದು ನಿರ್ದೇಶಕರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Grammys: ಎಲ್ಲರ ಮುಂದೆ ಖಾಸಗಿ ಅಂಗ ಕಾಣುವ ಬಟ್ಟೆ ಹಾಕಿಕೊಂಡು ಬಂದ ಖ್ಯಾತ ಮಾಡೆಲ್
Hunasuru: ಹುಲಿ ದಾಳಿಗೆ ಬಲಿಯಾದ ದೇವಸ್ಥಾನದ ಬಸವ… ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ
Wedding: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಲಗ್ನ!
Bribery Case: ದಾವಣಗೆರೆ ಪ್ರೊಫೆಸರ್ ಸೇರಿ 10 ಮಂದಿ ಸಿಬಿಐ ಬಲೆಗೆ
Naxal Surrender: ಶರಣಾದ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ