ಬೋಲ್ಡ್ ಲುಕ್‌ನಲ್ಲಿ ಮಾನ್ವಿತಾ
Team Udayavani, Jan 6, 2019, 6:03 AM IST
ಮಾನ್ವಿತಾ ಸಖತ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಹೊಸ ಫೋಟೋಶೂಟ್‌ನಲ್ಲಿ. ಹೌದು, ಮಾನ್ವಿತಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸಖತ್ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಕೆಂಡಸಂಪಿಗೆ’ ಚಿತ್ರದ ಮೂಲಕ ಬೆಳಕಿಗೆ ಬಂದ ಮಾನ್ವಿತಾ ಆ ನಂತರ “ಟಗರು’ ಚಿತ್ರದ ಪುನರ್ವಸು ಪಾತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡರು.
ಈಗ ಮಾನ್ವಿತಾ “ದಾರಿ ತಪ್ಪಿದ ಮಗ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾ ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಲ್ “ದಾರಿ ತಪ್ಪಿದ ಮಗ’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಧೀರೇನ್ ಈ ಚಿತ್ರದ ಮೂಲಕ ನಾಯಕರಾಗಿ ಲಾಂಚ್ ಆಗುತ್ತಿದ್ದಾರೆ. ಸದ್ಯ ಮಾನ್ವಿತಾ ಈ ಚಿತ್ರಕ್ಕಾಗಿ ಅಣಿಯಾಗಿದ್ದು, ಜನವರಿ 15ರಿಂದ ಚಿತ್ರೀಕರಣ ಆರಂಭವಾಗಲಿದೆ. ಹೊಸ ವರ್ಷದಲ್ಲಿ ಮಾನ್ವಿತಾ ನಟಿಸಿರುವ ಮೂರು ಚಿತ್ರಗಳು ಬಿಡುಗಡೆಯಾಗಲಿವೆ.
“ರಿಲ್ಯಾಕ್ಸ್ ಸತ್ಯ’, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ ಹಾಗೂ “ದಾರಿ ತಪ್ಪಿದ ಮಗ’ ಚಿತ್ರಗಳು ಈ ವರ್ಷ ತೆರೆಕಾಣಲಿವೆ. ಜೊತೆಗೆ ಮರಾಠಿ ಸಿನಿಮಾವೊಂದರಲ್ಲೂ ಮಾನ್ವಿತಾ ನಟಿಸುತ್ತಿದ್ದು, ಆ ಚಿತ್ರ ಕೂಡಾ ಈ ವರ್ಷವೇ ತೆರೆಕಾಣುವ ಸಾಧ್ಯತೆ ಇದೆ. ಇನ್ನು, ಹೊಸ ವರ್ಷದಲ್ಲಿ ಮಾನ್ವಿತಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರಿದ್ದು, ಸ್ಕ್ರಿಪ್ಟ್ ಬರೆಯಲು ಮುಂದಾಗಿದ್ದಾರಂತೆ. ಸದ್ಯ ಮಾನ್ವಿತಾ ಅವರ ಗ್ಲಾಮರಸ್ ಫೋಟೋಸ್ ಮೂಲಕ ಮಿಂಚುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.