‘ಮರೆಯದೇ ಕ್ಷಮಿಸು’…ಹಾಡಿನ ಸಾಲು ಟೈಟಲ್ ಆಯ್ತು!
Team Udayavani, Aug 13, 2021, 3:10 PM IST
“ಮರೆಯದೆ ಕ್ಷಮಿಸು…’ಈ ಹಾಡನ್ನು ನೀವು ಕೇಳಿರುತ್ತೀರಿ. “ಕೆಂಡಸಂಪಿಗೆ’ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿದ್ದ ಹಾಡು ಇದು. ಈಗ ಇದೇ ಹಾಡು ಸಿನಿಮಾ ಟೈಟಲ್ ಆಗಿದೆ. ಹೊಸಬರ ತಂಡವೊಂದು “ಮರೆಯದೆ ಕ್ಷಮಿಸು’ ಎಂಬ ಟೈಟಲ್‌ನಡಿ ಸಿನಿಮಾವೊಂದನ್ನು ಮಾಡಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.
ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು. ನಟಶ್ರೀನಗರ ಕಿಟ್ಟಿಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ರಿಲೀಸ್ ಮಾಡಿದರು. ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್, ವೆಂಕಟೇಶ್ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದೊಂದು ಪ್ರೇಮಕಥೆ ಆಧಾರಿತ ಚಿತ್ರ.ಈ ಚಿತ್ರದಲ್ಲಿ ನಾಯಕ ಗಾರೆ ಕೆಲಸ ಮಾಡುತ್ತಿರುತ್ತಾನೆ. ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯಿಂದ ಏನೇನಾಗುತ್ತದೆ ಎಂಬುದೆ ಚಿತ್ರದ ಕಥಾ ಸಾರಾಂಶ. ರಾಘವ್ ಈ ಚಿತ್ರದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಅವರು, “ನಿರ್ಮಾಪಕರು, ನಾನು ನಲವತ್ತು ವರ್ಷಗಳ ಸ್ನೇಹಿತರು. ನಮ್ಮ ಸ್ನೇಹಕ್ಕಾಗಿಈ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರೆ ತಪ್ಪಾಗಲಾರದು’ ಎಂಬುದು ಅವರ ಮಾತು.
ಇದನ್ನೂ ಓದಿ:ನಟಿ ರಾಧಿಕಾ ‘ಇಂಟಿಮೇಟ್’ ಫೋಟೋ ವಿರುದ್ಧ ನೆಟ್ಟಿಗರು ಆಕ್ರೋಶ : ಬಹಿಷ್ಕಾರಕ್ಕೆ ಆಗ್ರಹ
ಚಿತ್ರದ ನಾಯಕ ಪ್ರಮೋದ್ ಬೋಪ್ಪಣ್ಣ ಮಾತನಾಡಿ, “ಈಚಿತ್ರದಲ್ಲಿ ನಾಯಕ- ನಾಯಕಿಯ ಪ್ರೇಮ, ತಾಯಿ- ಮಗನ ಬಾಂಧವ್ಯ ಹಾಗೂ ಎಲ್ಲಕ್ಕೂ ಮಿಗಿಲಾಗಿ ಉತ್ತಮ ಮನರಂಜನೆಯಿದೆ’ ಎಂದರು.
ನಾಯಕಿ ಮೇಫನಾ ಗೌಡ ಹಾಗೂ ಚಿತ್ರದಲ್ಲಿ ನಟಿಸಿರುವ ಮಿಮಿಕ್ರಿ ಗೋಪಿ ತಮ್ಮ ಪಾತ್ರದಬಗ್ಗೆವಿವರಣೆ ನೀಡಿದರು. ಚಿತ್ರಕ್ಕೆ ಆರನ್ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. “ನಾನು ಚಿತ್ರ ನಿರ್ಮಾಣ ಮಾಡಬೇಕೆಂದು ಎಂದಿಗೂ ಅಂದು ಕೊಂಡಿರಲಿಲ್ಲ. ಸ್ನೇಹಿತ ರಾಘವ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ’ ಎಂಬುದು ನಿರ್ಮಾಪಕ ಶಿವರಾಂ ಅವರ ಮಾತು. ಕೆ.ರಾಘವ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆಬರೆದು, ಗೀತರಚನೆ ಮಾಡಿದ್ದಾರೆ. ರಿಷಿಕೇಶ್ ಈ ಚಿತ್ರದ ಛಾಯಾಗ್ರಹಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.