ಮಾಸ್ ಲೀಡರ್ 3 ಡಿ ಗೇಮ್
Team Udayavani, Aug 17, 2017, 10:41 AM IST
ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಚಿತ್ರದ 3 ಡಿ ಗೇಮ್ ಬಿಡುಗಡೆಯಾಗಿದೆ. ಈಗ ಕನ್ನಡ ಸಿನಿಮಾಗಳಿಗೂ ಅಂಥದ್ದೊಂದು ಹೊಸ ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನರನ್ನು ತಲುಪಿಸುವ ಉದ್ದೇಶದಿಂದ ಇನ್‌ಪ್ಯಾಂಟ್ ಸ್ಟುಡಿಯೋಸ್ ಸಂಸ್ಥಾಪಕ ಡೇವಿಡ್ ಅವರು, ಕನ್ನಡ ಚಿತ್ರಗಳಿಗೆ ಗೇಮ್ ನಿರ್ಮಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದಲೂ ಚಿತ್ರರಂಗದ ಜೊತೆ ಒಡನಾಟವಿರುವ ಅವರು, ಶಿವರಾಜಕುಮಾರ್ ಅವರ ಅಭಿಮಾನಿಯೂ ಹೌದು. ಇತ್ತೀಚೆಗೆ ರಿಲೀಸ್ ಆದ “ಮಾಸ್ ಲೀಡರ್’ ಚಿತ್ರಕ್ಕೆ ಗೇಮ್‌ವೊಂದನ್ನು ನಿರ್ಮಿಸಿದ್ದಾರೆ. ಚಿತ್ರದ ಕಥೆಗೆ ಹೊಂದುವಂತೆ, ಭಯೋತ್ಪಾದಕರನ್ನು ಬೆನ್ನಟ್ಟಿ, ಸಂಹಾರ ಮಾಡುವಂತಹ ಸವಾಲಿನೊಂದಿಗೆ ಸಾಹಸಭರಿತ ಹಂತಗಳನ್ನಿಟ್ಟು, ಆಡುವವರ ಕೌಶಲ್ಯ ನೈಪುಣ್ಯತೆಗನುಸಾರ ಅಂಕ ಗಳಿಕೆಯಾಗಿ 3 ಡಿ ಗೇಮ್ ಆಸಕ್ತಿ ಮೂಡಿಸುವಂತಿದೆ.
ಇನ್ನು, ಈ ಗೇಮ್ ವಿನ್ಯಾಸ ಮಾಡಿದ್ದು ಪವನ್. ಅವರಿಗೆ ಸಂತೋಷ್, ಅಶೋಕ್‌ರೆಡ್ಡಿ, ಓಂಕಾರ್ ವಂತಹ ಭರಿತ ರ ರ ಅಂಕ ಮಾಸ್ ಲೀಡರ್ 3 ಡಿ ಗೇಮ್ ಸಾಥ್ ನೀಡಿದ್ದಾರೆ. ಅಂದಹಾಗೆ, ಇತ್ತೀಚೆಗೆ 3 ಡಿ ಗೇಮ್ ಬಿಡುಗಡೆಗೊಳಿಸಿದ ಶಿವರಾಜ್‌ಕುಮಾರ್, “ಕನ್ನಡ ಚಿತ್ರದ ಪ್ರಚಾರ ತಂತ್ರಜ್ಞಾನದ ಶ್ರೀಮಂತಿಕೆಯನ್ನು ಅತ್ಯುತ್ತಮ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ’ ಎಂದಿದ್ದಾರೆ.
ನಿರ್ಮಾಪಕ ತರುಣ್ ಶಿವಪ್ಪಅವರು ಗೇಮ್ ಬಿಡುಗಡೆಗೊಳಿಸಲು ಸಹಕರಿಸಿದ್ದಲ್ಲದೆ, ಪ್ರಶಂಸಿಸಿದ್ದಾರೆ. “ಮಾಸ್ ಲೀಡರ್’ ಗೇಮ್ ಅನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇಸ್ಟೋರ್ ಆ್ಯಪ್‌ನಲ್ಲಿ ಅಂಡ್ರೋಯ್ಡ ಮೊಬೈಲ್ ಬಳಕೆದಾರರು leader srk (ಲೀಡರ್ ಎಸ್‌ಆರ್‌ಕೆ) ಎಂದು ಟೈಪ್ ಮಾಡಿದರೆ, ಶಿವರಾಜ್‌ಕುಮಾರ್ ಮುಖ ಬಿಂಬದ ಛಾಯೆ ತೆರೆಯಲ್ಲಿ ಮೂಡಲಿದೆ. ಅದನ್ನು ಕ್ಲಿಕ್ ಮಾಡಿದರೆ ಮೊಬೈಲ್‌ನಲ್ಲಿ ಸ್ಟೋರ್ ಆಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.